ಬೆಂಗಳೂರು:ಇಂದಿನಿಂದ ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ರಾಜ್ಯದ ನೂತನ ಶಾಸಕರು ಸಂಭ್ರಮದಿಂದಲೇ ಕಲಾಪದಲ್ಲಿ ಹಾಜರಾಗುತ್ತಿದ್ದಾರೆ. ಇದೀಗ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ವಿಧಾನಸೌಧದ ಕೆಂಗಲ್ ಗೇಟ್ ದ್ವಾರದ ಮುಖ್ಯ ಗೇಟ್ ಮೂಲಕ ಪಶ್ಚಿಮ ದ್ವಾರಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸಿ ಗಮನಸೆಳೆದರು. ಎತ್ತಿಗಾಡಿಯ ಎರಡೂ ಬದಿಯಲ್ಲಿ ಕಬ್ಬುಗಳನ್ನು ಕಟ್ಟಿ ಸಿಂಗರಿಸಿದ್ದರು. ಶಾಸಕ ರವಿಕುಮಾರ್ ಗೌಡ ಗಾಣಿಗ ಹೆಗಲಿಗೆ ಹಸಿರು ಶಾಲು ಹೊದ್ದು ವಿಧಾನಸಭೆಗೆ ಆಗಮಿಸಿದರು.
ಇದನ್ನೂ ಓದಿ:VIDEO | ಮೊದಲ ಅಧಿವೇಶನ ಆರಂಭಕ್ಕೂ ಮುನ್ನ ಗೋಮೂತ್ರ ಸಿಂಪಡಿಸಿ ಶುದ್ಧೀಕರಿಸಿದ ಕಾಂಗ್ರೆಸ್ ಕಾರ್ಯಕರ್ತರು!
#WATCH| Bengaluru, Karnataka: Ravi Ganiga, Congress MLA of Mandya constituency arrives at Vidhana Soudha in a bullock cartpic.twitter.com/yv3xQqaEr3— ANI (@ANI)May 22, 2023
#WATCH| Bengaluru, Karnataka: Ravi Ganiga, Congress MLA of Mandya constituency arrives at Vidhana Soudha in a bullock cartpic.twitter.com/yv3xQqaEr3
ಎತ್ತನಿಗಾಡಿ ಮಂಡ್ಯ ಜಿಲ್ಲೆಯ ಪ್ರತೀಕವಾಗಿದೆ. ಹೀಗಾಗಿ ಎತ್ತಿನಗಾಡಿ ಓಡಿಸುತ್ತಾ ವಿಧಾನಸೌಧಕ್ಕೆ ಆಗಮಿಸಿದ್ದೇನೆ. ನಮ್ಮ ಮಂಡ್ಯದ ಜನರ ಜೀವನಾಡಿ ಕಾವೇರಿ ಮತ್ತು ಕಬ್ಬಿಣ ಕಾರ್ಖಾನೆ. ಜಿಲ್ಲೆಯ ರೈತರ ಪರವಾಗಿ ಕಲಾಪದಲ್ಲಿ ಧ್ವನಿ ಎತ್ತುತ್ತೇನೆ ಎಂದು ರವಿಕುಮಾರ್ ಗೌಡ ಗಾಣಿಗ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಇದನ್ನೂ ಓದಿ:VIDEO | ಚಲಿಸುವ ಕಾರಿನ ಮೇಲೆ ಕುಳಿತು ಯುವತಿಯ ಫೋಟೋಶೂಟ್; ದಂಡ ವಿಧಿಸಿದ ಪೊಲೀಸರು
ಚನ್ನಗಿರಿ ಶಾಸಕ ಶಾಸಕ ಬಸವರಾಜ್ ಶಿವಗಂಗಾ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರಿನ ಮೇಲೆ ಪ್ರಮಾಣ ಸ್ವೀಕಾರ ಮಾಡಿದ್ದರು. ಇದಕ್ಕೆ ಸದನದಲ್ಲಿ ಇತರೆ ಸದನದ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಕೂಡಲೆ ಗೊಂದಲ ಬಗೆಹರಿಸಿದ ಸ್ಪೀಕರ್, ವ್ಯಕ್ತಿ ಹೆಸರಿನ ಮೇಲೆ ಪ್ರಮಾಣ ಮಾಡಿಸದಂತೆ ವಿಧಾನಸಭೆ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
