ಮಂಡ್ಯ:ಆನ್​ಲೈನ್​ ಕ್ಲಾಸ್​ಗೆಂದು ಮಗಳಿಗೆ ಮೊಬೈಲ್​ ನೀಡಿದ ಬೆನ್ನಲ್ಲೇ ತಂದೆಯ ಮತ್ತೊಂದು ಮುಖವಾಡ ಕಳಚಿಬಿದ್ದು, ಕುಟುಂಬದ ನಡುವೆ ಬಿರುಕು ಮೂಡಿರುವ ಪ್ರಸಂಗ ಮಂಡ್ಯದಲ್ಲಿ ವರದಿಯಾಗಿದೆ.
ನಾಗಮಂಗಲ ತಾಲೂಕಿನ ಆರ್.ಸಿ.ಅಗ್ರಹಾರ ಗ್ರಾಮದ ನಿವಾಸಿ ಕುಮಾರ್, ಆನ್​ಲೈನ್​ ಕ್ಲಾಸ್​ಗೆಂದು ತನ್ನ ಮಗಳಿಗೆ ಮೊಬೈಲ್​ ನೀಡಿದ್ದ. ಆದರೆ, ಅದೇ ಮೊಬೈಲ್​ನಲ್ಲಿದ್ದ ತನ್ನದೇ ಅಶ್ಲೀಲ ವಿಡಿಯೋ ಮಗಳ ಕಣ್ಣಿಗೆ ಬಿದ್ದಿದೆ. ಮಹಿಳೆಯೊಂದಿಗೆ ದೈಹಿಕ ಸಂಪರ್ಕ ನಡೆಸಿ, ಅದನ್ನು ತನ್ನ ಮೊಬೈಲ್​ನಲ್ಲಿ ಕುಮಾರ್​ ಚಿತ್ರೀಕರಿಸಿದ್ದ. ಇದೀಗ ಕುಮಾರ್​ ಅನೈತಿಕ ಸಂಬಂಧ ಬಯಲಾಗಿದ್ದು, 18 ವರ್ಷದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ.
ವಿಡಿಯೋ ಸಿಕ್ಕ ಬಳಿಕ ಗಂಡ-ಹೆಂಡತಿ ನಡುವಿನ ಜಗಳ ಹೆಚ್ಚಾಗಿದೆ. ಪುಷ್ಪ ಎಂಬಾಕೆಯನ್ನು ಕುಮಾರ್​ ವಿವಾಹವಾಗಿದ್ದ. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೂ ಕುಮಾರ್​ ಸಂಬಂಧಿಕ ಮಹಿಳೆಯೊಬ್ಬಳ ಜತೆ ಒಪ್ಪಿಗೆಯಿಂದಲೇ ದೈಹಿಕ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ ಕಳೆದ ಒಂದು ವರ್ಷದಿಂದ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೀಗ ವಿಡಿಯೋ ಸಿಕ್ಕಿರುವುದು ಇಬ್ಬರ ಜಗಳಕ್ಕೆ ತುಪ್ಪ ಸುರಿದಂತಾಗಿದೆ. ಇಬ್ಬರ ನಡುವಿನ ವಿರಸ ಹೆಚ್ಚಾಗಿ ದಂಪತಿ ದೂರಾಗಿದ್ದಾರೆ.
ಇದನ್ನೂ ಓದಿ:VIDEO| ಸನ್ನಿ ಲಿಯೋನ್​ ಹಾಡಿಗೆ ಸೊಂಟ ಬಳುಕಿಸುತ್ತಲೇ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟ ವಧು..!
ಪೊಲೀಸ್ ಠಾಣೆ ಮೆಟ್ಟಿಲೇರಿದರೂ ದಂಪತಿ ಜಗಳ ಮಾತ್ರ ಬಗೆಹರಿಯುತ್ತಿಲ್ಲ. ಮಹಿಳಾ ಸಾಂತ್ವನ ಕೇಂದ್ರದ ಮಧ್ಯಸ್ಥಿಕೆಯಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಕುಮಾರ್​, ಓರ್ವ ಮಗಳು ಮತ್ತು ಹೆಂಡತಿಯನ್ನು ಬಿಟ್ಟು ಹೋಗಿದ್ದಾನೆ. ಸಂಸಾರ ಸರಿ ಮಾಡಿಸುವಂತೆ ಪತ್ನಿ ಪುಷ್ಪ ಮನವಿ ಮಾಡಿಕೊಂಡರೆ, ಜೈಲಿಗೆ ಬೇಕಾದ್ರೂ ಹೋಗುತ್ತೇನೆ, ಹೆಂಡತಿ ಜತೆ ಮಾತ್ರ ಸಂಸಾರ ಮಾಡಲ್ಲ. ಈಗಾಗಲೇ ನನ್ನ ಮಾನವನ್ನು ಕಳೆದಿದ್ದಾಳೆ ಎಂದು ಕುಮಾರ್​ ತನ್ನ ನಿಲುವಿಗೆ ಅಂಟಿಕೊಂಡಿದ್ದಾನೆ.(ದಿಗ್ವಿಜಯ ನ್ಯೂಸ್​)
ಯೋಗಿ ನಂತರ ಚೌಹಾಣ್​- ಲವ್​ ಜಿಹಾದಿಗಳಿಗೆ ಇಲ್ಲೂ ಶುರಾಗಲಿದೆ ನಡುಕ: 10 ವರ್ಷ ಜೈಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 2 =
Remember me
