ಚಾಮರಾಜನಗರ:ಕರೊನಾ ಹಾಟ್ ಸ್ಪಾಟ್ ತಮಿಳುನಾಡಿನ‌ ಸೇಲಂಗೆ ಈರುಳ್ಳಿ ಮಾರಲು ಕಳೆದ ಏಳು ದಿನಗಳಲ್ಲಿ ಮೂರು ಬಾರಿ ತೆರಳಿದ್ದ ಗುಂಡ್ಲುಪೇಟೆಯ ವಾಹನ ಚಾಲಕನಿಗೆ ಕರೊನಾ ವೈರಸ್ ತಗುಲಿರುವುದು ಖಚಿತವಾಗಿದೆ‌.
ಗುಂಡ್ಲುಪೇಟೆ ಪಟ್ಟಣದ ಮಹದೇವಪ್ರಸಾದ್ ನಗರದ ವ್ಯಕ್ತಿ (39) ಜೂ. 16ರಂದು ತಮಿಳುನಾಡಿನ ಸೆಲಂಗೆ ಹೋಗಿ ಬಂದಿದ್ದ ಜೂ.18ರಂದು ಗಂಟಲು ನೋವು, ಶೀತ, ಕೆಮ್ಮು ಕಾಣಿಸಿಕೊಂಡಿದ್ದ ಹಿನ್ನೆಲೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈ ವೇಳೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಜೂ.19ರಂದು ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಸೀಲ್ ಡೌನ್:ಮಹದೇವಪ್ರಸಾದ್ ನಗರದ ವ್ಯಕ್ತಿಗೆ ಕರೊನಾ ಸೋಂಕು ತಗುಲಿರುವ ಹಿನ್ನೆಲೆ ಬಡಾವಣೆಯ ಬೀದಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 100 ಕಿ.ಮೀ ವ್ಯಾಪ್ತಿಯನ್ನು ಬಫರ್ ಜೋನ್ ಮಾಡಲಾಗಿದೆ. ಸೋಂಕಿತ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರನ್ನು(ಸೋಂಕಿತನ ಪತ್ನಿ, ತಾಯಿ, ಮೂವರು ಮಕ್ಕಳು, ತಮ್ಮ-ತಮ್ಮನ ಹೆಂಡತಿ, ಮೂವರು ಮಕ್ಕಳು) ಅವರ ಮನೆಗಳಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಹಸು, ಗಂಗಾ, ಗೀತೆ ಇವುಗಳು ಭಾರತದ ಐಡೆಂಟಿಟಿ
ಇದಲ್ಲದೆ ಸೋಂಕಿತ ಪಟ್ಟಣದ ಅಂಗಡಿಗೆ ಟೀ ಕುಡಿಯಲು ಹೋಗಿದ್ದ. ಅನಾರೋಗ್ಯದ ನಿಮಿತ್ತ ತಾಲೂಕು ಆಸ್ಪತ್ರೆಗೆ ತೆರಳುವ ಹೋಗುವ ಮುನ್ನ ಇಲ್ಲಿನ ಖಾಸಗಿ ಆಸ್ಪತ್ರೆಗೂ ಹೋಗಿದ್ದ. ಈತನನ್ನು ತಪಾಸಣೆ ಮಾಡಿದ್ದ ವೈದ್ಯರನ್ನು ಕ್ವಾರಂಟೈನ್ ಗೊಳಪಡಿಸಲು ತೀರ್ಮಾಸಲಾಗಿದೆ ಎಂದು ಹೇಳಿದರು. ಎಸ್ಪಿ ಆನಂದ್ ಕುಮಾರ್ ಇದ್ದರು.
ಮಹಾಮಾರಿಯನ್ನೇ ಮೈಮೇಲೆ ಎಳ್ಕೊಂಡ್ರು ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eight =
Remember me
