ಮಂಡ್ಯ:ಸ್ಕೂಟರ್​ಗೆ ಅಡ್ಡಬಂದಿದ್ದಕ್ಕೆ ಬಾಲಕಿ ಎಂಬುದನ್ನು ನೋಡದೆ ಮಂಡ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ.ಬಿ. ರಮೇಶ್ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ​
ರಮೇಶ್​ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವಿಡಿಯೋವನ್ನು ಸಾಹಿತಿ ಹಾಗೂ ಪತ್ರಕರ್ತ ಡಾ. ಎನ್​. ಜಗದೀಶ್​ ಕೊಪ್ಪ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೆ, ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಈ ವಿಡಿಯೋವನ್ನು ಕಲೆ ಹಾಕಿ, ಜಿಲ್ಲಾ ಪೊಲೀಸ್ ವರಿ಼ಷ್ಠಾಧಿಕಾರಿಗೆ ದೂರು ಸಲ್ಲಿಸುತ್ತಿದ್ದೀನಿ. ಇಂತಹ ಅಯೋಗ್ಯರು ಕೇವಲ ಕ.ಸಾ.ಪ. ಮಾತ್ರವಲ್ಲದೆ, ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ಯೋಗ್ಯರಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ದೂರು ನೀಡುವಂತೆ ಜನಶಕ್ತಿ ಸಂಘಟನೆಯ ಸಿ. ಕುಮಾರಿ ಅವರಿಗೂ ಆಗ್ರಹಿಸಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ರಮೇಶ್​ ವಿರುದ್ಧ ಕಾಮೆಂಟ್​ಗಳ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ. ಎಲ್ಲರು ಒಗ್ಗಟ್ಟು ಪ್ರದರ್ಶನ ಮಾಡಿ ಇವನ ಮೇಲೆ ಕಾನೂನು ಕ್ರಮ ಜರುಗಿಸೋಣ ಎಂದು ನೆಟ್ಟಿಗರೊಬ್ಬರು ಕರೆ ನೀಡಿದ್ದಾರೆ. ಇಷ್ಟೊಂದು ಕ್ರೌರ್ಯ, ಮೊದಲು ಅವರನ್ನು ಒದ್ದು ಒಳಗೆ ಹಾಕಲಿ, ಇವನು ಮನುಷ್ಯನಾ? ದುಷ್ಟನನ್ನು ಕಿತ್ತೊಗೆಯಿರಿ, ಇಂಥವರನ್ನು ಕಸಾಪ ಒಳಗೆ ಸೇರಿಸಿದ್ದು ಯಾರು? ರಣ ಹೇಡಿ, ನೀಚನಿಗೆ ಶಿಕ್ಷೆ ಆಗಲಿ ಎಂದೆಲ್ಲ ಕಾಮೆಂಟ್​ ಮೂಲಕ ನೆಟ್ಟಿಗರು ರಮೇಶ್​ ವಿರುದ್ಧ ಧ್ವನಿಗೂಡಿಸಿದ್ದಾರೆ.
https://www.youtube.com/watch?v=Avpe3n_tMI0&t=1s
ಚುನಾವಣಾ ಬಾಂಡ್​ ಕೇಸ್​: ಗಡುವು ವಿಸ್ತರಣೆ ಕೋರಿದ SBI ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

ಗುಟ್ಟಾಗಿ 2ನೇ ಮದುವೆಯಾದ ರಾಖಿ ಸಾವಂತ್​ ಮಾಜಿ ಪತಿ ಆದಿಲ್! ಯಾರು ಈ ಸೋಮಿ ಖಾನ್?​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + 4 =
Remember me
