ಮಂಡ್ಯ:ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ಅನ್ನದಾತರ ಪ್ರತಿಭಟನೆ ಇದೀಗ ಬಂದ್​ ಸ್ವರೂಪ ಪಡೆದುಕೊಂಡಿದೆ.
ನೀರು ಹರಿಸುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿರುವುದು ಮತ್ತು ಕಾವೇರಿ ನೀರಿನ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ಇಂದು ಬಂದ್ ಹಮ್ಮಿಕೊಳ್ಳಲಾಗಿದೆ. ರೈತ ಹಾಗೂ ಕನ್ನಡ ಪರ ಸಂಘಟನೆಗಳು ಮಂಡ್ಯ ನಗರ, ಮದ್ದೂರು ಪಟ್ಟಣದಲ್ಲಿ ಬಂದ್​ಗೆ ಕರೆ ಕೊಟ್ಟಿದೆ.
ಬೆಳಗ್ಗೆಯಿಂದ ಸಂಜೆ 6ಗಂಟೆಯವರೆಗೆ ಎರಡೂ ನಗರಗಳು ಸಂಪೂರ್ಣ ಸ್ಥಬ್ದವಾಗಿದೆ. ವರ್ತಕರ ಸಂಘ, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರು, ಆಟೋ ಚಾಲಕರು, ಖಾಸಗಿ ಬಸ್, ಲಾರಿ ಮಾಲೀಕರ ಸಂಘ‌ಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿವೆ. ಬೆಳಗ್ಗೆ 8ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ಈಗಾಗಲೇ ಬಂದ್​ ಲಕ್ಷಣಗಳು ಮಂಡ್ಯದಲ್ಲಿ ಗೋಚರಿಸುತ್ತಿವೆ. ಪ್ರತಿಭಟನಾಕಾರರು ಬಸ್​ಗಳನ್ನು ಅಡ್ಡಹಾಕುತ್ತಿದ್ದು, ಇಂದು ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:15 ಲಕ್ಷ ಬಿಯರ್​ ಬಾಟಲಿಗಳಿಂದ ಬೌದ್ಧ ಮಂದಿರ ನಿರ್ಮಾಣ: ಈ ವಿಸ್ಮಯ ತಾಣದ ಹಿಂದಿದೆ ಸನ್ಯಾಸಿಗಳ ಶ್ರಮ
ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ. ಮತ್ತೊಂದು ತಂಡದಿಂದ ನಗರದ ಹಲವು ರಸ್ತೆಗಳಲ್ಲಿ ಬೈಕ್​ ರ್ಯಾಲಿ ಜರುಗಲಿದೆ. ಅಂಗಡಿ ಮುಂಗಟ್ಟು ಮುಚ್ಚಿ, ಬಂದ್‌ ಬೆಂಬಲಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಲಿದ್ದಾರೆ. ಬಳಿಕ 10ಗಂಟೆಗೆ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ. ರೈತ ಸಂಘ, ಕನ್ನಡ ಪರ ಸಂಘಟನೆಗಳು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಲಿವೆ.
ಮದ್ದೂರಿನಲ್ಲಿ ಬೆಳಿಗ್ಗೆ 9ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ. ಮದ್ದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಬೈಕ್​ ರ್ಯಾಲಿ ನಡೆಯಲಿದೆ. ಬಳಿಕ ಮದ್ದೂರಿನ ಕೊಲ್ಲಿ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಮಂಡ್ಯ ನಗರ ಬಂದ್​ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಅಹಿತಕರ ಘಟನೆಗಳ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಿದೆ. ಎಸ್ಪಿ, ಎಎಸ್ಪಿ, ಮೂವರು ಡಿವೈಎಸ್ಪಿ, ಇನ್ಸ್​ಪೆಕ್ಟರ್, ಸಬ್​ ಇನ್ಸ್​ಪೆಕ್ಟರ್ ಸೇರಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲು ಪ್ಲಾನ್ ಮಾಡಲಾಗಿದೆ. ಪೊಲೀಸರ ಜತೆ 2 ಕೆ.ಎಸ್.ಆರ್.ಪಿ, 3 ಡಿಎಆರ್ ತುಕಡಿ ನಿಯೋಜನೆಗೆ ನಿರ್ಧಾರ ಮಾಡಲಾಗಿದೆ.
ಏನಿರುವುದಿಲ್ಲ ಎಂದು ನೋಡುವುದಾದರೆ, ಆಟೋ, ಖಾಸಗಿ ಬಸ್ ಸಂಚಾರ ಇರುವುದಿಲ್ಲ. ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟು ಬಂದ್ ಆಗಲಿವೆ. ಪೆಟ್ರೋಲ್ ಬಂಕ್, ಸಿನಿಮಾ ಪ್ರದರ್ಶನ ಇರುವುದಿಲ್ಲಿ. ಸೂಪರ್ ಮಾರ್ಕೆಟ್ ಕೂಡ ಬಾಗಿಲು ತೆರೆಯೋದಿಲ್ಲ. ಕೆಲವು ಖಾಸಗಿ ಶಾಲಾ-ಕಾಲೇಜುಗಳು ಸಹ ರಜೆ ಇರಲಿವೆ. ಪರಿಸ್ಥಿತಿ ಆಧರಿಸಿ KSRTC ಬಸ್ ಸಂಚಾರ ಮಾಡಲಿವೆ. ಪ್ರತಿಭಟನೆ ತೀವ್ರಗೊಂಡರೆ ಹೊರ ಜಿಲ್ಲೆಗೆ ಸಂಚರಿಸುವ ಬಸ್​ಗಳಿಗೆ ಮಾರ್ಗ ಬದಲಾವಣೆಗೆ ಚಿಂತನೆ ಮಾಡಲಾಗಿದೆ. ಏನಿರುತ್ತದೆ ಎಂದು ನೋಡುವುದಾದರೆ, ಮೆಡಿಕಲ್, ಆಸ್ಪತ್ರೆ, ಹಾಲಿನ ಬೂತ್ ಓಪನ್ ಆಗಲಿವೆ.
ಇದನ್ನೂ ಓದಿ: ಸ್ವಾಸ್ಥ್ಯ ಕಾಪಾಡುವವರಿಗೆ ಸವಲತ್ತು ಯಾವತ್ತು?: ಕಾಯಂ ಸೇರಿ ವಿವಿಧ ಬೇಡಿಕೆಗಳಿಗೆ ಸಿಕ್ಕಿಲ್ಲ ಪರಿಹಾರ
ಮಂಡ್ಯ ಬಂದ್ ಪ್ರತಿಭಟನೆಗೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕೈಜೋಡಿಸಲಿದ್ದಾರೆ. ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ. ಅದೇ ರೀತಿ ಬಿಜೆಪಿಯಿಂದ ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರತಿಭಟನೆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಉಭಯ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಲಿದ್ದಾರೆ. ನಾಯಕರ ಬೆಂಬಲದಿಂದ ಜೆಡಿಎಸ್‌ ಮತ್ತು ಬಿಜೆಪಿಯ ನೂರಾರು ಕಾರ್ಯಕರ್ತರು ಸಹ ಪ್ರತಿಭಟನೆಗೆ ಧುಮುಕಲಿದ್ದಾರೆ. ಬಂದ್ ತೀವ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಲು ರೈತರ ಜೊತೆ ಜೆಡಿಎಸ್‌ ಮತ್ತು ಬಿಜೆಪಿ ಸಜ್ಜಾಗಿದೆ.
ರೈತರಿಗೆ ಯಾವುದೇ ತೊಂದರೆ ಕೊಡಬೇಡಿ, ರೈತರಿಗೆ ಮನವಿ ಮಾಡಿಕೊಳ್ಳಿ, ಒಂದು ವೇಳೆ ರೈತರಿಗೆ ತೊಂದರೆ ಕೊಟ್ಟರೆ ಬೇರೆಯದ್ದೆ ತಿರುವು ಪಡೆದುಕೊಳ್ಳುತ್ತದೆ. ಕಾವೇರಿ ಪ್ರತಿಭಟನೆ ಸೂಕ್ಷವಾಗಿರುತ್ತದೆ. ಗಲಾಟೆಯಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲರೂ ಅಲರ್ಟ್ ಆಗಿರಬೇಕು ಎಂದು ಡಿವೈಎಸ್ಪಿ ಶಿವಮೂರ್ತಿ ಅವರು ಪೊಲೀಸರಿಗೆ ಪಾಠ ಮಾಡಿದರು.
ಏಷ್ಯನ್​ ಗೇಮ್ಸ್​ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದ ವಿಶೇಷತೆಗಳು ಹೀಗಿವೆ…

ನನ್ನ ಇನ್ನೊಂದು ಮುಖ ನೋಡ್ಬೇಕಾಗುತ್ತೆ! ಅಮಲಾ ಮನೆಗೆ ಹೋಗಿ ಬೆದರಿಕೆ ಹಾಕಿದ್ದರಂತೆ ರಜನಿಕಾಂತ್​

ಏಷ್ಯನ್​ ಗೇಮ್ಸ್​ ಹುಟ್ಟಿದ್ದು ಭಾರತದಲ್ಲಿ; ಇವರೇ ಹೆಸರಿಟ್ಟವರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + one =
Remember me
