ಬೆಂಗಳೂರು:ಕೋವಿಡ್​ 19 ಲಾಕ್​ಡೌನ್​ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಕಷ್ಟ ತಂದಿದೆ. ಕೆಲವರಿಗೆ ಔಷಧ ತರಲು ಸಾಧ್ಯವಾಗದಿದ್ದರೆ, ಹಲವರಿಗೆ ಬೇರೆ ಊರುಗಳಲ್ಲಿರುವ ಪಾಲಕರನ್ನು ಭೇಟಿಯಾಗಲಾರದ ಸಂಕಟ ಕಾಡುತ್ತಿದೆ. ಆದರೆ, ನಗರದ ಈ ವ್ಯಕ್ತಿಯ ಸಂಕಟ ತುಂಬಾ ವಿಶಿಷ್ಟವಾಗಿದೆ. ಈತ ಎರಡು ಮದುವೆಯಾಗಿರುವುದು ಇದಕ್ಕೆ ಕಾರಣ.
ಸಿದ್ಧ ಉಡುಪುಗಳ ಉದ್ದಿಮೆ ಹೊಂದಿರುವ ಉಮೇಶ್​ (ಹೆಸರು ಬದಲಿಸಲಾಗಿದೆ) ಮೊದಲಿಗೆ ಸುಧಾ (ಹೆಸರು ಬದಲಿಸಲಾಗಿದೆ) ಎಂಬುವರನ್ನು ಮದುವೆಯಾಗಿದ್ದರು. ಇವರಿಬ್ಬರ ದಾಂಪತ್ಯದಿಂದ ಒಂದು ಗಂಡು ಮಗು ಕೂಡ ಜನಿಸಿತು. ಆದರೆ, ಉಮೇಶ್​ಗೆ ನಿಧಿ (ಹೆಸರು ಬದಲಿಸಲಾಗಿದೆ) ಎಂಬಾಕೆಯಲ್ಲಿ ಅನುರಾಗ ಮೂಡಿತು. ಆಕೆಯನ್ನೂ ಮದುವೆಯಾದ ಉಮೇಶ್​, ಇಬ್ಬರಿಗೂ ಗೊತ್ತಾಗದಂತೆ ಗುಟ್ಟಾಗಿ ಎರಡು ಸಂಸಾರಗಳನ್ನು ತೂಗಿಸಿಕೊಂಡು ಹೋಗುತ್ತಿದ್ದರು.
ಆದರೆ ಅದಾವುದೋ ಅನಿವಾರ್ಯತೆಗೆ ಸಿಲುಕಿದ ಉಮೇಶ್​, ತಾವು ಇನ್ನೊಂದು ಮದುವೆಯಾಗಿರುವ ವಿಷಯವನ್ನು ಸುಧಾಗೆ ತಿಳಿಸಿದರು. ತಕ್ಷಣವೆ ಸುಧಾ ಬೆಂಗಳೂರು ನಗರ ಪೊಲೀಸ್​ ಆಯುಕ್ತರ ಕಚೇರಿಯಲ್ಲಿರುವ ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿದರು. ಆದರೆ, ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯದಂತೆ ನೋಡಿಕೊಂಡ ಉಮೇಶ್​, ಎರಡೂ ಸಂಸಾರವನ್ನು ನಿಭಾಯಿಸುವುದಾಗಿ ಸುಧಾಗೆ ಮನವರಿಕೆ ಮಾಡಿಕೊಟ್ಟರು. ಹಿರಿಯರ ಸಂಧಾನದ ಬಳಿಕ ಒಂದು ವಾರ ಸುಧಾ ಜತೆ ಇನ್ನೊಂದು ವಾರ ನಿಧಿ ಜತೆ ಉಮೇಶ್​ ಸಂಸಾರ ಸಾಗಿಸಬೇಕು ಎಂದು ತೀರ್ಮಾನವಾಯಿತು.
ಅಂತೆಯೇ ಲಾಕ್​ಡೌನ್​ ಘೋಷಣೆಯಾಗುವ ಸಂದರ್ಭದಲ್ಲಿ ಉಮೇಶ್​ ತಮ್ಮ ಎರಡನೇ ಪತ್ನಿ ನಿಧಿ ಮನೆಯಲ್ಲಿದ್ದರು. ಇದೀಗ ಲಾಕ್​ಡೌನ್​ನಿಂದಾಗಿ ಮೊದಲ ಪತ್ನಿಯ ಬಳಿಗೆ ಹೋಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಉಮೇಶ್​ಗೆ ಪದೇಪದೆ ಕರೆ ಮಾಡಿದ ಸುಧಾ, ಮನೆಯಲ್ಲಿ ದಿನಸಿ ಮತ್ತಿತರ ವಸ್ತುಗಳೆಲ್ಲ ಖಾಲಿಯಾಗಿದ್ದು, ತಕ್ಷಣವೇ ಮನೆಗೆ ಬಂದು ಅವೆಲ್ಲವನ್ನೂ ಕೊಡಿಸುವಂತೆ ಪೀಡಿಸಲಾರಂಭಿಸಿದರು. ಲಾಕ್​ಡೌನ್​ ಹಿನ್ನೆಲೆಯಲ್ಲಿ ತನಗೆ ಬರಲಾಗುತ್ತಿಲ್ಲ ಎಂದು ಉಮೇಶ್​ ಅಸಹಾಯಕತೆ ವ್ಯಕ್ತಪಡಿಸಿದರೂ, ಸುಧಾ ಕರೆ ಮಾಡುವನದನ್ನು ನಿಲ್ಲಿಸಲಿಲ್ಲ. ಹೀಗಾಗಿ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿದ ಸುಧಾ ತಮ್ಮ ಪತಿಯನ್ನು ಕೂಡಲೇ ತಮ್ಮ ಬಳಿಗೆ ಕರೆತರುವಂತೆ ಮನವಿ ಮಾಡಿಕೊಂಡರು. ಆದರೆ ಪೊಲೀಸರು ಉಮೇಶ್​ನನ್ನು ಕರೆದೊಯ್ದು ಸುಧಾ ಬಳಿ ಬಿಟ್ಟರೆ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ವಾಸ್ತವಿಕ ಘಟಿಕೋತ್ಸವದ ಸಂತಸ ಕಸಿದ ಕೋವಿಡ್​ 19, ವರ್ಚುಯಲ್​ ಆಗಿ ಪದವಿ ಸ್ವೀಕರಿಸಿದ ಜಪಾನ್​ ಪದವೀಧರರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
