ಬೆಂಗಳೂರು:ಸ್ಯಾಂಡಲ್​​ವುಡ್​ ನಟಿಯೊಬ್ಬರು ತಲೆ ಬೋಳಿಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಈ ಫೋಟೋಗಳು ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಏನಾಯ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇತ್ತೀಚೆಗೆ “ತಿರುಪತಿ ಬೆಟ್ಟಕ್ಕೆ ಭೇಟಿ ನೀಡಿದ್ದ ಗಾಯತ್ರಿ ಅಲ್ಲಿ ಕೂದಲನ್ನು ದೇವರಿಗೆ ಅರ್ಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಗಾಯತ್ರಿ, 10 ವರ್ಷಗಳ ಆಸೆ ಈಗ ಈಡೇರಿದೆ. ಹತ್ತು ವರ್ಷಗಳಿಂದಲೂ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಕೂದಲು ಕೊಡಬೇಕೆಂದು ಹರಕೆ ಹೊತ್ತಿದ್ದೆ, ಈಗ ಅದು ಸಾಧ್ಯವಾಗಿದೆ” ಎಂದಿದ್ದಾರೆ.
A post shared by Gayathri Raguramm (@gayathriraguramm)
ರಾಜಕಾರಣಿ, ನಟಿಯೂ ಆಗಿರುವ ಗಾಯತ್ರಿ ರಘುರಾಮ್ 2002ರಲ್ಲಿ ಬಿಡುಗಡೆ ಆದ ಕನ್ನಡದ ‘ಮನಸೆಲ್ಲಾ ನೀನೆ’ ಸಿನಿಮಾದಲ್ಲಿ ನಾಯಕಿಯಾಗಿ ಈ ಗಾಯತ್ರಿ ರಘುರಾಮ್ ನಟಿಸಿದ್ದರು. ಪ್ರಭುದೇವ ಸಹೋದರ ಪ್ರಸಾದ್ ಈ ಸಿನಿಮಾಕ್ಕೆ ನಾಯಕ. ನಿರ್ದೇಶನ ಮಾಡಿದ್ದು, ಸ್ವತಃ ಮೂಗೂರು ಸುಂದರಂ, ಸಿನಿಮಾವನ್ನು ಅವರೇ ನಿರ್ಮಾಣ ಸಹ ಮಾಡಿದ್ದರು. ಸಿನಿಮಾ ಹಿಟ್ ಎನಿಸಿಕೊಂಡಿತ್ತು.
ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಸಿನಿಮಾದಲ್ಲಿ ಗಾಯತ್ರಿ ರಘುರಾಮ್ ನಟನೆಯನ್ನು ಕನ್ನಡ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ತಮಿಳು ಕೆಲವು ತೆಲುಗು ಸಿನಿಮಾಗಳಲ್ಲಿಯೂ ಗಾಯತ್ರಿ ರಘುರಾಮ್ ನಟಿಸಿದ್ದಾರೆ. ಬಿಗ್​ಬಾಸ್ ಸ್ಪರ್ಧಿಯಾಗಿಯೂ ಗಾಯತ್ರಿ ಭಾಗವಹಿಸಿದ್ದರು. ತಮಿಳುನಾಡು ಬಿಜೆಪಿಯ ಭಾಗವಾದರು. ಆದರೆ ಇತ್ತೀಚೆಗೆ ಪಕ್ಷದ ವರಿಷ್ಠರ ಮೇಲೆ ಅಸಮಾಧಾನ ಹೊರಹಾಕಿ ಪಕ್ಷದಿಂದ ಹೊರನಡೆದರು.
ನಾಗರ ಪಂಚಮಿಯಂದು ನಿಜವಾದ ನಾಗಪ್ಪನಿಗೆ ಪೂಜೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − six =
Remember me
