ಕಲಬುರಗಿ:ಮಾರುಕಟ್ಟೆ ಪ್ರದೇಶದಲ್ಲಿ ಅದೂ ರಸ್ತೆ ಮೇಲೆ ಜನರೆಲ್ಲರ ಮಧ್ಯೆ ಮಾರಕಾಸ್ತ್ರ ಝಳಪಿಸಿದ್ದಲ್ಲದೆ ಸ್ಥಳಕ್ಕೆ ಧಾವಿಸಿದ ಪೊಲೀಸರ ಎದುರೇ ದಾದಾಗಿರಿ ತೋರಿದವನನ್ನು ಕೊನೆಗೆ ಪೊಲೀಸರು ಶೂಟ್ ಮಾಡಿ ಬೆಂಡೆತ್ತಿದ ಪ್ರಸಂಗವೊಂದು ನಡೆದಿದೆ.
ಕಲಬುರಗಿಯ ಸೂಪರ್​ ಮಾರುಕಟ್ಟೆ ಪ್ರದೇಶದಲ್ಲಿ ಇಂದು ಈ ಘಟನೆ ನಡೆದಿದೆ. ಪ್ಯಾಂಟ್​-ಬನಿಯನ್ ತೊಟ್ಟು ಮಾರಕಾಸ್ತ್ರ ಹಿಡಿದು ಸುಮಾರು ಒಂದು ಗಂಟೆಯಿಂದ ಜನರಲ್ಲಿ ಭೀತಿ ಹುಟ್ಟಿಸಿದ್ದ ಆರೋಪಿಯನ್ನು ವಶಕ್ಕೆ ಪಡೆಯಲು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.
ಹಾಗೆ ಬಂದ ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದರೂ ಆತ ಕ್ಯಾರೇ ಎಂದಿರಲಿಲ್ಲ. ಪೊಲೀಸರು ಬುದ್ಧಿಮಾತು ಹೇಳಿದರು ಅವರ ವಿರುದ್ಧವೇ ಮಾರಕಾಸ್ತ್ರವನ್ನು ಝಳಪಿಸಿ, ದಾದಾಗಿರಿ ತೋರಿದ್ದ. ಕೊನೆಗೆ ಪೊಲೀಸರು ವಿಧಿ ಇಲ್ಲದೆ ಅವನತ್ತ ಗುಂಡು ಹಾರಿಸಿದ್ದಲ್ಲದೆ, ಕಾಲಿಗೆ ಗುಂಡು ಹೊಡೆದಿದ್ದಾರೆ.
ಪೊಲೀಸರ ಮೇಲೆ ದಾಳಿ ಮಾಡಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಪಿಎಸ್​ಐ ವಾಹಿದ್ ಕೊತ್ವಾಲ್ ಅವರು ಆರೋಪಿಯ ಕಾಲಿಗೆ ಮೂರು ಗುಂಡು ಹಾರಿಸಿದ್ದ. ಆಗ ಬಿದ್ದ ಆತನ ಮೇಲೆ ಇತರ ಪೊಲೀಸರು ಲಾಠಿ ಬೀಸಿ ಬೆಂಡೆತ್ತಿದ್ದು, ಬಳಿಕ ವಶಕ್ಕೆ ಪಡೆದು ಚಿಕಿತ್ಸೆ ನೀಡಲಾಗಿದೆ. ಆರೋಪಿ ಅಬ್ದುಲ್ ಜಾಫರ್ ಎಂದು ಗುರುತಿಸಲಾಗಿದ್ದು, ಆತ ಯಾಕೆ ಹೀಗೆ ವರ್ತಿಸಿದ್ದ ಎನ್ನುವ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಪ್ರಿಯತಮನ ಮರೆಯಲು ಅರಿವಳಿಕೆಯ ಮೊರೆಹೋದ ನರ್ಸ್; ಆಮೇಲಾಗಿದ್ದೇನು?
ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 5 =
Remember me
