ಮಂಡ್ಯ:ನಾಗಮಂಗಲದಲ್ಲಿ ಕಾಂಗ್ರೆಸ್​ ನಾಯಕ ಚಲುವರಾಯಸ್ವಾಮಿ ಮಣಿಸಲು ಜೆಡಿಎಸ್​ನ ದಳಪತಿಗಳು ಮಾಸ್ಟರ್ ಪ್ಲಾನ್ ರಚಿಸಿದ್ದಾರೆ. ಚಲುವರಾಯಸ್ವಾಮಿಗೆ ಖೆಡ್ಡಾ ತೋಡಲು ಮಾಜಿ ಸಂಸದ ಎಲ್​.ಆರ್​. ಶಿವರಾಮೇಗೌಡರನ್ನ ಅಸ್ತ್ರವಾಗಿ ಬಳಸಿಕೊಳ್ಳಲು ಜೆಡಿಎಸ್​ ಪ್ರಯತ್ನಿಸುತ್ತಿದೆ ಎಂಬ ವಿಚಾರ ಮಂಡ್ಯ ರಾಜಕೀಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಶಿವರಾಮೇಗೌಡಗೆ ನಾಗಮಂಗಲ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಆಫರ್ ಕೊಟ್ಟಿರುವ ಜೆಡಿಎಸ್, ಉಚ್ಛಾಟನೆ ಬಳಿಕ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ತೆರೆಮರೆಯಲ್ಲಿ ದಳಪತಿಗಳು ಕಸರತ್ತು ನಡೆಸುತ್ತಿದ್ದಾರೆ. ಶಿವರಾಮೇಗೌಡ ಆಡಿರುವ ಮಾತುಗಳು ಕೂಡ ಇದಕ್ಕೆ ಪುಷ್ಟಿ ನೀಡುವಂತಿದೆ.
ನನಗೆ ಒತ್ತಡ ಇರುವುದು ನಿಜ. ಆದರೆ, ಎಲ್ಲವನ್ನು ಬಿಡಿಸಿ ಹೇಳಲು ಸಾಧ್ಯವಿಲ್ಲ ಎನ್ನುತ್ತಲೇ ಬಿಗ್ ಆಫರ್ ಬಗ್ಗೆ ಶಿವರಾಮೇಗೌಡ ಸುಳಿವು ಬಿಟ್ಟುಕೊಟ್ಟಿದ್ದಾರೆ. ನಾನಿಲ್ಲದೆ ನಾಗಮಂಗಲದಲ್ಲಿ ಜೆಡಿಎಸ್ ಗೆಲ್ಲುವುದಿಲ್ಲ ಅನ್ನೋದು ಜೆಡಿಎಸ್​ಗೆ ಹೈಕಮಾಂಡ್​ಗೆ ಗೊತ್ತಿದೆ. ಕಾಂಗ್ರೆಸ್​ಗೂ ಸಹ ನಾನಿಲ್ಲದೆ ಹೋದ್ರೆ ಹೆಚ್ಚು ಕಡಿಮೆ ಆಗುತ್ತೆ ಅನ್ನೋ ಭಯ ಇದೆ. ಈ ಎರಡು ಗಾಬರಿಗಳ ನಡುವೆ ನನ್ನ ಬಗ್ಗೆ ಚರ್ಚೆ ನಡೆಯುತ್ತಿದೆ. ಉಚ್ಛಾಟನೆ ಬಳಿಕ ನನಗೆ ನಾಗಮಂಗಲ ಬಿಟ್ಟು ಬೇರೆ ಕಡೆ ಸ್ಪರ್ಧಿಸಲು ಆಫರ್ ಕೊಟ್ಟಿದ್ರು. ದೊಡ್ಡ ದೊಡ್ಡವರು ಅದರ ಬಗ್ಗೆ ಮಾತನಾಡಿದ್ದಾರೆ. ಆದರೆ, ನಾನು ಆ ಆಫರ್ ಅನ್ನು ರಿಜೆಕ್ಟ್ ಮಾಡಿದ್ದೇನೆ ಎಂದು ಶಿವರಾಮೇಗೌಡ ಹೇಳಿದ್ದಾರೆ.
ಪಕ್ಷೇತರವಾಗಿ ಸ್ಪರ್ಧಿಸಲು ನಾನು ರೆಡಿಯಾಗಿದ್ದೀನಿ. ನಾನು 15 ವರ್ಷದಿಂದ ಎಂಎಲ್‌ಎ ಆಗುವ ಆಸೆ ಬಿಟ್ಟಿದ್ದೆ. ಆದರೆ, ಈ ಬಾರಿ ಎಂಎಲ್‌ಎ ಆಗಬೇಕು ಎಂದು ಬಂದಿದ್ದೇನೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ನಾಗಮಂಗಲದಲ್ಲಿ 17 ಚುನಾವಣೆ ನಡೆದಿವೆ. 17 ಚುನಾವಣೆಯಲ್ಲಿ 6 ರಲ್ಲಿ‌ ಪಕ್ಷೇತರರು ಗೆದ್ದಿದ್ದಾರೆ, ಅದ್ರಲ್ಲಿ 2 ಬಾರಿ ನಾನು ಗೆದ್ದಿದ್ದೇನೆ. ಜನಗಳ ಅಭಿಲಾಷೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ‌ ಇಳಿಯುತ್ತೇನೆಂದು ಹೇಳಿದರು.
ಸುಮಲತಾ ಅಂಬರೀಶ್ ಸ್ವಾಭಿಮಾನದ ಕಹಳೆ ಊದಿದ್ದು ಬೇರೆ ಕಾರಣಕ್ಕೆ. ನಾನು ಸ್ವಾಭಿಮಾನದ ಕಹಳೆ ಊದಿ ಎರಡು ಬಾರಿ ಪಕ್ಷೇತರವಾಗಿ ಗೆದ್ದಿದ್ದೇನೆ. ನನ್ನ ದಾರಿ ಸುಲಭ ಹಾಗೂ ಸುಗಮವಾಗಿದೆ. ಕಾಂಗ್ರೆಸ್, ಜೆಡಿಎಸ್‌ಗಿಂತ ಹೆಚ್ಚು ಮತ ತೆಗೆದುಕೊಳ್ಳದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಂಡ್ಯದ ನಾಗಮಂಗಲದಲ್ಲಿ ಎಲ್.ಆರ್.ಶಿವರಾಮೇಗೌಡ ಶಪಥ ಮಾಡಿದರು.(ದಿಗ್ವಿಜಯ ನ್ಯೂಸ್​)
ಜಿಪಂ, ತಾಪಂ ಚುನಾವಣೆ ವಿಳಂಬ: ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ವಿದ್ಯಾರ್ಥಿನಿ ಮೇಲೆ ಆ್ಯಸಿಡ್​ ದಾಳಿ ಮಾಡಿದ ದುಷ್ಕರ್ಮಿಗಳು: ನೋವಿನಿಂದ ಚೀರುತ್ತಾ ಓಡಿದ ಸಂತ್ರಸ್ತೆ

ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + fourteen =
Remember me
