ಮಂಡ್ಯ:ಕೆಲವು ದಿನಗಳ ಹಿಂದೆ ಕರೊನಾ ಮುಕ್ತ ಗ್ರಾಮವೆಂಬ ಹೆಗ್ಗಳಿಕೆ ಪಡೆದಿದ್ದ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮದಲ್ಲೀಗ 20 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.
ಮೇ 24ರವರೆಗೂ ಗ್ರಾಮದಲ್ಲಿ ಒಂದೇ ಒಂದು ಸೋಂಕು ಕಾಣಿಸಿಕೊಂಡಿರಲಿಲ್ಲ. ಈ ಸಮಯದಲ್ಲಿ ರಾಜ್ಯದಲ್ಲಿ ಎರಡನೇ ಅಲೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಹೀಗಿದ್ದರೂ ಮುತ್ತತ್ತಿ ಗ್ರಾಮಸ್ಥರು ಸೋಂಕಿನಿಂದ ಪಾರಾಗಿದ್ದರು.
ಒಟ್ಟು 320 ಜನಸಂಖ್ಯೆ ಇರುವ ಗ್ರಾಮದಲ್ಲಿ ಯಾರೊಬ್ಬರಿಗೂ ಸೋಂಕು ತಗುಲಿರಲಿಲ್ಲ. ಮಂಡ್ಯ ಜಿಲ್ಲಾಡಳಿತ ಗಮನ ಸೆಳೆದಿದ್ದ ಮುತ್ತತ್ತಿ, ಕರೊನಾ ಸೋಂಕು ಮುಕ್ತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ದಟ್ಟ ಅರಣ್ಯದ ಮಧ್ಯೆ ಇರುವ ಮುತ್ತತ್ತಿ ಗ್ರಾಮ, ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ. ಇದೀಗ ಒಂದೇ ಕುಟುಂಬದ ನ್ವಾಲ್ವರಲ್ಲಿ ಸೋಂಕು ದೃಢಪಟ್ಟಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಒಂದೇ ಕುಟುಂಬದ 6 ಜನ ಸೇರಿದಂತೆ ಮತ್ತೆ 13 ಮಂದಿಗೆ ಸೋಂಕು ದೃಢವಾಗಿದೆ.
ಮುತ್ತತ್ತಿ ಸಮೀಪದ ಜಂಗಲ್ ಲಾಡ್ಜ್​ನ 7 ಜನರಿಗೆ ಸೋಂಕು ದೃಢವಾಗಿದೆ. ಹೀಗಾಗಿ ಮುತ್ತತ್ತಿ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಲು‌ ಮಳವಳ್ಳಿ ತಾಲೂಕು ಆಡಳಿತ ಮುಂದಾಗಿದೆ.(ದಿಗ್ವಿಜಯ ನ್ಯೂಸ್​)
ಇದಪ್ಪಾ ಅದೃಷ್ಟ ಅಂದ್ರೆ! ಲಾಕ್​ಡೌನ್​ ಮಧ್ಯೆಯೂ ಒಂದೇ ದಿನದಲ್ಲಿ ಲಕ್ಷಾಧಿಪತಿಯಾದ ರೈತ

VIDEO| ನಾಗಾಲ್ಯಾಂಡ್​-ಅಸ್ಸಾಂ ಗಡಿಯಲ್ಲಿ ಕಾಂಗ್ರೆಸ್​ ಶಾಸಕನ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್​

ವೈರಲ್​ ಆಯ್ತು ಸುಶೀಲ್​ ಕುಮಾರ್​ ದಾಳಿಯ ವಿಡಿಯೋ: ಕುಸ್ತಿಪಟು ಮೇಲಿನ ಹಲ್ಲೆ ಹಿಂದಿನ ಉದ್ದೇಶ ಬಯಲು​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 17 =
Remember me
