ಮಂಡ್ಯ:ನಗರದಲ್ಲಿ ಎರಡು ದಿನದ ಅವಧಿಯಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ಇಬ್ಬರ ಸಾವಿನ ಹಿಂದೆ ಹಣಕಾಸಿನ ವಿಚಾರ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ.
ನೆಹರು ನಗರದ ಕ್ರಿಶ್ಚಿಯನ್ ಕಾಲನಿಯ ನಿವೃತ್ತ ಶಿಕ್ಷಕಿ ವೀಣಾ ಜೋತಿನಿ(63) ಮತ್ತು ಇವರ ಮಗ ನಿತಿನ್ (32) ಮೃತರು. ಭಾನುವಾರ ತಾಯಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿಯೇ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮಗ ಸೋಮವಾರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ವೀಣಾ ಮಗನ ಜತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ನಡುವೆ ಆರ್.ಪಿ ರಸ್ತೆಯಲ್ಲಿದ್ದ ತಮಗೆ ಸೇರಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ಮಾರಾಟ ಮಾಡಿದ್ದರು. ಇದರಿಂದ ಬಂದಿದ್ದ ಹಣವನ್ನು ನಿತಿನ್ ಖರ್ಚು ಮಾಡಿದಲ್ಲದೆ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದನು. ಮಾತ್ರವಲ್ಲದೆ ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದನು ಎನ್ನಲಾಗಿದೆ.
ಕ್ರಿಸ್‌ಮಸ್ ಹಬ್ಬವನ್ನು ತಾಯಿ-ಮಗ ಸಂಭ್ರಮದಿಂದ ಆಚರಿಸಿದ್ದರು. ಆದರೆ ಹೊಸ ವರ್ಷದ ಮೊದಲ ದಿನವೇ ವೀಣಾ ಜೋತಿನಿ ಅವರ ಮೃತದೇಹ ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮಿಮ್ಸ್‌ಗೆ ರವಾನಿಸಿದ್ದರು. ಆದರೆ ಸೋಮವಾರ ಬೆಳಗ್ಗೆ ವಿ.ಸಿ. ಫಾರ್ಮ್ ಗೇಟ್ ಬಳಿಯ ರೈಲ್ವೆ ಹಳಿ ಮೇಲೆ ನಿತಿನ್ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ಏನೆಂದು ತನಿಖೆ ನಂತರವಷ್ಟೇ ಹೊರಬೀಳಬೇಕಿದೆ.
ಜ್ಞಾನಯೋಗಿಯ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ; ಶತಮಾನದ ಸಂತನಿಗೆ ಅಂತಿಮ ನಮನ

ಟಾಲಿವುಡ್​ನಲ್ಲಿ ಮತ್ತೆ ಡ್ರಗ್ಸ್​ ದಂಧೆ ಬಯಲು: ಖ್ಯಾತ ನಟಿಯ ಪತಿಯ ಜತೆ ಉದ್ಯಮಿಯ ಬಂಧನ

ನಟಿ ತಮನ್ನಾ ಡೇಟಿಂಗ್​ ಸೀಕ್ರೆಟ್​ ರಿವೀಲ್​! ಬಾಯ್​ಫ್ರೆಂಡ್​ ಜೊತೆ ಮಿಲ್ಕಿ ಬ್ಯೂಟಿ ಲಿಪ್​ಲಾಕ್​, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
