ಮಂಡ್ಯ:ಸ್ಯಾಂಟ್ರೋ ರವಿ ಎಂಬ ಹೆಸರು ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಡಳಿತ ಪಕ್ಷದ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ವಿರೋಧ ಪಕ್ಷದ ನಾಯಕರ ಬಾಯಿಯಲ್ಲೂ ಈ ರವಿಯದ್ದೇ ಮಾತು. ಹಾಗಾದರೆ, ಈ ಸ್ಯಾಂಟ್ರೋ ರವಿ ಯಾರು? ಈತನ ಹೆಸರು ರಾಜಕಾರಣಿಗಳ ಜೊತೆ ಏಕೆ ಥಳಕು ಹಾಕಿಕೊಂಡಿದೆ? ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಯಾಂಟ್ರೋ ರವಿ ಹಿನ್ನೆಲೆ ಏನು ಎಂಬುದರ ವಿವರ ಇಲ್ಲಿದೆ..
ಅಂದಹಾಗೆ 52 ವರ್ಷದ ಸ್ಯಾಂಟ್ರೋ ರವಿಯ ಒರಿಜಿನಲ್ ಹೆಸರು ಮಂಜುನಾಥ್. ಈತನ ಮೂಲ ಮಂಡ್ಯ. ಸದ್ಯ ಈತ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಸ್ಯಾಂಟ್ರೋ ರವಿ ಬೆಳದಿದ್ದು ಸುಸಂಸ್ಕೃತ ಕುಟುಂಬದಲ್ಲಿ. ರವಿಯ ತಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್​ಪಿ ಆಗಿದ್ದರು. ಆದರೆ, ತಂದೆ ಶಿಸ್ತಿನಿಂದ ಬೆಳೆಸಿದರೂ ರವಿ ಮಾತ್ರ ಶಿಸ್ತು ಕಲಿಯಲಿಲ್ಲ. ತಂದೆ ಮರಣದ ಬಳಿಕ ರವಿ ದುರ್ನಡತೆ ಇನ್ನಷ್ಟು ಹೆಚ್ಚಾಯಿತು.
ಹೆತ್ತ ತಾಯಿ ಹಾಗೂ ಸೋದರರಿಗೆ ಪ್ರತಿ ದಿನ ಸ್ಯಾಂಟ್ರೋ ರವಿ ಕಿರುಕುಳ ನೀಡುತ್ತಿದ್ದನಂತೆ. ಸ್ಯಾಂಟ್ರೋ ರವಿ ಸರಿಯಾಗಿ ಓದುತ್ತಿರಲಿಲ್ಲ. ಪಿಯುಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ 1995ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಪುಡಿರೌಡಿಗಳ ಜೊತೆ ಸೇರಿ ಅಸಭ್ಯತನ ಮೆರೆಯುತ್ತಿದ್ದ.
2000ನೇ ಇಸವಿಯಿಂದಲೂ ಸ್ಯಾಂಟ್ರೋ ರವಿ ದಂಧೆ ಮಾಡುತ್ತಿದ್ದ. ಮೈಸೂರು, ಬೆಂಗಳೂರು ಸೇರಿ ನಾನಾ ಕಡೆ ಈತನ ವಿರುದ್ಧ ಪ್ರಕರಣಗಳಿವೆ. ಆರಂಭದಲ್ಲಿ ಕಳ್ಳತನಕ್ಕಿಳಿದಿದ್ದ ರವಿ, ನಂತರದಲ್ಲಿ ಅಪಹರಣ ಮತ್ತು ವೇಶ್ಯಾವಾಟಿಕೆ ದಂಧೆಗೆ ಇಳಿದಿದ್ದ. ಹಲವು ಬಾರಿ ಈತ ಜೈಲಿಗೂ ಹೋಗಿ ಬಂದಿದ್ದಾನೆ. ತನ್ನ ಕೃತ್ಯಕ್ಕೆ ಸ್ಯಾಂಟ್ರೋ ಕಾರನ್ನೇ ಬಳಸುತ್ತಿದ್ದರಿಂದ ಈತನಿಗೆ ಸ್ಯಾಂಟ್ರೋ ರವಿ ಎಂದು ಬಂದಿತು. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಪೂರೈಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಹಲವು ಬಾರಿ ಸ್ಯಾಂಟ್ರೋ ರವಿಗೆ ಪೊಲೀಸರು ತಮ್ಮ ಲಾಠಿ ರುಚಿಯನ್ನು ತೋರಿಸಿದ್ದಾರೆ. ಪೊಲೀಸರ ಏಟಿಗೆ ಭಯ ಬಿದ್ದು ರವಿ ಮೈಸೂರು ಸೇರಿದ್ದ. ಮಂಡ್ಯದಲ್ಲಿ ಇದ್ದಾಗ ಮಂಜುನಾಥ್ ಅಂತಾ ಹೆಸರು ಇಟ್ಟುಕೊಂಡಿದ್ದ. ಯಾವಾಗ ಮೈಸೂರಿಗೆ ಹೋಗಿ ನೆಲೆಸಿದನೋ ಆಗ ಸ್ಯಾಂಟ್ರೋ ರವಿಯಾಗಿ ಹೆಸರು ಬದಲಾಯಿಸಿಕೊಂಡ. ಮೈಸೂರಿನಲ್ಲಿ ವೇಶ್ಯೆವಾಟಿಕೆಯಲ್ಲಿ ಚಿಗುರಿದ ಸ್ಯಾಂಟ್ರೋ ರವಿ, ಹಿರಿಯ ಅಧಿಕಾರಿಗಳು, ರಾಜಕಾರಣಿಗಳಿಗೆ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.
ತನ್ನ ಕೃತ್ಯ ಬಯಲು‌ ಮಾಡಿದವರ ವಿರುದ್ಧ ರಾಜಕೀಯ ಪ್ರಭಾವ ಬಳಸಿ ಕೇಸ್‌ ದಾಖಲಿಸುತ್ತಿದ್ದ. ಇಂದು ಹೆಮ್ಮರವಾಗಿ ಬೆಳೆದಿರುವ ಸ್ಯಾಂಟ್ರೋ ರವಿಗೆ ಬೆಂಗಳೂರಿನಲ್ಲಿ 3 ಮನೆ, ವಿಲ್ಸನ್‌ ಗಾರ್ಡನ್‌, ಆರ್‌ಆರ್‌ ನಗರ ಹಾಗೂ ಮಲ್ಲೇಶ್ವರಂನಲ್ಲೂ ಮನೆಗಳಿವೆ. ಮೈಸೂರಿನಲ್ಲೂ ಮನೆಗಳಿವೆ ಎಂದು ತಿಳಿದುಬಂದಿದೆ. ಮೈಸೂರಿನ ಯುವತಿಯೊಬ್ಬಳು ರವಿ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಮೈಸೂರು ಪೊಲೀಸರು ವಿಶೇಷ ತಂಡ ರಚಿಸಿ ಸ್ಯಾಂಟ್ರೋ ರವಿಗಾಗಿ ಬಲೆಗ ಬೀಸಿದ್ದಾರೆ.
ಬಾಂಬೆಗೆ ಹೋಗಿದ್ದ ರಾಜಕಾರಣಿಗಳ ಜೊತೆ 12 ಹುಡುಗಿಯರನ್ನು ಈತ ಕಳುಹಿಸಿದ್ದ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸ್ಯಾಂಟ್ರೋ ರವಿ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ.(ದಿಗ್ವಿಜಯ ನ್ಯೂಸ್​)
ಬಿರಿಯಾನಿ ತಿಂದು ಯುವತಿ ದುರಂತ ಸಾವು: ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಮೃತಳ ಸಹೋದರಿ…

ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

ಬಾಲಿವುಡ್​ನಲ್ಲಿ ಕನ್ನಡ ನಿರ್ದೇಶಕರು; ಹಿಂದಿಯಲ್ಲಿ ಪವನ್, ಹರಿ, ರಾಜ್ ಆ್ಯಕ್ಷನ್-ಕಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
