ಮಂಡ್ಯ:ಕರೊನಾ ತಾಯಿ ಮೃತಪಟ್ಟಳು ಎಂಬ ಸುದ್ದಿ ಕೇಳಿ ಮಗ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಮಂಡ್ಯದ ಸುಭಾಷ್ ನಗರದಲ್ಲಿ ನಡೆದಿದೆ.
ಸುಜಾತ(60) ಕರೊನಾದಿಂದ ಆಸ್ಪತ್ರೆಯಲ್ಲಿ ಮೃತ ಪಟ್ಟ ತಾಯಿ. ರಮೇಶ್(38) ಹೃದಯಾಘಾತದಿಂದ ಮನೆಯಲ್ಲಿ ಸಾವನ್ನಪ್ಪಿದ ಮಗ. ಕರೊನಾ ಸೋಂಕು ಹಿನ್ನೆಲೆ ಮೇ 07ರಂದು ಸುಜಾತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ಕೀಲಾರ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಇತ್ತ ತಾಯಿಗೆ ಕೋವಿಡ್ ಬಂದ ದಿನದಿಂದ ಮಾನಸಿಕ ಆಘಾತಕೊಳಗಾಗಿದ್ದ ಮಗ, ತಾಯಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮನೆಯಲ್ಲಿಯೇ ಹೃದಯಾಘಾತವಾಗಿದೆ.
ಒಂದೇ ದಿನ ಕುಟುಂಬದ ಇಬ್ಬರ ಸಾವಿನಿಂದ ಕಂಗಾಲಾದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಹೆಂಡತಿ ಜತೆ ವಿಚ್ಛೇದನ ಪಡೆದುಕೊಂಡ ಬಳಿಕ ರಮೇಶ್​, ತಾಯಿ ಜತೆ ವಾಸವಿದ್ದ. ಕೌಟುಂಬಿಕ ಜಗಳದಿಂದ ಹೆಂಡತಿಯಿಂದ ಬೇರ್ಪಟ್ಟಿದ್ದ.(ದಿಗ್ವಿಜಯ ನ್ಯೂಸ್​)
ಬ್ಲ್ಯಾಕ್​ ಫಂಗಸ್ ಟ್ರಬಲ್: ತಡ ಮಾಡಿದರೆ ಕಣ್ಣು, ಮೇಲ್ದವಡೆಗೆ ಆಪತ್ತು; ಜೀವಕ್ಕೂ ಕುತ್ತು!

ಲಸಿಕೆ ನೋಂದಣಿ ಸೋಗಿನಲ್ಲಿ ಸೈಬರ್ ಕಳ್ಳರ ಬಲೆ: ಮೊಬೈಲ್​​​ಗೆ ನಕಲಿ ಲಿಂಕ್, ಅಪ್ಲಿಕೇಷನ್ ಕಳುಹಿಸುತ್ತಿರುವ ವಂಚಕರು; ಯಾಮಾರಿದರೆ ಖಾತೆಗೆ ಕನ್ನ!

ಕರೊನಾ ಲಸಿಕೆ ಕೊಡದಿದ್ರೆ ಉದ್ದೇಶವೇ ವ್ಯರ್ಥ; ಹೈಕೋರ್ಟ್ ಕಳವಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + four =
Remember me
