ಮಂಡ್ಯ:ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಮಗುವಿನ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಮದ್ದೂರು ತಾಲೂಕು ಬಿದರಕೋಟೆಯ ಪ್ರಸನ್ನಕುಮಾರ್​ ಹಾಗೂ ರಮ್ಯಾ ದಂಪತಿ ಮನವಿ ಮಾಡಿದರು.
ಐದು ವರ್ಷ ವಯಸ್ಸಿನ ಅಚ್ಯುತ್​ಕುಮಾರ್​ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ. ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂ. ಖರ್ಚಾಗಿದೆ. ದಾನಿಗಳು ಮಗುವಿನ ಚಿಕಿತ್ಸೆಗೆ ಸಹಾಯ ಮಾಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಮೂರೂವರೆ ವರ್ಷದವನಿದ್ದಾಗ ಅಚ್ಯುತ್​ಕುಮಾರ್​ಗೆ ಜ್ವರ ಬಂದಿತ್ತು. ಆಸ್ಪತ್ರೆಗೆ ಕರೆದೊಯ್ದಾಗ ಅನಿಮಿಯಾ ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಮಗುವಿನ ಆರೋಗ್ಯ ಕ್ಷೀಣಿಸುತ್ತಾ ಬಂತು. ನಾವು ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು. ಆದರೂ ಗುಣಮುಖವಾಗಲಿಲ್ಲ. ಬಳಿಕ ನಾರಾಯಣ ಆಸ್ಪತ್ರೆಯಲ್ಲಿ ತೋರಿಸಿದಾಗ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿದುಬಂತು. ಈ ಹಿನ್ನೆಲೆಯಲ್ಲಿ ಹಲವು ಚಿಕಿತ್ಸೆ ಕೊಡಿಸಲಾಯಿತಾದರೂ ಗುಣವಾಗಲಿಲ್ಲ ಎಂದು ಅಳಲು ತೋಡಿಕೊಂಡರು.
ಮಗುವಿಗೆ ಪ್ರತಿ ತಿಂಗಳು ಒಂದು ಅಥವಾ ಎರಡು ಬಾಟಲಿ​ ರಕ್ತ ಹಾಕಿಸಬೇಕು. ಆತನ ದೇಹದಲ್ಲಿ ರಕ್ತ ಉತ್ಪತ್ತಿಯಾಗುವುದಿಲ್ಲ, ಬದಲಿಗೆ ಕಡಿಮೆಯಾಗುತ್ತದೆ. ಆ ವೇಳೆ ಮಗುವಿನ ಚಟುವಟಿಕೆಯೂ ಕ್ಷೀಣಿಸುತ್ತದೆ. ರಕ್ತ ಕೊಡಿಸಿದ ಮೇಲೆ ಸಾಮಾನ್ಯರಂತಾಗುತ್ತಾನೆ. ಇದು ಈ ಕಾಯಿಲೆಯ ಲಕ್ಷಣವಾಗಿದೆ. ಇದಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ. ಅದಕ್ಕೆ ಸುಮಾರು 22 ಲಕ್ಷ ರೂ. ಹಾಗೂ ಒಂದು ವರ್ಷದ ಚಿಕಿತ್ಸೆ ಸೇರಿದಂತೆ ಒಟ್ಟು 30 ಲಕ್ಷ ರೂ. ತಗುಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಇಷ್ಟು ದೊಡ್ಡ ಮೊತ್ತದ ಹಣ ನಮ್ಮಲ್ಲಿ ಇಲ್ಲ. ನಾವು ಇರುವ ತುಂಡು ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದೇವೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ದಾನಿಗಳು ಚಿಕಿತ್ಸೆಗೆ ಸಹಾಯ ಮಾಡಿ ಮಗುವಿನ ಪ್ರಾಣ ಉಳಿಸಬೇಕು ಎಂದು ಮನವಿ ಮಾಡಿದರು.
ದಾನಿಗಳುಬ್ಯಾಂಕ್​ ಆಫ್​ ಬರೋಡಬಿದರಕೋಟೆ ಶಾಖೆಯಲ್ಲಿ ಮಗುವಿನಉಳಿತಾಯ ಖಾತೆ (ಸಂಖ್ಯೆ 73540100002158, ಐಎಫ್​ಎಸ್​ಸಿ ಕೋಡ್​ BARBOVJBIKO)ಗೆ ಹಣ ಕಳಿಸಬಹುದು. ಮಾಹಿತಿಗೆಮೊ.ಸಂ 9886400633ಸಂಪರ್ಕಿಸಬಹುದೆಂದು ಕೋರಿದರು.
https://www.vijayavani.net/siddaramaiah-political-future/
ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್​ನ ಚಿಪ್ಪನ್ನು ಸಾಗಿಸುತ್ತಿದ್ದವನ ಬಂಧನ…

ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
