ಮಂಡ್ಯ:ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಸಮೀಪದ ಹುಲಿಕೆರೆ ಗ್ರಾಮದಲ್ಲಿ ಪೊಲೀಸ್​ ಮುಖ್ಯಪೇದೆಯೊಬ್ಬರ ಮನೆಗೆ ಕನ್ನ ಹಾಕಿರುವ ಖದೀಮರು, 3.80 ಲಕ್ಷ ರೂ. ಮೌಲ್ಯದ 95 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾರೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್​ಕನ್ಸ್​ಟೇಬಲ್ ರವಿ ಅವರು ನಿನ್ನೆ(ಶುಕ್ರವಾರ) ಪತ್ನಿ ಜೊತೆ ಮೈಸೂರಿನ ಆಸ್ಪತ್ರೆಗೆ ತೆರಳಿದ್ದರು. ಸಂಜೆ ವಾಪಸ್​ ಮನೆಗೆ ಬಂದಾಗ ಚಿನ್ನಾಭರಣ ಕಳವಾಗಿರುವುದು ಗೊತ್ತಾಗಿದೆ. ಮನೆಯ ಬಾಗಿಲು ಹಾಗೂ ಬೀರುವನ್ನು ಒಡೆಯದೆ ಕೀ ಮೂಲಕವೇ ತೆರೆದು ಕಳ್ಳತನ ಮಾಡಿದ್ದಾರೆ.
ಮೈಸೂರಿಗೆ ಹೋಗುವಾಗ ರವಿ ಅವರು ಮನೆಯ ಮುಖ್ಯಬಾಗಿಲ ಕೀಯನ್ನು ಮನೆ ಮುಂದಿರುವ ಒಂದು ಜಾಗದಲ್ಲಿಟ್ಟು ಹೋಗಿದ್ದರು. ಅದನ್ನು ನೋಡಿರುವ ವ್ಯಕ್ತಿ ಕಳ್ಳತನ ಮಾಡಿರುವುದಾಗಿ ರವಿ ಪತ್ನಿ ಬಿಂದು, ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಸಿಪಿಐ ಪುನೀತ್ ಮತ್ತು ಎಎಸೈ ಚೆನ್ನಂಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಸೈಕ್ಲೋನ್​ ಎಫೆಕ್ಟ್​: ಬೆಂಗಳೂರು ಸೇರಿದಂತೆ ಹಲವೆಡೆ ರಾತ್ರಿಯಿಡೀ ತುಂತುರು ಮಳೆ, ರಾಜ್ಯದಲ್ಲಿ ಥಂಡಿ ವಾತಾವರಣ

ಒಂದೇ ರಾತ್ರಿ 2 ಬಾರಿ ಸಂಭೋಗಿಸಲು ನಿರಾಕರಿಸಿದ ಪತ್ನಿಯನ್ನೇ ಕೊಂದು ಹೈಡ್ರಾಮ! ಈತ ಕಟ್ಟಿದ ಕಥೆ ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
