ಮಂಡ್ಯ:ಕಾರಿನ ನಂಬರ್ ಪ್ಲೇಟ್ ಬದಲಾಯಿಸಿ ಕಾರು ಓಡಿಸುತ್ತಿದ್ದವರನ್ನು ಸೆರೆ ಹಿಡಿದು, ಅಪರಾಧ ಕೃತ್ಯಕ್ಕೆ ಬಳಸುವ ವಸ್ತುಗಳನ್ನು ಮದ್ದೂರು ಪೊಲೀಸರು ವಶಕ್ಕೆ ಪಡೆದಿದ್ದರು.
ಕಳೆದ ಎರಡು ದಿನಗಳ ಹಿಂದೆ ಮದ್ದೂರಿನ ಕೊಪ್ಪ ಸರ್ಕಲ್‌ನಲ್ಲಿ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಎರಡು ದಿನಗಳಾದರೂ ನಕಲಿ‌ ನಂಬರ್ ಪ್ಲೇಟ್ ಪ್ರಕರಣ ಇತ್ಯರ್ಥವಾಗಿಲ್ಲ. ಎರಡು ದಿನದಿಂದ ಕಾರಿನಲ್ಲಿದ್ದವರು ಮತ್ತು ಕಾರು ಠಾಣೆಯಲ್ಲೇ ಇದೆ. ವಿಚಾರಣೆ ನೆಪದಲ್ಲಿ ಪ್ರಕರಣ ತಿರುಚುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಅನುಮಾನ ಸಾರ್ವಜನಿಕರದ್ದು.
ಕಾರಿನಲ್ಲಿ ಇದ್ದವರು ರಾಜಕೀಯ ಮುಖಂಡರೊಬ್ಬರ ಹಾಗೂ ಪೊಲೀಸ್ ಪೇದೆ ಮಗ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಕಾರಿನ ನಂಬರ್​ ಪ್ಲೇಟ್​ ಬದಲಿಸಿ ಚಲಾಯಿಸುತ್ತಿದ್ದಾಗ, ಬುಧವಾರ ರಾತ್ರಿ 9 ಗಂಟೆ ಹೊತ್ತಿಗೆ ವಶಕ್ಕೆ ಪಡೆದಿದ್ದರು.
ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಲಾರಿ ಚಾಲಕನೊಬ್ಬನ ಜತೆ ಜಗಳ ತೆಗೆದು ಹಲ್ಲೆಗೆ ಮುಂದಾಗಿದ್ದರು. ಆರೋಪಿಗಳನ್ನು ಥಳಿಸಿದ್ದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದರು. ಈ ನಡುವೆ ಕಾರಿನಲ್ಲಿದ್ದ ಓರ್ವ ಪರಾರಿಯಾಗಿದ್ದ. ಅಲ್ಲದೆ ಕಾರಿನಲ್ಲಿ ಮಾರಕಾಸ್ತ್ರ ಇರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರಿನಲ್ಲಿದ್ದ ಐವರನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.
ಪ್ರಕರಣದ ಬಗ್ಗೆ ಮಂಡ್ಯದಲ್ಲಿ ಎಸ್ಪಿ ಪರಶುರಾಮ್ ಸ್ಪಷ್ಟನೆ ನೀಡಿದ್ದಾರೆ. ಕಾರಲ್ಲಿ ದರೋಡೆಗೆ ಬಳಸುವ ಮಾರಕಾಸ್ತ್ರ ಸೇರಿ ಪೆಪ್ಪರ್ ಸ್ಪ್ರೇ ಇರುವುದು ಕಂಡು ಬಂದಿದೆ. ಸ್ಥಳೀಯರೂ ಈ ಬಗ್ಗೆ ಮಾಹಿತಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳಾದ ಕಾರ್ತಿಕ್ ಮತ್ತು‌ ಸಂಜಯ್ ಪರಾರಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಇಲ್ಲ ಎಂದು ಹೇಳಿದ್ದಾರೆ.
ಆದರೆ ಎಸ್ಪಿ ಅವರ ಹೇಳಿಕೆಯಲ್ಲಿಯೇ ಗೊಂದಲವಿದೆ. ಎಫ್​ಐಆರ್​ನಲ್ಲಿ ನಾಲ್ವರ ಬಂಧನ ಎಂದು ದಾಖಲಾಗಿದೆ. ಆದರೆ ಎಸ್​ಪಿ ಅವರು ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ ಕಾರ್ತಿಕ್ ಎಂಬುವನನ್ನು‌ ಪೊಲೀಸರೇ ಬಿಟ್ಟು ಕಳಿಸಿದ್ದಾರೆ ಎಂದು ಸ್ಥಳಿಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eighteen =
Remember me
