ಮಂಡ್ಯ:ಬಂಡೂರು ತಳಿಯ ಟಗರನ್ನು ರೈತರೊಬ್ಬರು 1 ಲಕ್ಷದ ಹತ್ತು ಸಾವಿರಕ್ಕೆ ಖರೀದಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಹುಚ್ಚೇಗೌಡನದೊಡ್ಡಿ ಗ್ರಾಮದ ಮರಿಗೌಡ ಎಂಬವರು ಸುಮಾರು 1.10 ಲಕ್ಷ ರೂ. ಮೌಲ್ಯದ ಬಂಡೂರು ತಳಿಯ ಟಗರು ಖರೀದಿಸಿದ್ದು, ಹುಸ್ಕೂರು ಗ್ರಾಮಸ್ಥರು ಮೆರವಣಿಗೆ ಮಾಡಿದ್ದಾರೆ.

1.10 ಲಕ್ಷ ರೂ. ಮೌಲ್ಯದ ಬಂಡೂರು ತಳಿಯ ಟಗರನ್ನು ಹುಚ್ಚೇಗೌಡನ ದೊಡ್ಡಿಯ ಗ್ರಾಮದ ರೈತ ಮರಿಗೌಡ ಖರೀದಿ ಮಾಡಿದ್ದರು. ಅದನ್ನು ನೋಡಲು ಗ್ರಾಮಸ್ಥರು ಜಮಾವಣೆಗೊಂಡಿದ್ದರು. ಆಗ ಹುಸ್ಕೂರು ಗ್ರಾಮ ದಲ್ಲಿ ಮೆರವಣಿಗೆ ನಡೆಸಿ ನಂತರ ಹುಚ್ಚೇಗೌಡನ ದೊಡ್ಡಿಗೆ ಕರೆದೊಯ್ಯಲಾಯಿತು.

ಹುಚ್ಚೇಗೌಡನದೊಡ್ಡಿ ಗ್ರಾಮದ ಮರೀಗೌಡ ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುವುದರ ಜತೆಗೆ ಟಗರು ತಂದು ಕಸಿ ಮಾಡುವ ಕಾಯಕ ಮಾಡಿಕೊಂಡಿದ್ದಾರೆ. ಅದರಂತೆ ಭಾನುವಾರ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮಕ್ಕೆ ತೆರಳಿ ಅಲ್ಲಿ ಬಂಡೂರು ತಳಿಯ ಟಗರನ್ನು 1.10 ಲಕ್ಷ ರೂ.ಗೆ ಖರೀದಿ ಮಾಡಿ ಸ್ವಗ್ರಾಮಕ್ಕೆ ಹೋಗುವುದಕ್ಕಾಗಿ ಹುಸ್ಕೂರು ಗ್ರಾಮಕ್ಕೆ ಬಂದಾಗ ಸ್ಥಳೀಯ ಗ್ರಾಮಸ್ಥರು, ಸ್ವಗ್ರಾಮದವರ ಜತೆ ಸೇರಿ ಮೆರವಣಿಗೆ ನಡೆಸಿದರು.

ತಮಟೆ ವಾದ್ಯಗಳೊಂದಿಗೆ ಟಗರು ಗ್ರಾಮಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಹೂವಿನ ಹಾರ ಹಾಕಿ, ವಿಶೇಷ ಪೂಜೆ ಸಲ್ಲಿಸಿ ಟಗರು ಸ್ವಾಗತಿಸಿದ ಗ್ರಾಮಸ್ಥರು. ಹುಸ್ಕೂರು, ಅಪ್ಪಾಜಯ್ಯನದೊಡ್ಡಿ, ಬಾಣಗಹಳ್ಳಿ, ಅಂತರವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ನೂರಾರು ಮಂದಿ ದುಬಾರಿ ಬೆಲೆಯೆ ಟಗರನ್ನು ಕುತೂಹಲದಿಂದ ನೋಡಿ ಕಣ್ತುಂಬಿಕೊಂಡಿದ್ದಾರೆ.
ಪ್ರೀತಿಸಿದ ಯುವತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
