ಮಂಡ್ಯ:ಕೆಲವೊಮ್ಮೆ ಸಿಸಿಟಿವಿಯಲ್ಲಿ ದಾಖಲಾಗುವ ವಿಚಿತ್ರ ದೃಶ್ಯಗಳು ಯಾವುದೋ ಅಗೋಚರ ಶಕ್ತಿ ಇರುವಿಕೆಯನ್ನು ನಿರೂಪಿಸುತ್ತದೆ. ಅಂಥದ್ದೆ ವಿಚಿತ್ರ ದೃಶ್ಯವೊಂದು ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ್ಮದ ಸಂಚಾರ ದೃಶ್ಯವೆಂದು ಹೇಳಲಾಗುತ್ತಿದೆ.
ಇದೀಗ ಸಿಸಿಟಿವಿ ದೃಶ್ಯವನ್ನು ನೋಡಿ ನಗುವನಹಳ್ಳಿಯ ಜನರು ಬೆಚ್ಚಿ ಬಿದ್ದಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಿಂದಾಗಿ ಆ ಸ್ಥಳದ ಕಡೆ ಓಡಾಡಲು ಊರಿನ ಜನರ ಭಯ ಪಡುತ್ತಿದ್ದಾರೆ. ಅಂದಹಾಗೆ ವಿಚಿತ್ರ ದೃಶ್ಯ ಸೆರೆಯಾಗಿರುವುದು ನಗುವನಹಳ್ಳಿ ಗ್ರಾಮದ ಗೋಪಾಲ್ ಎಂಬುವರ ತೋಟದ ಮನೆಯ ಬಳಿ. ಜನವರಿ 31ರಂದು ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿರಿ:ಮದ್ವೆಗೂ ಮುನ್ನ ಬಾಡಿ ಪಾರ್ಟ್ಸ್ ಸರಿಯಾಗಿದೆಯಾ ಎಂದು ಕೇಳಿ ವರನನ್ನು ಬೆತ್ತಲೆ ಮಾಡಿದ ಯುವತಿ!
ವಿಡಿಯೋದಲ್ಲಿ ಏನಿದೆ?:ಹಗಲಿನ ವೇಳೆಯಲ್ಲೇ ಗಾಳಿಯಲ್ಲಿ ಕಪ್ಪು ಬಣ್ಣದಲ್ಲಿ ವಿಚಿತ್ರ ಆಕಾರವೊಂದು ಚಲಿಸುತ್ತಾ ಹುಲ್ಲಿನ ಮೆದೆಯತ್ತ ಸಾಗುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬ ಹುಲ್ಲನ್ನು ತೆಗೆದುಕೊಳ್ಳುತ್ತಿರುವುದು ಮತ್ತು ಅವನ ಮೇಲೆಯೇ ಕಪ್ಪು ಆಕಾರ ಇರುವುದು ದೃಶ್ಯದಲ್ಲಿ ಗೋಚರವಾಗುತ್ತದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಆತ್ಮ ಸಂಚಾರದ ದೃಶ್ಯ!?ವಿಚಿತ್ರ ದೃಶ್ಯವೊಂದು ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ್ಮದ ಸಂಚಾರ ದೃಶ್ಯವೆಂದು ಹೇಳಲಾಗುತ್ತಿದೆ.#Mandya#Ghost#Devil#MandyaVillage#CCTVVideopic.twitter.com/RW9UkPXia2
— Vijayavani (@VVani4U)February 22, 2021

ಇದನ್ನೂ ಓದಿರಿ:ಪುರಿ ಜಗನ್ನಾಥ ರೂಪವನ್ನೇ ಹೋಲುವ ಪತಂಗ ಪತ್ತೆ! ಗ್ರಾಮಸ್ಥರ ಮಾತು ಕೇಳಿದ್ರೆ ಬೆರಗಾಗ್ತೀರಾ!
ಕಳೆದ ಎರಡ್ಮೂರು ತಿಂಗಳಿನಿಂದ ಆ ಸ್ಥಳದ ಬಳಿ ಮೂರ್ನಾಲ್ಕು ಜನರ ಸಾವಾಗಿದೆ. ಸಾವಿಗೀಡಾದವರಲ್ಲಿ ಒಂದಿಬ್ಬರು ದೆವ್ವವಾಗಿರೋ ಬಗ್ಗೆ ಗ್ರಾಮದ ಜನರಲ್ಲಿ ವದಂತಿ ಹರಿದಾಡುತ್ತಿದೆ. ಸಿಸಿಟಿವಿ ದೃಶ್ಯ ನೋಡಿ ಹಗಲಿನಲ್ಲಿಯೂ ಸಂಚರಿಸಲು ಜನ ಭಯಪಡುತ್ತಿದ್ದಾರೆ. ಇನ್ನು ರಾತ್ರಿ ವೇಳೆಯಂತೂ ಆ ಕಡೆ ತಲೆ ಹಾಕಿಯು ಜನರು ಮಲಗುತ್ತಿಲ್ಲ.(ದಿಗ್ವಿಜಯ ನ್ಯೂಸ್​)
ಬಿಜೆಪಿ ನಾಯಕನ ಕುಟುಂಬದ ನಾಲ್ವರು ನೇಣಿಗೆ ಶರಣು: ಡೆತ್​ನೋಟ್​ನಲ್ಲಿ ಸಾವಿನ ರಹಸ್ಯ ಬಯಲು!

ದರ್ಶನ್ ನೋಡಿ ಸುಮ್ನೆ ಹೆಂಗಿರ್ಲಿ!; ಜವಾರಿ ಹಾಡಿಗೆ ಆಶಾ ಭಟ್ ಕುಣಿತ

ಪೊಗರಿಗೆ ಸುತ್ತಿಕೊಂಡ ವಿವಾದ!; ಕ್ಷಮೆಯಾಚಿಸಿ ದೃಶ್ಯ ತೆಗೆಯುವುದಾಗಿ ನಂದಕಿಶೋರ್ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
