ಬೆಂಗಳೂರು:ಸಾಮಾನ್ಯವಾಗಿ ಒಂದೆರಡು ವರ್ಷಗಳವರೆಗೆ ಮಕ್ಕಳು ಸಂಬಂಧಿಕರನ್ನು ಗುರುತಿಸುವುದೇ ಕಷ್ಟ. ಹೀಗಿರುವಾಗ 14 ತಿಂಗಳ ಪುಟ್ಟ ಪೋರಿ ತನ್ನ ಗ್ರಹಣಶಕ್ತಿಯಿಂದ ನೂರಾರು ವಿಷಯಗಳನ್ನು ಗುರುತಿಸುವ ಮೂಲಕ ‘ಕಲಾಂ ವರ್ಲ್ಡ್ ರೆಕಾರ್ಡ್ಸ್’ಗೆ ಭಾಜನಳಾಗಿದ್ದಾಳೆ. ಈ ಪುಟಾಣಿ ಹೆಸರು ಮನಸ್ಮಿತ.
ಚಿಕ್ಕಮಗಳೂರು ಜಿಲ್ಲೆಯ ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನ ಆರ್.ಟಿ. ನಗರದಲ್ಲಿ ವಾಸವಿರುವ ಗೃಹಿಣಿ ಡಿ.ಎಂ. ಧನಲಕ್ಷ್ಮೀ ಕುಮಾರಿ ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ. ಹುಲಿಯಪ್ಪಗೌಡ ದಂಪತಿ ಪುತ್ರಿ. ಮನಸ್ಮಿತ ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ ಸೇರಿ 336 ವಿವಿಧ ಚಿತ್ರಗಳನ್ನು (ಗುಂಪಿನಲ್ಲಿ ನಿರ್ದಿಷ್ಟ ಚಿತ್ರ ಗುರುತಿಸುವುದು) ಪತ್ತೆ ಮಾಡುವ ಮೂಲಕ ಅತಿಕಡಿಮೆ ವಯಸ್ಸಿನಲ್ಲಿ ಹೆಚ್ಚು ಮಾಹಿತಿಯ ಗಣಿ ಎನಿಸಿದ್ದಾಳೆ. ಈ ಪುಟ್ಟ ಪೋರಿಯ ಸ್ಮರಣ ಶಕ್ತಿ ಗುರುತಿಸಿರುವ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ಮಾ. 3ರಂದು ಚೆನ್ನೈನ ಟೀಚ್ ಸಭಾಂಗಣದಲ್ಲಿ ವಿಶ್ವದಾಖಲೆಯ ಪ್ರಮಾಣ ಪತ್ರ ನೀಡಿ ಗೌರವಿಸಲಿದೆ.
ಮನಸ್ಮಿತ 9 ತಿಂಗಳಿಗೆ ನಡೆಯಲಾರಂಭಿಸಿದಳು. ಈ ವೇಳೆ ಮನೆಯಲ್ಲಿ ತಾಯಿ ಮತ್ತು ತಂದೆ ಮಾಡುವ ಕೆಲಸಗಳನ್ನು ಅನುಕರಣೆ ಮಾಡಿ ತೋರಿಸುತ್ತಿದ್ದಳು. ಇದರಿಂದ ಪುಳಕಗೊಂಡ ತಾಯಿ ಧನಲಕ್ಷ್ಮೀ ಅವರು ಅಕ್ಷರಗಳು, ಹೆಸರಾಂತ ವ್ಯಕ್ತಿಗಳು, ಪ್ರಾಣಿ- ಪಕ್ಷಿಗಳು, ಹಣ್ಣುಗಳು ಇತ್ಯಾದಿ ಒಳಗೊಂಡ ಫ್ಲ್ಯಾಶ್‌‌‌ ಕಾರ್ಡ್‌ಗಳನ್ನು ತರಿಸಿ ಅವುಗಳ ಹೆಸರು ಹೇಳುತ್ತ ಮಗಳಿಗೆ ತೋರಿಸಲು ಪ್ರಾರಂಭಿಸಿದರು. ಆರಂಭದಲ್ಲಿ ಮಗು ಇದನ್ನು ಗ್ರಹಿಸುತ್ತಿದೆ ಎಂಬುದು ಪೋಷಕರ ಅರಿವಿಗೆ ಬಂದಿರಲಿಲ್ಲ. 11ನೇ ತಿಂಗಳಲ್ಲಿ ಫ್ಲ್ಯಾಶ್‌‌‌ ಕಾರ್ಡ್ ತೋರಿಸಿ ಹೆಸರು ಹೇಳಿದರೆ ಗುರುತಿಸುತ್ತಿದ್ದಳು. ಇದನ್ನು ಕಂಡು ಇದರಲ್ಲಿ ದಾಖಲೆ ಮಾಡಿರುವವರ ಕುರಿತು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದರು.
ಮಗಳ ಸಾಧನೆ ಕುರಿತು ತಾಯಿ ಧನಲಕ್ಷ್ಮೀ, ‘ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಇಂತಹ ಮಕ್ಕಳನ್ನು ಗುರುತಿಸಿ ವಿಶ್ವ ದಾಖಲೆಯಲ್ಲಿ ಹೆಸರು ಸೇರಿಸುತ್ತಿರುವುದು ತಿಳಿದು ನಾವೂ ಪ್ರಯತ್ನ ಮಾಡಿದೆವು. ಸುಮಾರು 400 ವಿವಿಧ ವಸ್ತುಗಳನ್ನು ಗುರುತಿಸುವುದನ್ನು ಹೇಳಿಕೊಟ್ಟಿದ್ದೆ. ಸ್ಪರ್ಧೆ ವೇಳೆ 336 ವಸ್ತುಗಳನ್ನು ಗುರುತಿಸಿ ದಾಖಲೆ ಮಾಡಿದ್ದಾಳೆ. ಇದಕ್ಕೂ ಮೊದಲು 18 ತಿಂಗಳ ಮಗುವೊಂದು 120 ವಸ್ತುಗಳನ್ನು ಗುರುತಿಸಿ ದಾಖಲೆ ಮಾಡಿತ್ತು. ಮಗಳು ಮನಸ್ಮಿತ ಆ ದಾಖಲೆ ಮೀರಿದ್ದಾಳೆ’ ಎಂದು ಸಂತಸ ವ್ಯಕ್ತಪಡಿಸಿದರು.
ಮನಸ್ಮಿತ ಅರಿವಿನ ವಿಸ್ತಾರ:ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹಣ್ಣು, ಧ್ವಜ, ಹೂವು, ಕನ್ನಡ- ಇಂಗ್ಲಿಷ್‌ನಲ್ಲಿ ಸಂಖ್ಯೆಗಳು, 17 ಬಗೆಯ ಹಣ್ಣು ಮತ್ತು 26 ತರಕಾರಿ, 25 ಪಕ್ಷಿ, 27 ಪ್ರಾಣಿ, 12 ಕೀಟ ಮತ್ತು 5 ಸರಿಸೃಪ, 10 ಸ್ವಾತಂತ್ರ್ಯ ಹೋರಾಟಗಾರರು, 11 ಸಮುದ್ರ ಜೀವಿಗಳು, 7 ದೇಶದ ಧ್ವಜಗಳು, ಭಾರತದಲ್ಲಿನ 7 ಐತಿಹಾಸಿಕ ಸ್ಥಳ, 10 ಹೂಗಳು, 7 ಬಗೆಯ ರೂ. ನೋಟುಗಳು, 10 ಬಣ್ಣ ಮತ್ತು 14 ಆಕಾರಗಳು, 7 ಆಟಿಕೆಗಳು, 11 ಸಸ್ಯ ಮತ್ತು 5 ಎಲೆಗಳು, 19 ದೇಹದ ಭಾಗಗಳು, 7 ವಿಜ್ಞಾನಿಗಳು, 336 ವಿವಿಧ ವಸ್ತುಗಳು, 500 ಪದಗಳು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
