ಬೆಂಗಳೂರು:ಮರ್ಸಿಡೀಸ್​ ಬೆಂಜ್​ ಎಂಬ ಐಷಾರಾಮಿ ಕಾರಿನ ಆಕರ್ಷಣೆಯೇ ಅಂತದ್ದು. ಸೆಕೆಂಡ್​ ಹ್ಯಾಂಡ್​ ಆದರೂ ಪರವಾಗಿಲ್ಲ… ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತೆ ಎಂದರೆ, ಒಂದು ಕೈ ನೋಡಿಯೇ ಬಿಡೋಣ ಎಂದು ಎಂಥವರಾದರೂ ಧೈರ್ಯ ಮಾಡಿಬಿಡುತ್ತಾರೆ. ಅಂಥದ್ದರಲ್ಲಿ 2 ಲಕ್ಷ ರೂ.ಗೆ ಮರ್ಸಿಡೀಸ್​ ಬೆಂಜ್​ ಕಾರು ಸಿಗುತ್ತೆ ಎಂದರೆ ಬಿಡುವುದು ಉಂಟೆ?
ವಾಣಿಜ್ಯೋದ್ಯಮಿ ಖಲೀಲ್​ ಶರೀಫ್​ ಎಂಬುವರು ಸೆಕೆಂಡ್​ ಹ್ಯಾಂಡ್​ ಮರ್ಸಿಡೀಸ್​ ಬೆಂಜ್ ಕಾರು ಖರೀದಿಸಲು ನಿರ್ಧರಿಸಿದರು. ಇಂಥ ಕಾರನ್ನು ಹುಡುಕಿಕೊಂಡ ಹೊರಟ ಅವರಿಗೆ ಜೀವನ್​ ಭಿಮಾ ನಗರದ ಕಾರು ಗ್ಯಾರೇಜ್​ ಒಂದರಲ್ಲಿ ಗ್ಯಾರೇಜ್​ನ ಮಾಲೀಕನ ಸಂಬಂಧಿಯೊಬ್ಬನ ಪರಿಚಯವಾಗಿತ್ತು. ದಸ್ತಗೀರ್​ ಎಂದು ತನ್ನನ್ನು ಪರಿಚಯಿಸಿಕೊಂಡ ಆತ 2 ರಿಂದ 2.25 ಲಕ್ಷ ರೂ.ಗೆಲ್ಲ ಕಾರು ಕೊಡಿಸುವುದಾಗಿ ನಂಬಿಸಿದ.
ಅದರ ಮರುದಿನವೇ 2006ರ ಮಾಡೆಲ್​ ಕಾರು ಮಾರಾಟಕ್ಕಿದೆ. ಅದಕ್ಕೆ 2.25 ಲಕ್ಷ ರೂ. ಹೇಳುತ್ತಿದ್ದಾರೆ ಎಂದು ತಿಳಿಸಿದ. ಸಾಕಷ್ಟು ಹಗ್ಗಜಗ್ಗಾಟ ನಡೆಸಿದ ಬಳಿಕ 2 ಲಕ್ಷ ರೂ.ಗೆ ಕೊಡಿಸಲು ಒಪ್ಪಿಕೊಂಡ. ಅದರಂತೆ ತನ್ನ ಗೂಗಲ್​ಪೇ ಖಾತೆ ಖಲೀಲ್​ ಶರೀಫ್​ ಅವರಿಂದ ಮುಂಗಡದ ರೂಪವಾಗಿ 78 ಸಾವಿರ ರೂ. ನಗದನ್ನು ವರ್ಗಾಯಿಸಿಕೊಂಡ.
ಇದನ್ನೂ ಓದಿ:ಹೃದಯಚಿಕಿತ್ಸೆಗೆ ಒಳಗಾಗಿದ್ದ ಅತ್ತೆಯ ಆರೈಕೆ ಮಾಡಿದ್ದಕ್ಕೆ ಪತಿ ಕೊಟ್ಟ ಬಳುವಳಿ ಕೇಳಿದರೆ ಶಾಕ್​ ಆಗುತ್ತೀರ!
ಎರಡು ದಿನಗಳಲ್ಲಿ ಕಾರು ತಂದುಕೊಡುವುದಾಗಿ ಹೇಳಿದ ದಸ್ತಗೀರ್​ ಬರಲೇ ಇಲ್ಲ. ಆತನ ಮೊಬೈಲ್​ಫೋನ್​ಗೆ ಕರೆ ಮಾಡಿದರೆ ಅದು ಸ್ವಿಚ್​ಆಫ್​ ಆಗಿರುವುದು ಗೊತ್ತಾಯಿತು. ಆದರೆ, ಅಷ್ಟರಲ್ಲೇ ಕೋವಿಡ್​-19 ಲಾಕ್​ಡೌನ್​ ಜಾರಿಯಾಗಿದ್ದರಿಂದ, ಖಲೀಲ್​ ಕೂಡ ಈ ಬಗ್ಗೆ ತಲೆಕಡಿಸಿಕೊಳ್ಳದೆ ಸುಮ್ಮನಾಗಿದ್ದರು.ಲಾಕ್​ಡೌನ್​ ತೆರವಾಗಿ ಸಾಕಷ್ಟು ಸಮಯದ ಬಳಿಕ ದಸ್ತಗೀರ್​ನನ್ನು ಹುಡುಕಿಕೊಂಡು ಆತ ಪರಿಚಯವಾಗಿದ್ದ ಜೀವನ್​ ಭಿಮಾ ನಗರದ ಕಾರು ಗ್ಯಾರೇಜ್​ಗೆ ತೆರಳಿದಾಗ ಖಲೀಲ್​ ಅವರಿಗೆ ತಾವು ಮೋಸ ಹೋಗಿರುವ ವಿಷಯ ಗೊತ್ತಾಗಿದೆ.
ದಸ್ತಗೀರ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ಕೊಡಲು ಹೋದಾಗ ಇದೇ ರೀತಿ ನಂಬಿಸಿ ಆತ ಇದುವರೆಗೂ​ 30 ಜನರನ್ನು ವಂಚಿಸಿರುವ ವಿಷಯ ಖಲೀಲ್​ ಅವರಿಗೆ ಗೊತ್ತಾಗಿದೆ. ಆದರೂ ಅವರು, ಆತನ ವಿರುದ್ಧ ದೂರು ದಾಖಲಿಸಿ ಬಂದಿದ್ದಾರೆ.
ತನ್ನವರಿಂದಲೇ ಚೀನಾಕ್ಕೆ ಮುಖಂಭಂಗ- ಟಿಕ್‌ಟಾಕ್‌ ಬ್ಯಾನ್‌ಗೆ ಹಾಂಗ್‌ಕಾಂಗ್‌ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + eighteen =
Remember me
