ಹಾವೇರಿ:ಹಬ್ಬ ನೋಡಲೆಂದು ಹೋದ ವ್ಯಕ್ತಿಯೊಬ್ಬ ಸಾವಿಗೀಡಾದ ಪ್ರಸಂಗವೊಂದು ನಡೆದಿದೆ. ಕೊಬ್ಬರಿ ಹೋರಿ ತಿವಿದ ಪರಿಣಾಮವಾಗಿ ವ್ಯಕ್ತಿ ಸಾವಿಗೀಡಾಗಿದ್ದಾನೆ. ಹಾವೇರಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸುರು ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಹಬ್ಬದಲ್ಲಿ ಈ ಅವಘಡ ಸಂಭವಿಸಿದೆ. ಸಂಗೂರಿನ ಯುವಕ ಮಂಜುನಾಥ ಮೈಲಾರಪ್ಪ ಚಳ್ಳಕ್ಕನವರ (29) ಸಾವಿಗೀಡಾದ ವ್ಯಕ್ತಿ.
ಹೋರಿ ಬೆದರಿಸುವ ಹಬ್ಬ ನೋಡಲೆಂದು ಹೋಗಿ ನಿಂತಿದ್ದ. ಆಗ ಜೋರಾಗಿ ಓಡಿ ಬಂದಿದ್ದ ಹೋರಿ ಈತನ ಎಡ ಪಕ್ಕೆಗೆ ಬಲವಾಗಿ ತಿವಿದಿತ್ತು. ತಿವಿತದ ತೀವ್ರತೆಗೆ ಈತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಒಬ್ಬ ಸಾವಿಗೀಡಾದ್ದಷ್ಟೇ ಅಲ್ಲದೆ ಹೋರಿಹಬ್ಬ ನೋಡಲು ಬಂದಿದ್ದ ಇತರ 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಾದ ಶಿವಪ್ಪ ಲಮಾಣಿ ಕಬ್ಬೂರು, ಕುಮಾರ ಮಲ್ಲಪ್ಪ ಕಮ್ಮಾರ, ಸೋಮಣ್ಣ ಬಸಪ್ಪ ಬಿಳಗ್ಲಿ, ಪ್ರಶಾಂತ ರಮೇಶ ಮುಡಿ ಕಂಚಿನೆಗಳೂರು, ವಿರೂಪಾಕ್ಷ ಮುತ್ತಳ್ಳಿ, ಹೊನ್ನಪ್ಪ ಬಸಪ್ಪ ಕುರಬರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!

‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

ಮೇಲಿಂದ ಮೇಲೆ ಸಂಭವಿಸುತ್ತಲೇ ಇದೆ ಹೃದಯಾಘಾತ; ಇಂದು ಮತ್ತೊಂದು ಪ್ರಕರಣ, ವಿಚಾರಣಾಧೀನ ಕೈದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
