ಬೆಂಗಳೂರು:‘ಪತ್ನಿಗೆ ಹಣದಾಹ ಹೆಚ್ಚು. ಎಷ್ಟು ದುಡಿದರೂ ಆಕೆಗೆ ಇನ್ನಷ್ಟು ಹಣಬೇಕಾಗಿತ್ತು. ಜೀವನದಲ್ಲಿ ನೆಮ್ಮದಿಯೇ ಇಲ್ಲ. ಜೀವನದಲ್ಲಿ ಇಂತಹ ಹೆಂಗಸು ನನಗೆ ಬೇಡ. ಮಗನೇ ನಿಮ್ಮ ಅಮ್ಮ ಸರಿಯಿಲ್ಲ. ಆಕೆ ಜತೆ ಇರಬೇಡ…’ ಎಂದು ಡೆತ್​ನೋಟ್​ ಬರೆದಿಟ್ಟು ವ್ಯಕ್ತಿಯೊಬ್ಬ ಸಾವಿನ ಮನೆಯ ಕದ ತಟ್ಟಿರುವ ಘಟನೆ ಹನುಮಂತನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪತ್ನಿಯ ಹಣದಾಹಕ್ಕೆ ಮನನೊಂದ ಪತಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಹೆಸರು ಅಣ್ಣಯ್ಯ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಣ್ಣಯ್ಯ ಮತ್ತು ಉಮಾ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಮಗ ಇದ್ದಾನೆ. ಅಣ್ಣಯ್ಯ ಬನಶಂಕರಿಯ ಬಾರ್​ವೊಂದರಲ್ಲಿ ಕ್ಯಾಶಿಯರ್​ ಆಗಿದ್ದ. ಉಮಾ ಮನೆಯಲ್ಲೇ ಇರುತ್ತಿದ್ದರು. ದಂಪತಿ ಶ್ರೀನಿವಾಸನಗರದಲ್ಲಿ ವಾಸವಾಗಿದ್ದರು.
ಈ ಮಧ್ಯೆ ಪತ್ನಿ ಉಮಾ ಹೆಚ್ಚಿನ ಹಣಕ್ಕಾಗಿ ಪತಿ ಅಣ್ಣಯ್ಯಗೆ ಪೀಡಿಸುತ್ತಿದ್ದಳು. ಅದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಇದರಿಂದ ಬೇಸತ್ತ ಅಣ್ಣಯ್ಯ ಡೆತ್​ನೋಟ್​ ಬರೆದಿಟ್ಟು ಮನೆಯಲ್ಲಿ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಣ್ಣಯ್ಯ ಬರೆದ ಡೆತ್​ನೋಟ್​ ವೈರಲ್​ ಆಗಿದೆ. ‘ಜೀವನದಲ್ಲಿ ನನಗೆ ನೆಮ್ಮದಿಯೇ ಇಲ್ಲ. ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣ. ಏಕೆಂದರೆ ಅವಳಿಗೆ ದುಡ್ಡೇ ಮುಖ್ಯ. ನಾನು ಏನೇ ಕೆಲಸ ಮಾಡಿದರೂ ನನ್ನ ಹೆಂಡತಿಗೆ ಇಷ್ಟ ಇಲ್ಲ. ಆದರೂ ಅವಳಿಗೆ ದುಡ್ಡು ಬೇಕು. ಎಷ್ಟು ದುಡಿದರೂ ಆಕೆಗೆ ಇನ್ನಷ್ಟು ಹಣಬೇಕಾಗಿತ್ತು. ದೇವರೇ ಇಂತಹ ಹೆಂಗಸು ನನಗೆ ಬೇಡ. ಯಾವ ಹುಡುಗರಿಗೂ ಇಂತಹ ಹೆಂಡತಿ ಸಿಗೋದು ಬೇಡ. ಜೀವನದಲ್ಲಿ ಇಂತಹ ಹೆಂಗಸು ನನಗೆ ಬೇಡ. ಮಗನೇ ನಿಮ್ಮ ಅಮ್ಮ ಸರಿಯಿಲ್ಲ. ಆಕೆ ಜತೆ ಇರಬೇಡ… ಮಿಸ್​ ಯೂ ಮಗನೇ’ ಎಂದು ಅಣ್ಣಯ್ಯ ಡೆತ್​ನೋಟ್​ ಬರೆದಿದ್ದಾರೆ.
ಮಿಷನ್ 123 ಜೆಡಿಎಸ್ ಗುರಿ, 126 ಕ್ಷೇತ್ರ ಗಂಭೀರ ಪರಿಗಣನೆ: ಪಕ್ಷ ಸಂಘಟನೆಗೆ ಪ್ರತಿ ಬೂತ್​ನಲ್ಲಿ 22 ಕಾರ್ಯಕರ್ತರ ತಂಡ ರಚನೆ

ಹುತ್ರಿದುರ್ಗ ಬೆಟ್ಟದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಯುವಕ-ಯುವತಿಯ ಬಟ್ಟೆ ಬಿಚ್ಚಿ ಕಿರುಕುಳ, ಚಾರಣಿಗರಿಗೆ ಬೆದರಿಕೆ ಹಾಕಿ ದರೋಡೆ…

ಬೆಂಗ್ಳೂರಲ್ಲಿ ವಿಕೃತ ಮನಸ್ಥಿತಿಯ ವೈದ್ಯ ಅರೆಸ್ಟ್​! ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯರ ಖಾಸಗಿ ಅಂಗಗಳ ವಿಡಿಯೋ ಚಿತ್ರೀಕರಿಸುತ್ತಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
