ಆನೇಕಲ್:ಸಿನಿಮಾಗಳಲ್ಲಿ ಯಾರಿಂದಾದರೂ ತಪ್ಪಿಸಿಕೊಳ್ಳಲು 4ನೇ, 5ನೇ ಮಹಡಿಗಳಿಂದ ಹಾರುವುದು ತೀರಾ ಸಾಮಾನ್ಯ. ಈ ಭೂಪ, ಆ ಸೀನ್ ಗಳನ್ನು ನಿಜವೆಂದು ನಂಬಿದ್ದನೋ ಗೊತ್ತಿಲ್ಲ. ಆದರೆ ಆತ, ಪೊಲೀಸರಿಂದ ತಪ್ಪಿಸಿಕೊಳ್ಳಲು ಮೊದಲನೇ ಮಹಡಿಯಿಂದ ಪಕ್ಕಾ ಸಿನಿಮಾ ಸ್ಟೈಲ್ಅಲ್ಲಿ ಹಾರಿದ್ದಾನೆ. ಮುಂದೆ ನಡೆದದ್ದೇ ದುರಂತ.
ಈ ವಿಚಿತ್ರ ಘಟನೆ ಬೆಂಗಳೂರು ಹೊರ ವಲಯ ಆನೇಕಲ್ ನ ಸಾರ್ವಜನಿಕ ಆಸ್ಪತ್ರೆಯಲ್ಲಿ ನೆನ್ನೆ ಬೆಳಗ್ಗೆ 11 ಗಂಟೆಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎರಡು ವರ್ಷದ ಹಿಂದಿನ ರಾಬರಿ ಪ್ರಕರಣದಲ್ಲಿ ವಾರೆಂಟ್ ನೀಡಲಾಗಿತ್ತು. ಈ ಹಿನ್ನೆಲೆ ಚೇತನ್ ಎಂಬುವನನ್ನು ಆನೇಕಲ್ ಪೊಲೀಸರು ಅರೆಸ್ಟ್ ಮಾಡಿದ್ದರು. ಬಂಧನದ ನಂತರ ಆತನ ಾರೋಗ್ಯ ತಪಾಸಣೆಗಾಗಿ ಎಂದು ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು.
ಈ ಸಂದರ್ಭ ಈ ಕಿಲಾಡಿ ಚೇತನ್, ಸಮಯ ನೋಡಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡು ಆಸ್ಪತ್ರೆಯ ಒಳಗೆ ನುಗ್ಗಿದ್ದಾನೆ. ಚೇತನ್, ಸಿನಿಮೀಯ ರೀತಿಯಲ್ಲಿ ಮೊದಲನೇ ಮಹಡಿಯ ಆಪರೇಷನ್ ಥಿಯೇಟರ್ ಒಳಗಿನಿಂದ ಗಾಜುಗಳನ್ನು ಒಡೆದು ಕಿಟಕಿಯಿಂದ ಹಾರಿದ್ದಾನೆ. ಈ ಸಂದರ್ಭ ಆತ ನೇರವಾಗಿ ಕೆಳಗೆ ಬಿದ್ದಿದ್ದು ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ತಕ್ಷಣಗಾಯಗೊಂಡಿರುವ ಚೇತನ್ಅನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂದರ್ಭ ಸರಿಯಾದ ಭದ್ರತೆ ನೀಡದೆ ಆನೇಕಲ್ ಪೊಲೀಸರು ನಿರ್ಲಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೇವಲ ಒಬ್ಬ ಸಿಬ್ಬಂದಿಯನ್ನು ಆರೋಪಿಯ ಜೊತೆ ಕಳುಹಿಸಿ ಬೇಜವಾಬ್ದಾರಿ ಮಾಡಲಾಗಿದೆ ಎನ್ನಲಾಗಿದೆ. ಈ ಪ್ರಕರಣದಿಂದಾಗಿ ಪೊಲೀಸರ ಭದ್ರತೆಯ ಕುರಿತು ಎಲ್ಲೆಡೆ ಚರ್ಚೆ ಶುರುವಾಗಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × one =
Remember me
