ಮಂಡ್ಯ:ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ಪುತ್ರ ನಿಖಿಲ್​ ಸೋಲನ್ನು ಮರೆಯೋದಕ್ಕೆ ಆಗುತ್ತಿಲ್ಲ. ಮಂಡ್ಯಕ್ಕೆ ಬಂದಾಗಲೆಲ್ಲ ಮಗನ ಸೋಲಿನ ಬಗ್ಗೆಯೇ ಮಾತನಾಡುತ್ತಲೇ ಇದ್ದಾರೆ. ಭಾನುವಾರವೂ ಇದೇ ವಿಚಾರವನ್ನು ಪ್ರಸ್ತಾಪಿಸಿದ ಎಚ್​ಡಿಕೆ, ಭಾವುಕರಾದರು.
ನಾನು ನಿಖಿಲ್‌ಗೆ ಚುನಾವಣೆಗೆ ನಿಲ್ಲಬೇಡ ಎಂದಿದ್ದೆ. ಹಲವರು ಒತ್ತಾಯಿಸಿ ಮಗನನ್ನು ಚುನಾವಣೆಗೆ ನಿಲ್ಲಿಸಿಬಿಟ್ಟರು. ನಮ್ಮ ಪಕ್ಷ ಗೆದ್ದಾಗ ಐದು ಕಾಲು ಲಕ್ಷ ವೋಟು ಕೊಟ್ಟೀರಿ. ನಾವು ಸೋತಾಗ ಐದು ಮುಕ್ಕಾಲು ಲಕ್ಷ ವೋಟು ಕೊಟ್ಟೀರಿ. ಎಲ್ಲರೂ ಸೇರಿ ಮುಗಿಸಬೇಕು ಎಂದು ಮುಗಿಸಿದ್ರು… ಎನ್ನುತ್ತ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ಆದರೂ ಮಂಡ್ಯ ಜಿಲ್ಲೆಯ ಬಗ್ಗೆ ಬೇಸರವಿಲ್ಲ ಎಂದು ಭಾವುಕರಾದರು.
ಮದ್ದೂರು ತಾಲೂಕಿನ ಬ್ಯಾಡರಹಳ್ಳಿ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಜನರು ಮುಗ್ಧರು. ಎಲ್ಲರನ್ನೂ ನಂಬುತ್ತಾರೆ. ದೇವೇಗೌಡ ಕುಟುಂಬ ಯಾವತ್ತೂ ಮಂಡ್ಯ ಜಿಲ್ಲೆಯನ್ನು ಮರೆಯಲ್ಲ. ನಾನು ರಾಜಕೀಯದಿಂದ‌ ನಿವೃತ್ತಿಯಾಗಬೇಕು ಅಂದುಕೊಂಡಿದ್ದೆ. ಜನರು ತೋರಿಸುವ ಪ್ರೀತಿ ನೋಡಿದಾಗ ನಾನು ಅನ್ಯಾಯ ಮಾಡುತ್ತಿದ್ದೇನೆ ಅನ್ನಿಸುತ್ತೆ. ಈ ವ್ಯವಸ್ಥೆಯಿಂದಾದ ಬೇಸರಕ್ಕೆ ಕ್ಷೇತ್ರದಿಂದ ಹೊರ ಹೋದರೆ ಜನರಿಗೆ ಅನ್ಯಾಯ ಮಾಡಿದಂತಾಗುತ್ತೆ. ಈ ಕಾರಣಕ್ಕೆ ನಾನು ರಾಜಕೀಯದಲ್ಲಿ ಮುಂದುವರಿದಿದ್ದೇನೆ. ನನಗೆ ವೈಯಕ್ತಿಕವಾಗಿ ರಾಜಕೀಯದಲ್ಲಿ ಮುಂದುವರಿಯುವ ಆಸೆಯೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿಖಿಲ್​ ಕುಮಾರಸ್ವಾಮಿ ಸೋತಿದ್ದರು. ಆ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಶ್​ ಸಂಸದೆಯಾಗಿ ಆಯ್ಕೆಯಾದರು.
ಹುಟ್ಟೂರಿನಲ್ಲೇ ಜೋಳಿಗೆ ಹಿಡಿದು ಭಿಕ್ಷೆ ಬೇಡಿದ ಮಾಜಿ ಶಾಸಕ!

ಉಮಾಶ್ರೀ ಕಾರು ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು! ತೀವ್ರ ಸಂಕಟಕ್ಕೆ ಸಿಲುಕಿದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fifteen =
Remember me
