ಮಂಡ್ಯ:ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ತಾಲೂಕಿನ ಕೆರಗೋಡು ಗ್ರಾಮದ ಬ್ಯಾಂಕ್ ಆಫ್ ಬರೋಡಾಗೆ ಹೋದ ರೈತ ಸಂಘದ ಸೋಮಶೇಖರ್ ಅವರೊಂದಿಗೆ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಮರಾಠಿ ಮಾತನಾಡುವಂತೆ ಉದ್ಧಟತನ ಮೆರೆದ ಘಟನೆ ಶನಿವಾರ ನಡೆದಿದೆ.
ಏನಿದು ಘಟನೆ: ಲೌಕ್‌ಡೌನ್‌ನಿಂದಾಗಿ ಕೃಷಿ ಚಟುವಟಿಕೆಗೆ ವಿನಾಯಿತಿ ಇದೆಯಾದರೂ, ಕೃಷಿ ಉತ್ಪನ್ನಗಳ ಮಾರಾಟಕ್ಕೆ ತೊಂದರೆಯಾಗುತ್ತಿದೆ. ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಹಾಕಿರುವ ಹಣವನ್ನು ಕೆಲ ಬ್ಯಾಂಕ್ ಗಳು ಚಿನ್ನಾಭರಣದ ಸಾಲ, ಕೃಷಿ ಸಾಲ ಮೊದಲಾದ ಸಾಲಗಳಿಗೆ ವಜಾ ಮಾಡಿಕೊಳ್ಳುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಡುವೆ ಕೆರಗೋಡಿನ ಬ್ಯಾಂಕ್ ಆಫ್ ಬರೋಡಾಗೆ ತೆರಳಿದ ರೈತ ಸಂಘದ ಉಪಾಧ್ಯಕ್ಷ ಕೀಲಾರ ಸೋಮಶೇಖರ್ ಅವರಿಗೆ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿದ್ದಲ್ಲೆ, ಮರಾಠಿಯಲ್ಲಿ ಮಾತನಾಡು ಎಂದು ಧಮಕಿ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಸೋಮಶೇಖರ್, ನಾನೇಕೆ ಮರಾಠಿ ಮಾತನಾಡಲಿ ಎಂದು ಜಗಳ ಮಾಡಿದ್ದಾರೆ. ಸುಮಾರು ಹೊತ್ತು ಮಾತಿನ ಚಕಮಕಿ ನಡೆದಿದ್ದು, ನಂತರ ಸೋಮಶೇಖರ್ ಬ್ಯಾಂಕಿನಿಂದ ಹೊರ ಬಂದಿದ್ದಾರೆ.
ಮಂಡ್ಯ: ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ತಾಲೂಕಿನ ಕೆರಗೋಡು ಗ್ರಾಮದ ಬ್ಯಾಂಕ್ ಆಫ್ ಬರೋಡಾಗೆ ಹೋದ ರೈತ ಸಂಘದ ಸೋಮಶೇಖರ್ ಅವರೊಂದಿಗೆ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಮರಾಠಿ ಮಾತನಾಡುವಂತೆ ಉದ್ಧಟತನ ಮೆರೆದ ಘಟನೆ ಶನಿವಾರ ನಡೆದಿದೆ.#MandyaFarmer#Marathilanguage#BankStaff#Mandyapic.twitter.com/pUvcyqyaWI
— Vijayavani (@VVani4U)May 16, 2021

ಬ್ಯಾಂಕಿನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸೋಮಶೇಖರ್, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರಿಗೆ ಹಣ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ. ಅಂತೆಯೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಪರ ಸಂಘಟನೆಗಳು, ಮರಾಠಿ ಮಾತನಾಡುವಂತೆ ತಾಕೀತು ಮಾಡಿದ ಬ್ಯಾಂಕ್ ಅಧಿಕಾರಿಯನ್ನ ತಕ್ಷಣ ವಜಾ ಮಾಡಬೇಕು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಕರೊನಾ ವಾರಿಯರ್ಸ್ ಕುಟುಂಬಕ್ಕಿಲ್ಲ ಪರಿಹಾರ!; ಆರ್ಥಿಕ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲ..

ಕೋವಿಡ್ ಮೃತರ ಪ್ಯಾಕಿಂಗ್​ಗೆ ಕಿಟ್ ಕೊರತೆ!; ಪ್ಲಾಸ್ಟಿಕ್​ನಲ್ಲಿ ಶವ ಸುತ್ತಿ ಹಸ್ತಾಂತರ, ಸೋಂಕು ಹರಡುವ ಭೀತಿಯಲ್ಲಿ ಕುಟುಂಬಸ್ಥರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 20 =
Remember me
