ಬೆಂಗಳೂರು/ಮಂಡ್ಯ:ಸಕ್ಕರೆ ನಾಡಿನ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಷ್​ ಅವರು ಯಾವ ಪಕ್ಷ ಸೇರಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯಕ್ಕೆ ಧುಮ್ಮಿಕ್ಕಿರುವ ಸುಮಲತಾ, ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ನನ್ನ ಆಪ್ತರು, ಹಿತೈಷಿಗಳನ್ನ ಕೇಳಿ ನಿರ್ಧಾರ ಮಾಡಿದ್ದೇನೆ. ನನ್ನ ನಿರ್ಧಾರಕ್ಕೆ ಅಂಬರೀಷ್​ ಆಶೀರ್ವಾದ ಇದೆ ಎಂದು ನಂಬಿದ್ದೇನೆ. ಇವತ್ತಿನಿಂದ ನನ್ನ ಬೆಂಬಲ ನರೇಂದ್ರ ಮೋದಿ ಅವರಿಗೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ಎಂದು ಸುಮಲತಾ ಘೋಷಿಸಿದರು.
ಮಂಡ್ಯದ ಚಾಮುಂಡೇಶ್ವರಿ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿದರು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಬೆಂಬಲಿಗರು ಹಾಗೂ ಪತ್ರಕರ್ತರ ನಡುವೆ ವಾಗ್ವಾದ ನಡೆಯಿತು. ಸುದ್ದಿಗೋಷ್ಠಿಗೆ ತಡವಾಗಿದ್ದಕ್ಕೆ ಬಂದಿದ್ದಕ್ಕೆ ಸುಮಲತಾ ಆಪ್ತರು, ಬೆಂಬಲಿಗರು ಮತ್ತು ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಸುದ್ದಿಗೋಷ್ಠಿಗೆ ತಡವಾಗಿದ್ದಕ್ಕೆ ಸುಮಲತಾ ಅವರು ಪತ್ರಕರ್ತರ ಕ್ಷಮೆ ಕೋರಿದರು.
ಇದನ್ನೂ ಓದಿ:ಹಳೆ ಲವರ್​ ಕಾಲ್ ಮಾಡಿದ್ದಕ್ಕೆ ದಾರಿ ಮಧ್ಯೆ ಹೆಂಡತಿಯನ್ನು ಬಿಟ್ಟ ಪತಿ ಎಸ್ಕೇಪ್!
ಬಳಿಕ ಮಾತು ಮುಂದುವರಿಸಿದ ಸುಮಲತಾ, ರಾಜಕೀಯಕ್ಕೆ ಪ್ರವೇಶ ಮಾಡಿ 4 ವರ್ಷ ಆಗಿದೆ. ನನಗೆ ರಾಜಕೀಯ ಅನಿವಾರ್ಯ ಅಂತ ಇರಲಿಲ್ಲ, ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಬಂದೆ. ರಾಜಕೀಯ ನನ್ನ ಸ್ವಾರ್ಥವಲ್ಲ. ಇದು ಅಂಬರೀಶ್ ಅವರ ಅಭಿಮಾನಿಗಳ ಒತ್ತಾಯ‌ವಾಗಿತ್ತು. ನಮಗೆ ಧೈರ್ಯ ಬರುತ್ತೆ ಅಂತ ಮಾತಲ್ಲಿ ಕಟ್ಟಿ ಹಾಕಿದರು. ಒಂದು ಸರ್ಕಾರವನ್ನು ಎದುರು ಹಾಕಿಕೊಂಡು ನಾನು ಚುನಾವಣೆಗೆ ನಿಂತುಕೊಂಡಿದ್ದೆ. ಸಿಎಂ ಪುತ್ರನ ವಿರುದ್ಧ ನಿಂತಿದ್ದೆ‌ ಎಂದು ಹೇಳಿದರು.
ನನ್ನ, ಮಗನ ಭವಿಷ್ಯ ಯೋಚಿಸಿದ್ದರೆ ನನ್ನ ಹೆಜ್ಜೆ ಬೇರೆ ಆಗಿರುತ್ತಿತ್ತು. ಅಂಬರೀಶ್ ಅವರಿಗಿದ್ದ ಪ್ರಭಾವ ಬಳಸಿ ನಾನು ಅಧಿಕಾರ ಪಡೆಯಬಹುದಿತ್ತು. ಆದರೆ, ನಾನು ಸ್ವಾರ್ಥಕ್ಕೆ ರಾಜಕಾರಣ ಮಾಡಿಲ್ಲ. ಸರ್ಕಾರದ ಎದುರಿಸಿ ನಾನು ಚುನಾವಣೆಗೆ ನಿಂತೆ. ನನಗೆ ಮುಂದೆ ಏನಾಗುತ್ತೆ ಅನ್ನೋ ಯೋಚನೆ ಇರಲಿಲ್ಲ. ಜನರಿಗಾಗಿ ರಾಜಕೀಯಕ್ಕೆ ಬಂದೆ. ಜನರು ತೋರಿದ ಅಭಿಮಾನ ಪ್ರೀತಿಗೆ ಬೆಲೆ ಕೊಡದಿದ್ದರೆ ಮನುಷ್ಯತ್ವ ಇಲ್ಲದಂತಾಗುತ್ತಿತ್ತು. ಅಂಬರೀಶ್ ಅಭಿಮಾನಿಗಳು, ಮಂಡ್ಯ ಜನರಿಗಾಗಿ ಹೋರಾಟ ಮಾಡಿದೆ. ನನಗೆ ಇದ್ಯಾವುದು ಬೇಡ ಎಂದಿದ್ದರೆ ನನಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ನಮ್ಮ ಬ್ಯಾನರ್, ಹೋರ್ಡಿಂಗ್ ಚಿಕ್ಕ ವಯಸ್ಸಿನಿಂದ ಹಾಕುತ್ತಿದ್ದಾರೆ. ನಾನ್ಯಾರು? ಅಂಬರೀಶ್ ಯಾರು? ಎಂಬುದು 40 ವರ್ಷದಿಂದ ಗೊತ್ತಿದೆ. ನನಗೆ ಯಾವುದನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಜನರ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬರಬೇಕಾಯ್ತು. ನನ್ನ ಸ್ವಾರ್ಥಕ್ಕೆ ರಾಜಕೀಯ ಪ್ರವೇಶ ಆಗಲಿಲ್ಲ ಎಂದರು.
ಚುನಾವಣೆಯಲ್ಲಿ ಯಾವ ರೀತಿ ತೇಜೊವಧೆ ಎದುರಿಸಿದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೂ ಜನ ನನಗೆ ಆಶೀರ್ವಾದ ಮಾಡಿದರು. ಚುನಾವಣೆ ಮುಗಿದ ಮೇಲೂ ನನ್ನನ್ನು ಟಾರ್ಗೆಟ್ ಮಾಡಿದ್ರು. ಚುನಾವಣೆಯಲ್ಲಿ ಬಿಜೆಪಿ ಬಹಿರಂಗ ಬೆಂಬಲ ನೀಡಿತ್ತು. ಕಾಂಗ್ರೆಸ್ ಕಾರ್ಯಕರ್ತರು ನನ್ನ ಜೊತೆಗಿದ್ರು. ರೈತ ಸಂಘ, ಸಂಘಟನೆಗಳು ನನ್ನ ಗೆಲುವಿಗೆ ಶ್ರಮಿಸಿದ್ರು‌. ಪ್ರಾಮಾಣಿಕ ಕೆಲಸದ ಪ್ರಯತ್ನದಲ್ಲಿದ್ದಾಗ ನನಗೆ ತೊಂದರೆ ಕೊಡುತ್ತಲೆ ಬಂದ್ರು. ದಿಶಾ ಮೀಟಿಂಗ್ ಸರಿಯಾಗಿ ನಡೆಯಲು ಬಿಡಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸುಮಲತಾ ಅವರು ಭಾವುಕರಾದರು.
ಇದನ್ನೂ ಓದಿ:ತನಿಖಾ ತಂಡದ ಮುಂದೆ ಕೊನೆಗೂ ಕಳಚಿಬಿತ್ತು ಗ್ಲಾಮರಸ್​ ಕೃಷಿ ಅಧಿಕಾರಿಯ ಮುಖವಾಡ!
ಒಬ್ಬೊಬ್ಬರು ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೆಣ್ಣು ಎನ್ನುವುದಕ್ಕಿಂತ ಸಂಸದೆ ಅನ್ನುವುದನ್ನು ನೋಡಲಿಲ್ಲ. ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು ಹೀಗೆ ಎಲ್ಲಾ ಕಡೆ ನಿಂದಿಸಿದ್ರು. ನಾನು ಸಂಸದೆಯಾದ 9 ತಿಂಗಳಿಗೆ ಕೊವಿಡ್ ಬಂತು. ಆರಂಭದಲ್ಲೇ ನಮ್ಮ ಅನುದಾನ ತಡೆದರು ಎನ್ನುವ ಮೂಲಕ ಶ್ರೀರಂಗಪಟ್ಟಣ, ಮೇಲುಕೋಟೆ, ಮದ್ದೂರು ಶಾಸಕರ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದರು. ನನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಕ್ರಮ ಗಣಿಗಾರಿಕೆ ಬಗ್ಗೆ ಸ್ಥಳೀಯರು ಗಮನಕ್ಕೆ ತಂದರು. ಅದಕ್ಕೆ ಕಡಿವಾಣ ಹಾಕಲು ಮತ್ತು ಗಣಿಗಾರಿಕೆಯಿಂದ ಬರಬೇಕಾದ ತೆರಿಗೆ ವಸೂಲಿಗೆ ಕ್ರಮವಹಿಸಿದೆ. ನಾನು ಮನುಸ್ಸು ಮಾಡದಿದ್ದರೇ ಪಾಂಡವಪುರ, ಮೈಶುಗರ್ ಕಾರ್ಖಾನೆ ಆರಂಭ ಆಗ್ತಿರಲಿಲ್ಲ ಮತ್ತು ಅಕ್ರಮ ಗಣಿಗಾರಿಕೆ ನಿಲ್ಲುತ್ತಿರಲಿಲ್ಲ. ಈ ಪ್ರಯತ್ನದಲ್ಲಿ ಎರಡು ಕಡೆ ನನಗೆ ಹಲ್ಲೆ ಯತ್ನ ಆಯ್ತು. ಹಳ್ಳಿಗಳ ಕಡೆ ಹೋದಾಗ ಜನ ನನ್ನನ್ನು ಸ್ಮರಿಸುತ್ತಾರೆ. ಅಂಬಿ ನಂತರ ಹಳ್ಳಿಗಳಿಗೆ ಸಂಸದರು ಯಾರಾದರೂ ಹೋಗಿದ್ದರೆ ಅದು ನಾನು. ಮಾತುಗಳನ್ನು ಯಾರು ಹೆಂಗೆ ಬೇಕಾದ್ರೂ ಆಡಬಹುದು. ಆದರೆ, ನಿಜವಾದ ಅರ್ಥ ಜನರಿಗೆ ಗೊತ್ತಿರುತ್ತದೆ ಎಂದರು.
ಭದ್ರಕೋಟೆ ಅಂತ ಎದೆಹೊಡೆದು ಕೊಂಡು ಹೇಳುವವರು ಮಂಡ್ಯ ಯಾಕೆ ಅಭಿವೃದ್ಧಿ ಮಾಡಲಿಲ್ಲ. ಅಕ್ಕ ಪಕ್ಕದ ಜಿಲ್ಲೆ ಸ್ಪಲ್ಪ ಆದರೂ ಅಭಿವೃದ್ಧಿ ಆಗುತ್ತೆ, ಮಂಡ್ಯ ಯಾಕೆ ಮಾಡಿಲ್ಲ? ಈಗ ಪ್ರಶ್ನೆ ನಾವು ಕೇಳಬೇಕು. ಕೆಆರ್‌ಎಸ್ ಡ್ಯಾಂ ಬಿರುಕು ಕಾಣಿಸಿದೆ ಅಂದಾಗ ಟೀಕೆ ಮಾಡಿದ್ರು. ಕನ್ನಂಬಾಡಿ ಇಲ್ಲ ಅಂದರೆ ಮಂಡ್ಯಾನೇ ಇಲ್ಲ. ಮೈಸೂರು ರಾಜ್ಯರು ಕೊಟ್ಟ ಡ್ಯಾಂ ಇಲ್ಲ ಅಂದರೆ ಮಂಡ್ಯ ಇರುತ್ತಿರಲಿಲ್ಲ. ಅದನ್ನ ಕಾಪಾಡುವ ಕೆಲಸ ನಾವು ಮಾಡಬೇಕಲ್ವಾ? ಬರೀ ರಾಜಕಾರಣ ಬೇಡ, ಜನರಿಗೆ ಏನಾದರೂ ಮಾಡೋಣ. ನಿಮಗೆ ಅಭಿವೃದ್ಧಿ ಬೇಡ, ರಾಜಕಾರಣ ಸಾಕು, ನಿಮಗೆ ನಿಮ್ಮ ಮನೆಯವರಿಗೆ ಒಳ್ಳೆ ಸ್ಥಾನ ಮಾನ ಇದೆ. ಆದರೆ ನಮ್ಮ‌ ಜನರಿಗೆ ಏನಿದೆ ಎಂದು ಸುಮಲತಾ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ತಮ್ಮ ಸಾಧನೆಗಳ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಷ್​, ಸಾವಿರಾರು ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇವೆ ಎಂದರು. ಶಿಥಿಲಾವಸ್ಥೆಯಲ್ಲಿದ್ದ ಕೇಂದ್ರೀಯ ವಿದ್ಯಾಲಯ ಅಭಿವೃದ್ಧಿ ಮಾಡಲಾಗಿದೆ. ಮಂಡ್ಯಕ್ಕೆ ತಾಯಿ ಮಕ್ಕಳ ಆಸ್ಪತ್ರೆ, ವಿವಿಧೆಡೆ ಸ್ಕೈವಾಕ್ ನಿರ್ಮಾಣ, ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್, ಮಹಾವೀರ ವೃತ್ತದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸಿದೆವು. ಕೊವಿಡ್ ವೇಳೆ 6 ವೆಂಟಿಲೇಟರ್ ಕೊಡಿಸಿದ್ದೆನು. ವಿಕಲಚೇತನರಿಗೆ ಎಂಪಿ ಅನುದಾನದಲ್ಲಿ ಎಲೆಕ್ಟ್ರಿಕ್ ವಾಹನ ವಿತರಣೆ ಮಾಡಲಾಗಿದೆ. ಇಡೀ ದೇಶದಲ್ಲಿ ವಿಕಲಚೇತನರಿಗೆ ಎಂಪಿ ಫಂಡ್ ಹೆಚ್ಚು ಬಳಸಿದ್ದು ನಾನು. 26 ಕುಡಿಯುವ ನೀರಿನ ಘಟಕ, ಶಾಲೆ, ಅಂಗನವಾಡಿ, ಬಸ್ ನಿಲ್ದಾಣ, ಸಮುದಾಯ ಭವನ ನಿರ್ಮಾಣ ಮಾಡಿದ್ದೇವೆ. ಮಂಡ್ಯ ಅಭಿವೃದ್ಧಿ ಕುರಿತು ಹೆಚ್ಚು ದಿಶಾ ಸಭೆ ಮಾಡಿದ್ದು ನಾನು. ಎಂಪಿ ಅನುದಾನ ಸಮರ್ಪಕವಾಗಿ ಬಳಸಿದ ಹೆಗ್ಗಳಿಕೆ ಇದೆ. ಹಾಲಹಳ್ಳಿ ಸ್ಲಂ ನಿವಾಸಿಗಳಿಗೆ ಮನೆ ಹಂಚಿಕೆ ಮಾಡಿದ್ದೇವೆ. ನರೇಗಾ ಯೋಜನೆಯಲ್ಲಿ ಮಂಡ್ಯ ಮೊದಲ ಸ್ಥಾನದಲ್ಲಿದೆ. ನಾಳೆ ದಿನ ಇದನ್ನೆಲ್ಲಾ ನಾವೆ ಮಾಡ್ಸಿದ್ದು ಅಂತಾ ಬರಬಹುದು? ಪಕ್ಷೇತರವಾಗಿ ಆಯ್ಕೆಯಾದ ನಾನು ಇಷ್ಟೆಲ್ಲಾ ಮಾಡಿರಬೇಕಾದರೆ.ನಿಮಗೆ ಅಷ್ಟು ಪವರ್ ಇತ್ತಲ್ಲ ಮಂಡ್ಯಕ್ಕೆ ಏನು ಮಾಡಿದ್ದೀರಾ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್-ಪವಿತ್ರಾ! ರಮ್ಯಾ ಸಂಬಂಧಕ್ಕೆ ಫುಲ್​ಸ್ಟಾಪ್ ಇಟ್ಟು ಹೊಸ ಜೀವನ ಆರಂಭ
ಇದು ನನ್ನ ಭವಿಷ್ಯ ಅಲ್ಲ, ಇದು ಮಂಡ್ಯ ಜಿಲ್ಲೆ ಅಭಿವೃದ್ಧಿ ವಿಚಾರ. ಈ ನಿರ್ಧಾರ ಮಾಡಲು 4 ವರ್ಷ ತೆಗೆದುಕೊಂಡಿದ್ದೇನೆ. ನಾನು ಇಷ್ಟು ಯೋಜನೆ ತರಲು ಸಹಕಾರ ಮಾಡಿದ್ದು ಕೇಂದ್ರ ಬಿಜೆಪಿ ಸರ್ಕಾರ. ನನ್ನ ಇವತ್ತಿನ ನಿರ್ಧಾರ ಒಂದಷ್ಟು ಜನಕ್ಕೆ ಬೇಜಾರು ಆಗಬಹುದು. ನನ್ನ ಭವಿಷ್ಯ ಹೇಗಿರುತ್ತೆ ಆತಂಕ ಕಾಡಬಹುದು. ಆದರೆ ನನಗೆ ಅದ್ಯಾವ ಯೋಚನೆಯೂ ಇಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಸೇರುವ ಸುಳಿವನ್ನು ಸುಮಲತಾ ನೀಡಿದರು.
ನನ್ನ ಚುನಾವಣೆಯಲ್ಲಿ ಕೈ ಹಿಡಿದವರನ್ನು ನಾನು ಮರೆಯಲ್ಲ. ನನ್ನ ಜೊತೆ ಇರಲಿ ಇರದಿರಲಿ ನಾನು ಅವರನ್ನು ಮರೆಯಲ್ಲ. ನಾನು ದ್ವೇಷದ ರಾಜಕಾರಣ ಮಾಡಲ್ಲ. ನನ್ನ ನಿರ್ಧಾರ ಬಳಿಕ ನನ್ನ ಜೊತೆಗಿದ್ದ ಒಂದಷ್ಟು ಮಂದಿ ಅವರ ಭವಿಷ್ಯ ಯೋಚಿಸುತ್ತಾರೆ. ನಾನು ಯಾರನ್ನು ದ್ವೇಷಿಸುವುದಿಲ್ಲ. ಬದಲಾವಣೆ ಬಯಸಿರುವ ನನಗೆ ಇನ್ನಷ್ಟು ಶಕ್ತಿ ಅವಶ್ಯಕ ಎಂದು ಹೇಳಿದರು.
ಸುದ್ದಿಗೋಷ್ಠಿಯ ವೇಳೆ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಇದ್ದರು. ಸುದ್ದಿಗೋಷ್ಠಿಗೂ ಮುನ್ನ ಮಂಡ್ಯ ನಗರದ ಅಧಿದೇವತೆ ಕಾಳಿಕಾಂಭ ದೇಗುಲಕ್ಕೆ ಸುಮಲತಾ ಭೇಟಿ ನೀಡಿದರು. ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಲೋಕಸಭಾ ಚುನಾವಣೆಗೂ ಮನ್ನವೂ ಇದೇ ದೇಗುಲಕ್ಕೆ ಸುಮಲತಾ ಭೇಟಿ ನೀಡಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಮತ್ತೆ ತಮ್ಮ ರಾಜಕೀಯ ನಿಲುವು ಪ್ರಕಟಣೆಗೂ ಮುನ್ನ ದೇವಿ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
ದುಬೈನಿಂದ ಉದ್ಯಮಿಗಳಿಂದ ಆಹ್ವಾನದುಬೈನಿಂದ ಬಂದ ಉದ್ಯಮಿಗಳು ಸಮಲತಾ ಅವರನ್ನು ದುಬೈನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನ ನೀಡಿದರು. ಸಂಸತ್ತಿನಲ್ಲಿ ಸಂಸದೆ ಕನ್ನಡದಲ್ಲಿ ಮಾತನಾಡಿ, ಕನ್ನಡಾಭಿಮಾನ ಮೆರೆದಿದ್ದನ್ನು ಶ್ಲಾಘಿಸಿದರು. ನವೆಂಬರ್ 12 ರಂದು ದುಬೈನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವಕ್ಕೆ ದುಬೈ ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿಗಳು ಆಹ್ವಾನ ನೀಡಿದ್ದಾರೆ.
ಸಾರ್ ನೀವು ಕೇಳಿದ್ದಷ್ಟು ಹಣ ನನ್ನತ್ರ ಇಲ್ಲ, ಈ ಎತ್ತು ಇಟ್ಕೊಳ್ಳಿ: ಅಧಿಕಾರಿಗಳ ಹಣದಾಹ, ಹಾವೇರಿ ರೈತನ ಅಳಲು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್-ಪವಿತ್ರಾ! ರಮ್ಯಾ ಸಂಬಂಧಕ್ಕೆ ಫುಲ್​ಸ್ಟಾಪ್ ಇಟ್ಟು ಹೊಸ ಜೀವನ ಆರಂಭ

ಸ್ವಲ್ಪ ಸೈಡಿಗೆ ಬನ್ನಿ ಎಂದಿದ್ದಕ್ಕೆ ಯುವತಿ ಗರಂ; ಲಾಂಗ್ ಬೀಸಿದ ರೌಡಿಶೀಟರ್..!

Sign in to your account
Please enter an answer in digits:18 − thirteen =
Remember me
