ಮಂಡ್ಯ:ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸಪ್ಪನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ಸಂಜಯ್ ಬಂಧಿತ ಆರೋಪಿ. ಕೆ.ಎಂ. ದೊಡ್ಡಿಯ ಅಸಲಿ ಪೊಲೀಸರು ನಕಲಿ ಪೊಲೀಸ್​ನನ್ನು ಬಂಧಿಸಿದ್ದಾರೆ.
ಕೆ.ಎಂ.ದೊಡ್ಡಿ ಸುತ್ತಮುತ್ತ ದ್ವಿಚಕ್ರ ವಾಹನಗಳನ್ನು ತಡೆದು ತಪಾಸಣಾ ಕಾರ್ಯ ಮಾಡುವ ನೆಪದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ ಎಂದು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ. ಈ ಬಗ್ಗೆ ಕೆ.ಎಂ.ದೊಡ್ಡಿ ಠಾಣೆಯ ಇನ್​ಸ್ಪೆಕ್ಟರ್​ ಆನಂದ್​ಗೆ ಸಾರ್ವಜನಿಕರು ದೂರು ನೀಡಿದ್ದರು.
ಮಾಹಿತಿ ಬೆನ್ನಲ್ಲೆ ತಕ್ಷಣ ಎಚ್ಚೆತ್ತ ರಿಯಲ್ ಪೊಲೀಸರು ಕಾರ್ಯಾಚರಣೆಗೆ ಇಳಿದು ಸಂಜಯ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೊಬ್ಬ ನಕಲಿ ಪೊಲೀಸ್ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಇದಾದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಿದೆ.(ದಿಗ್ವಿಜಯ ನ್ಯೂಸ್​)
ಬೆಂಗ್ಳೂರಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಕೇಸ್! ಕಾರಿನ ಡಿಕ್ಕಿಗೆ ಹಾರಿಹೋಗಿ ಬಿದ್ದ ಮಹಿಳೆ, ಇಬ್ಬರ ಸ್ಥಿತಿ ಗಂಭೀರ

ಪುಲ್ವಾಮಾ ಉಗ್ರದಾಳಿಗೆ ನಾಲ್ಕು ವರ್ಷ: ಇಂದು ಕರಾಳ ದಿನ, ಅಂದು ನಡೆದದ್ದೇನು?

ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​: ಆರ್​ಬಿಸಿ ತಂಡ ಸೇರಿದ್ದಕ್ಕೆ ಸ್ಮೃತಿ ಮಂದನಾ ಸಂಭ್ರಮಿಸಿದ ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 14 =
Remember me
