ಮಂಡ್ಯ:ಜಾತ್ರೆಯಲ್ಲಿ ರಾಸುಗಳಿಗೆ ನೀಡುವ ಬಹುಮಾನದಲ್ಲಿ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಯುವಕನೋರ್ವ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಿವಾಸದ ಎದುರು ಎತ್ತುಗಳನ್ನು ಕಟ್ಟಿಹಾಕಿ ಪ್ರತಿಭಟನೆ ನಡೆಸಿದ ಘಟನೆ ಪಾಂಡವಪುರ ತಾಲೂಕಿನ ಬೇಬಿಬೆಟ್ಟದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಇಂಗ್ಲಿಷ್​ನಲ್ಲಿ​ ಮಾತನಾಡುವ ವಿಡಿಯೋ ಟ್ರೋಲ್​: ತೆಲುಗು ಮೂಲದ ಹಾಲಿವುಡ್​ ನಟಿ ಆವಂತಿಕಾ ಉತ್ತರ ಹೀಗಿತ್ತು…
ಕ್ಯಾತನಹಳ್ಳಿ ಗ್ರಾಮದ ನಿವಾಸಿ ಪುನೀತ್‌ಕುಮಾರ್ ಎಂಬಾತ ಇದೇ ಗ್ರಾಮದಲ್ಲಿರುವ ದರ್ಶನ್ ಪುಟ್ಟಣ್ಣಯ್ಯ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾನೆ. ಜಾತ್ರೆಯಲ್ಲಿ ರಾಸುಗಳಿಗೆ ನೀಡುವ ಬಹುಮಾನ ವಿಚಾರದಲ್ಲಿ ಶಾಸಕರು ರಾಜಕೀಯ ಮಾಡಿದ್ದಾರೆ. 3.50 ಲಕ್ಷ ರೂ. ಬೆಲೆಬಾಳುವಂತಹ ನಾಲ್ಕು ವಿಭಾಗದ ರಾಸುಗಳನ್ನು ಕಟ್ಟಿದ್ದೇನೆ. ಆದರೆ ನಮಗಿಂತ ಕಳಪೆ ಗುಣಮಟ್ಟದ ಎತ್ತುಗಳಿಗೆ ಬಹುಮಾನ ನೀಡಿದ್ದಾರೆಂದು ಆರೋಪ ಎಸಗಿದ್ದಾರೆ.
ಇದಲ್ಲದೆ ಆಯ್ಕೆ ಮಾಡಿರುವ ಪಟ್ಟಿಯಲ್ಲಿ ಬರೆದಿರುವ ಹೆಸರುಗಳನ್ನು ಅಳಿಸಿ ಮತ್ತೊಬ್ಬರ ಹೆಸರು ಬರೆದು ಬಹುಮಾನ ವಿತರಣೆ ಮಾಡಿದ್ದಾರೆ. ಇದೇ ಎತ್ತುಗಳಿಗೆ ಹೇಮಗಿರಿ ಜಾತ್ರೆಯಲ್ಲಿ ಪ್ರಥಮ ಬಹುಮಾನ ಬಂದಿದೆ. ಚುಂಚನಕಟ್ಟೆ ಜಾತ್ರೆಯಲ್ಲಿಯೂ ಉತ್ತಮ ಎತ್ತುಗಳೆಂದು ಪ್ರಶಂಸೆ ಪಡೆದಿವೆ. ಆದರೆ, ಬೇಬಿಬೆಟ್ಟದ ಜಾತ್ರೆಯಲ್ಲಿ ಬಹುಮಾನ ನೀಡದೆ ವಂಚಿಸಿದ್ದಾರೆಂದು ಕಿಡಿಕಾರಿದರು.
ಇದನ್ನೂ ಓದಿ:ನೀವು ಇದರ ಜೊತೆಗೆ ಉಪ್ಪಿನಕಾಯಿ ತಿನ್ನಲು ಇಷ್ಟಪಡುತ್ತಿದ್ದರೆ ಎಚ್ಚರ! ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು
“ನನಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಶಾಸಕರು ಬಂದು ನನಗೆ ನ್ಯಾಯ ದೊರಕಿಸಿಕೊಡಬೇಕು. ಬಹುಮಾನ ನೀಡಿರುವ ಎತ್ತುಗಳನ್ನು ಇಲ್ಲಿಗೆ ಕರೆಸಿ ಮತ್ತೊಮ್ಮೆ ಪರೀಕ್ಷೆ ಮಾಡಲಿ. ಶಾಸಕರು ಯಾವುದೇ ರಾಜಕೀಯ ಮಾಡುವುದಿಲ್ಲ ಎಂದೇಳಿ ಬಹುಮಾನಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ ಅನ್ಯಾಯ ಮಾಡಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ಫ್ಯಾನ್ಸಿ ನಂಬರ್ ಪ್ಲೇಟ್​ ಹರಾಜು! ಮಾರಾಟದಲ್ಲಿ ಸಿಕ್ತು ಭರ್ಜರಿ ಆದಾಯ, ಒಟ್ಟು ಮೊತ್ತ ಕೇಳಿದ್ರೆ ದಂಗಾಗ್ತೀರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
