ಬೆಂಗಳೂರು:ಜಮೀನು ವ್ಯಾಜ್ಯ ಸರಿಪಡಿಸುವುದಾಗಿ ಸಿಸಿಬಿ ಇನ್‌ಸ್ಪೆಕ್ಟರ್ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ 10 ಲಕ್ಷ ರೂ. ಪಡೆದು ವಂಚಿಸಿದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಜಯನಗರದ ನಿವಾಸಿ ವೆಂಕಟೇಶ್ ಬಂಧಿತ. ಜೆಪಿ ನಗರ ನಿವಾಸಿ ನಾರಾಯಣ್ (88) ಕೊಟ್ಟ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ವೆಂಕಟೇಶ್‌ನ್ನು ಬಂಧಿಸಿದ್ದಾರೆ.
ದೂರುದಾರ ನಾರಾಯಣ್ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ತಾವರೆಕೆರೆ ಹೋಬಳಿ ನರಸಿಂಹಪುರ ಗ್ರಾಮದಲ್ಲಿ 11 ಎಕರೆ 20 ಗುಂಟೆ ಜಮೀನನ್ನು 2015ರಲ್ಲಿ ಕಂಚನಮಾಲ ಎಂಬುವವರಿಂದ ಖರೀದಿಸಿದ್ದರು. ಈ ಆಸ್ತಿಯ ವಿಚಾರವಾಗಿ ನಾರಾಯಣ್ ಹಾಗೂ ಖಾಸಗಿ ಕಂಪನಿಯೊಂದರ ನಡುವೆ ಜಮೀನು ವ್ಯಾಜ್ಯ ಇತ್ತು. 2017 ಆ.1ರಂದು ಅಪರಿಚಿತ ವ್ಯಕ್ತಿಯೊಬ್ಬ ನಾರಾಯಣ್‌ನ್ನು ಸಂಪರ್ಕಿಸಿ ಜಯನಗರದ ಹೋಟೆಲ್‌ವೊಂದಕ್ಕೆ ಕರೆಯಿಸಿ ತಮ್ಮನ್ನು ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಎಂದು ಪರಿಚಯಿಸಿಕೊಂಡಿದ್ದ. ನೀವು ಖರೀದಿಸಿರುವ ಜಮೀನಿನ ವಿಚಾರವಾಗಿ ವಿಚಾರಣೆ ಮಾಡುತ್ತಿದ್ದು, ಮೋಸದಿಂದ ಆಸ್ತಿಯನ್ನು ಖರೀದಿಸಿದ್ದೀರಿ ಎಂದು ಬೆದರಿಸಿ ಪೊಲೀಸರು ಬಳಸುವ ಕೋಳವನ್ನು ತೋರಿಸಿದ್ದ. 15 ಲಕ್ಷ ರೂ. ಲಂಚ ಕೊಡದಿದ್ದರೆ ಬಂಧಿಸುವುದಾಗಿ ಹೇಳಿದ್ದ. ಇದರಿಂದ ಆತಂಕಗೊಂಡ ನಾರಾಯಣ್ ಸ್ಥಳದಲ್ಲೇ 50 ಸಾವಿರ ರೂ. ಕೊಟ್ಟು 10 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದರು.
ಆರೋಪಿ ಬಣ್ಣ ಬಯಲು:ಹಂತ-ಹಂತವಾಗಿ ಶ್ರೀನಿವಾಸ್ ಸೂಚಿಸಿದ ಬ್ಯಾಂಕ್ ಖಾತೆಗೆ ನಾರಾಯಣ್ ಆರ್‌ಟಿಜಿಎಸ್ ಮೂಲಕ 10 ಲಕ್ಷ ರೂ. ಕಳುಹಿಸಿದ್ದರು. ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಕೇಸ್ ಕ್ಲೋಸ್ ಮಾಡುವುದಾಗಿ ಆರೋಪಿ ಹೇಳಿದ್ದ. ಇತ್ತೀಚೆಗೆ ನಾರಾಯಣ್ ಸಿಸಿಬಿ ಕಚೇರಿಗೆ ಹೋಗಿ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಬಗ್ಗೆ ವಿಚಾರಿಸಿದಾಗ ನೀವು ಹೇಳಿದ ವ್ಯಕ್ತಿ ಇಲ್ಲಿ ಯಾರೂ ಇಲ್ಲ ಎಂದು ಹೇಳಿದ್ದರು. ಅನುಮಾನಗೊಂಡ ನಾರಾಯಣ್ ತಾವು ಹಣ ಕೊಟ್ಟ ವ್ಯಕ್ತಿಯ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಆತನ ಹೆಸರು ವೆಂಕಟೇಶ್ ಎಂಬುದು ಗೊತ್ತಾಗಿದೆ. ಇದಾದ ಬಳಿಕ ತಾವು ಮೋಸ ಹೋಗಿರುವುದನ್ನು ಅರಿತ ನಾರಾಯಣ್ ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
‘ಐ ವಿಲ್ ಕಿಲ್ ಯು’ ಎಂದು ಬೆದರಿಸಿ ಪೊಲೀಸರ ಕೊಲೆಗೆ ಯತ್ನಿಸಿದ್ದ ಘಾನಾ ಪ್ರಜೆ ಉತ್ತರ ಪ್ರದೇಶದಲ್ಲಿ ಸೆರೆ

ಮೈತ್ರಿ ಮಾಡಿಕೊಂಡಾದರೂ ಬಿಜೆಪಿಯನ್ನ ಸೋಲಿಸುತ್ತೇವೆ; ಯೋಗಿ ನಾಡಿನಲ್ಲಿ ಪ್ರಿಯಾಂಕಾ ವಾದ್ರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 5 =
Remember me
