ಮಂಡ್ಯ:ಸಕ್ಕರೆ ನಾಡು ಮಂಡ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಭರಾಟೆ ಜೋರಾಗಿದ್ದು, ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಕಸರತ್ತು ನಡೆದಿದೆ.
ಇಂದಿನಿಂದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ ಆಗಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಗಾಗಿ ಮಂಡ್ಯದ ಬಹುತೇಕ ಹಳ್ಳಿಗಳಲ್ಲಿ ಅಭ್ಯರ್ಥಿಗಳಿಂದ ಲಕ್ಷ-ಲಕ್ಷ ಹಣ ಪಡೆಯುತ್ತಿರುವ ಮಾಹಿತಿ ತಿಳಿದುಬಂದಿದೆ. ಗ್ರಾಮದ ಅಭಿವೃದ್ಧಿಗೆ ಹಣ ಪಡೆದು ಅಭ್ಯರ್ಥಿಯ ಆಯ್ಕೆಗೆ ಮುಖಂಡರು ಮುಂದಾಗಿದ್ದಾರೆ.
ಇದನ್ನೂ ಓದಿ:ಅಡುಗೆ ಮನೆಯಿಂದ ಕೇಳಿಬಂದ ವಿಚಿತ್ರ ಶಬ್ದದ ಬೆನ್ನಲ್ಲೇ ಫೋಟೋ ಕ್ಲಿಕ್ಕಿಸಿ ನೋಡಿದವನಿಗೆ ಕಾದಿತ್ತು ಶಾಕ್​!
ಕೆರಗೋಡು ಗ್ರಾ.ಪಂ ವ್ಯಾಪ್ತಿಯ ಹಳ್ಳಿಯೊಂದಕ್ಕೆ ತಹಸೀಲ್ದಾರ್​ ಒಬ್ಬರು ಹಣದ ಭರವಸೆ ನೀಡಿದ್ದು, ತಮ್ಮ ಪತ್ನಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದರೆ ಗ್ರಾಮದ ದೇವಾಲಯ ಅಭಿವೃದ್ಧಿಗೆ 25ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹಳ್ಳಿಯೊಂದರಲ್ಲಿ 2 ಸ್ಥಾನಗಳ ಹರಾಜು ಹಾಕಲಾಗಿದೆ. ಸಾಮಾನ್ಯ ಪುರುಷನಿಗೆ 7.50 ಲಕ್ಷ ರೂ. ಮತ್ತು ಸಾಮಾನ್ಯ ಮಹಿಳೆಗೆ 5.20 ಲಕ್ಷ ರೂ. ಕೊಡಲು ಆಕಾಂಕ್ಷಿಗಳ‌ ಒಪ್ಪಿಗೆ ನೀಡಿದ್ದಾರೆ.
ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮ ಪಂಚಾಯಿತಿಯ ವಾರ್ಡ್‌ವೊಂದರ ಆಕಾಂಕ್ಷಿ ಅವಿರೋಧ ಆಯ್ಕೆಯಾಗಲು ಸ್ಮಶಾನಕ್ಕೆ 8 ಗುಂಟೆ ಜಾಗ ಕೊಡಲು ಒಪ್ಪಿದ್ದಾರೆ.(ದಿಗ್ವಿಜಯ ನ್ಯೂಸ್​)
VIDEO: ರೇಷ್ಮೆ ಸೀರೆ ಬದಲು ಪಿಪಿಇ ಕಿಟ್​: ಕರೊನಾಕ್ಕೆ ಸೆಡ್ಡು ಹೊಡೆದು ಮದುವೆಯಾದ ಸೋಂಕಿತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
