ಮಂಡ್ಯ:ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುವ ಮುನ್ನವೇ ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಈ ಬಾರಿ ನಾಗಮಂಗಲ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಜೆಡಿಎಸ್​ನಿಂದ ಉಚ್ಛಾಟನೆಗೊಂಡಿರುವ ಶಿವರಾಮೇಗೌಡ, ಜೆಡಿಎಸ್​ ಬಿಟ್ಟು ಕಾಂಗ್ರೆಸ್​ ಸೇರಿದ ಎನ್​. ಚಲುವರಾಯಸ್ವಾಮಿ ಹಾಗೂ ಹಾಲಿ ಜೆಡಿಎಸ್​ ಶಾಸಕ ಸುರೇಶ್​ ಗೌಡ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇರುವುದರಿಂದ ಕಣದಲ್ಲಿ ಭರ್ಜರಿ ಪ್ರಚಾರ ಈಗಾಗಲೇ ಆರಂಭವಾಗಿದೆ.
ಇದೀಗ ಶಾಸಕ ಸುರೇಶ್ ಗೌಡ ಪರವಾಗಿ ಮಗಳು ಧನ್ಯತಾ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ನಾಗಮಂಗಲ ಕ್ಷೇತ್ರದ ಹಳ್ಳಿಗಳಲ್ಲಿ ನಿತ್ಯದ ಪ್ರಚಾರದಲ್ಲಿ ತೊಡಗಿಕೊಂಡಿರುವ ಧನ್ಯತಾ, ನಾನು ಮೊದಲ ಬಾರಿಗೆ ತಂದೆಯ ಪರ ಪ್ರಚಾರಕ್ಕೆ ಬಂದಿದ್ದೇನೆ. ಈ ಬಾರಿ ನಮ್ಮ ತಂದೆ ಸೋಲಿಸಲು ಮೂವರು ನಿಂತಿದ್ದಾರೆ. ಹೇಗಾದರೂ ಮಾಡಿ‌ ನಮ್ಮ ತಂದೆ ಸೋಲಿಸಬೇಕು ಅಂದುಕೊಂಡಿದ್ದಾರೆ. ಈ ಬಾರಿ ನಿಮ್ಮ ಮನೆಯಿಂದ ಬರುವ ಒಂದೊಂದು ಮತವೂ ಮುಖ್ಯ. ದಯವಿಟ್ಟು ಎಲ್ಲ ಸಹಕಾರ ಮಾಡಿ, ಈ ಬಾರಿಯೂ ನಮ್ಮ‌ ತಂದೆಯನ್ನು ಗೆಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.
ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆಯ ಬಗ್ಗೆ ಎಲ್ಲರಿಗೂ ತಿಳಿಸಿ. ನಮ್ಮ ತಂದೆ ಸತತ ಎರಡು ಬಾರಿ ಎಂಎಲ್‌ಎ ಆಗಿಲ್ಲ. ಈ‌ ಬಾರಿ ದಯವಿಟ್ಟು ಅವಕಾಶ ಮಾಡಿಕೊಡಿ. ನಮ್ಮ ತಂದೆ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಹೀಗಾಗಿ ನಮ್ಮ ತಂದೆಗೆ ದಯವಿಟ್ಟು ಸಹಕಾರ ಮಾಡಿ ಎಂದು ಧನ್ಯತಾ ಮನವಿ ಮಾಡಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಗಾಯಕಿ ವಾಣಿ ಜಯರಾಂ ನಿಧನ: ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆಗಿಳಿದ ಚೆನ್ನೈ ಪೊಲೀಸರು

ಚೀನಾದ ಅನುಮಾನಾಸ್ಪದ ಪತ್ತೇದಾರಿ ಬಲೂನ್​ ಹೊಡೆದುರುಳಿಸಿದ ಅಮೆರಿಕ!

ಜಾತಿ ಪ್ರಮಾಣಪತ್ರಕ್ಕೆ ಅರ್ಜಿಸಲ್ಲಿಸಿದ ಶ್ವಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
