ಹಾವೇರಿ:86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುತ್ತಿದ್ದು, ಮುಂದಿನ ಸಮ್ಮೇಳನ ಎಲ್ಲಿ ನಡೆಯುತ್ತಿದೆ ಎಂಬ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಭಾರಿ ಕುತೂಹಲ ಮೂಡಿಸಿದ್ದ ಕಾರ್ಯಕಾರಿ ಸಮಿತಿ ಸಭೆಯ ಅಂತಿಮ ನಿರ್ಣಯ ಕೊನೆಗೂ ಹೊರಬಿದ್ದಿದ್ದು, ಮಂಡ್ಯದಲ್ಲಿ 87ನೇ ಸಮ್ಮೇಳನ ನಡೆಸುವುದಾಗಿ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಘೋಷಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಸೇರಿದಂತೆ ಒಟ್ಟು 9 ಜಿಲ್ಲೆಗಳು ಸಾಹಿತ್ಯ ಸಮ್ಮೇಳನ ನಡೆಸುವ ಬೇಡಿಕೆ ಇಟ್ಟಿದ್ದವು. ಒಟ್ಟು 46 ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದರು. 17 ಮತಗಳು ಮಂಡ್ಯ ಜಿಲ್ಲೆಗೆ ಬಂತು. ಬಳ್ಳಾರಿ ಜಿಲ್ಲೆಗೆ 16 ಮತಗಳು ಬಂದವು. ಉತ್ತರ ಕನ್ನಡ ಜಿಲ್ಲೆಗೆ ಒಂದೂ ಮತ ಬರಲಿಲ್ಲ. 17 ಮತಗಳಿಂದ ಮಂಡ್ಯ ಮೊದಲ ಸ್ಥಾನದಲ್ಲಿದೆ. ಹಾಗಾಗಿ, ಮಂಡ್ಯದಲ್ಲಿ 87ನೇ ಸಾಹಿತ್ಯ ಸಮ್ಮೇಳನ ನಡೆಸುತ್ತೇವೆ ಎಂದು ಜೋಶಿ ಹೇಳಿದರು.
ಅತ್ಯಂತ ಯಶಸ್ವಿಯಾಗಿರುವ ಸಮ್ಮೇಳನ ಇದಾಗಿದೆ. ಸಣ್ಣಪುಟ್ಟ ನೂನ್ಯತೆಗಳು ಆಗಿವೆ. ತೊಂದರೆ ಆದವರಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮುಂದೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇವೆ. ಮಾಧ್ಯಮಗಳು ಅತ್ಯುತ್ತಮ ವರದಿ ಪ್ರಕಟಿಸಿದ್ದಾರೆ, ಬಿತ್ತರಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದರು.
ನಾ.ಡಿಸೋಜಾ ಅವರಿಗೆ ಪಾಸ್ ಸಿಕ್ಕಿಲ್ಲ. ಅದಕ್ಕಾಗಿ ವಾಪಸ್ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ, ಕಸಾಪ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತದೆ. ನಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ, ಹುಡುಕಾಡಿದ್ದೇವೆ. ಆದರೆ, ನೆಟ್ವರ್ಕ್ ಸಮಸ್ಯೆಯಿಂದ ಅವರು ಸಿಗಲಿಲ್ಲ ಎಂದರು.
ಎಲ್ಲರೂ ಸಹಕಾರ ಕೊಡುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಮುಂದಿನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ನೀಡಿದ್ದಾರೆ. ಅದಕ್ಕಾಗಿ ಎಲ್ಲರಿಗೆ ಧನ್ಯವಾದಗಳು ಎಂದು ಕಸಾಪ ಮಂಡ್ಯ ಜಿಲ್ಲಾಧ್ಯಕ್ಷ ರವಿಕುಮಾರ ಚಾಮಲಾಪುರ ಹೇಳಿದರು.
ಉಡುಪಿಯಲ್ಲೊಂದು ನಿಜ ಕಾಂತಾರ? ಕೋಲ ನಡೆಯುವಾಗಲೇ ಸಾವು! ಕೋರ್ಟ್ ಮೆಟ್ಟಿಲೇರಿದವನ ತೀರ್ಮಾನ ದೈವ ಮಾಡಿತೇ!

ಸ್ಯಾಂಟ್ರೋ ರವಿ ‘ಪಿಂಪ್’ ಮಾತ್ರವಲ್ಲ… ಬಗೆದಷ್ಟೂ ಬಯಲಾಗ್ತಿದೆ ಈತನ ಕರಾಳ ಮುಖ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
