ಮಂಡ್ಯ:ಐದು ವರ್ಷ ಪ್ರೀತಿಸಿ ಕೆಲ ತಿಂಗಳಷ್ಟೇ ಮದುವೆಯಾಗಿದ್ದ ಯುವಕ, ಪ್ರೇಯಸಿಗೆ ವಂಚನೆ ಮಾಡಿ ಪರಾರಿಯಾಗಿದ್ದು, ಸಂತ್ರಸ್ತೆ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಹುಲಿಗೆರೆಪುರದ ನಿವಾಸಿ ತೇಜಸ್ವಿ ಎಂಬ ಯುವಕ ಅದೇ ಗ್ರಾಮದ ಶೃತಿ ಎಂಬಾಕೆಗೆ ಮೋಸ ಮಾಡಿ ಪರಾರಿಯಾಗಿದ್ದಾನೆ. ಇಬ್ಬರು 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. 1 ವರ್ಷದ ಹಿಂದೆ ಮೋಸ ಮಾಡಲು ಪ್ರಯತ್ನಿಸಿದಾಗ ಶೃತಿ ಪೊಲೀಸರಿಗೆ ದೂರು ನೀಡಿದ್ದಳು. ವಂಚನೆ, ಅತ್ಯಾಚಾರ ಆರೋಪದಡಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.
ಇದನ್ನೂ ಓದಿರಿ:ಪೊಲೀಸರ ವಿರುದ್ಧ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ತೀವ್ರ ಅಸಮಾಧಾನ; ಆಗಿದ್ದಾದರೂ ಏನು?
ಆ ಬಳಿಕ ಕೇಸ್ ವಾಪಾಸ್ ತೆಗೆಸಲು ತೇಜಸ್ವಿಯಿಂದ ಮದುವೆ ನಾಟಕ ನಡೆದಿದೆ. ಅದರಂತೆಯೇ ನವೆಂಬರ್ 8ರಂದು ಶೃತಿಯನ್ನು ತೇಜಸ್ವಿ ಮದುವೆಯಾಗಿದ್ದ. ಆ ನಂತರ ಮದುವೆ ನೋಂದಣಿ ಮಾಡಲು ಹೋದಾಗ ತೇಜಸ್ವಿ ಮತ್ತೊಂದು ಮುಖ ಬಯಲಾಗಿತ್ತು. ಅಂದರೆ, ಯಾರಿಗು ಗೊತ್ತಿಲ್ಲದೆಯೇ ತೇಜಸ್ವಿ ಮತ್ತೊಂದು ಮದುವೆಯಾಗಿದ್ದ.
ಎಂಟು ತಿಂಗಳ ಹಿಂದೆಯೇ ಮತ್ತೊಬ್ಬ ಯುವತಿಯನ್ನು ತೇಜಸ್ವಿ ಮದುವೆಯಾಗಿದ್ದಾನೆ. ಇತ್ತ ಕೇಸ್ ವಾಪಾಸ್ ತೆಗೆಸಲು ಪ್ರೀತಿಸಿದ ಹುಡುಗಿಗೆ ತಾಳಿ ಕಟ್ಟಿ ವಂಚನೆಯನ್ನು ಮಾಡಿದ್ದಾನೆ. ಮದುವೆ ಬಳಿಕ ಹೆಂಡತಿಯನ್ನು ಸಂಬಂಧಿಕರ ಮನೆಯಲ್ಲಿರಿಸಿ ತೇಜಸ್ವಿ ಇದೀಗ ನಾಪತ್ತೆಯಾಗಿದ್ದಾನೆ.
ಇದನ್ನೂ ಓದಿರಿ:ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆ ಮತ್ತು ಆಕೆಯ ತಾಯಿಯ ಕೊಲೆ! ಅಪ್ರಾಪ್ತ ಮಗುವಿಗೂ ಲೈಂಗಿಕ ಕಿರುಕುಳ ನೀಡಿದ ಪಾಪಿ
ಮೊದಲ ಹೆಂಡತಿ ಮನೆಯಲ್ಲಿದ್ದ ತೇಜಸ್ವಿ, 2ನೇ ಹೆಂಡತಿ ಬರ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ. ಗಂಡನನ್ನು ಹುಡುಕಿ ಬಂದವಳೀಗ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕಿದ್ದು, ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾಳೆ.(ದಿಗ್ವಿಜಯ ನ್ಯೂಸ್​)
VIDEO| ಸ್ವಚ್ಛಂದವಾಗಿ ಹಾರಾಡ್ತಿದ್ದ ಪಕ್ಷಿಗೆ ಶೂಟ್​ ಮಾಡಿದ ಬೆನ್ನಲ್ಲೇ ಕರ್ಮದ ಫಲ ಅನುಭವಿಸಿದ ವ್ಯಕ್ತಿ!

ವಸತಿ ಯೋಜನೆ ಅಕ್ರಮ: 7 ಪಿಡಿಒ ಅಮಾನತು ಸೇರಿ ಒಟ್ಟು 40 ಪಿಡಿಒಗಳಿಗೆ 72 ಕೋಟಿ ರೂ. ದಂಡ!

ಟ್ರಸ್ಟ್​ಗಾಗಿ ಸಂಗ್ರಹಿಸಿದ ಹಳೇ ಶರ್ಟ್​ನಲ್ಲಿದ್ದ ಪಾಕೆಟ್ ನೋಡಿದ ಕೂಡಲೇ ಮೈಸೂರಿನಿಂದ ಕೇರಳಕ್ಕೆ ದೌಡು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − two =
Remember me
