ಮಂಡ್ಯ:ಮಳವಳ್ಳಿಯಲ್ಲಿ (Malavalli minor girl rape case) ಟ್ಯೂಷನ್​ ಮೇಲ್ವಿಚಾರಕನ ಕಾಮದಾಹಕ್ಕೆ ಬಾಲಕಿಯೊಬ್ಬಳು ಬಲಿಯಾದ ಘಟನೆ ಮಾಸುವ ಮುನ್ನವೇ ಮಂಡ್ಯ(Mandya)ದಲ್ಲಿ ಮತ್ತೊಂದು ಕಹಿ ಘಟನೆ ವರದಿಯಾಗಿದೆ. ಮುಖ್ಯಶಿಕ್ಷಕ (Teacher)ನೊಬ್ಬನ ಕರಾಳ ಮುಖ ಬಯಲಾಗಿದ್ದು, ಆತನ ಕಿರುಕುಳ ಹಾಗೂ ಅಸಭ್ಯ ವರ್ತನೆಯಿಂದ ಬೇಸತ್ತು ಮಕ್ಕಳೇ ಸಿಡಿದೆದ್ದಿದ್ದಾರೆ.
ಪಾಂಡವಪುರ (Pandavapura) ತಾಲೂಕಿನ ಕಟ್ಟೇರಿ ಗ್ರಾಮದ RMSV ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶಿಕ್ಷಕನಿಗೆ ವಿದ್ಯಾರ್ಥಿನಿಯರೆಲ್ಲ ಸೇರಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರೌಢ ಶಾಲೆ ಮುಖ್ಯಶಿಕ್ಷಕ (Head Master) ಚಿನ್ಮಯಮೂರ್ತಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಮುಖ್ಯಶಿಕ್ಷಕನಾಗಿದ್ದರಿಂದ ಚಿನ್ಮಯಮೂರ್ತಿಗೆ ಹಾಸ್ಟೆಲ್ (Girls Hostel) ಉಸ್ತುವಾರಿಯನ್ನು ನೀಡಲಾಗಿತ್ತು. ಪ್ರತಿ ನಿತ್ಯ ಸಂಜೆ ಸಮಯದಲ್ಲಿ ಹಾಸ್ಟೆಲ್​ಗೆ ಬರುತ್ತಿದ್ದ ಚಿನ್ಮಯಮೂರ್ತಿ, ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಅಶ್ಲೀಲ ವಿಡಿಯೋಗಳನ್ನು ತೋರಿಸುವ ಜೊತೆಗೆ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನಂತೆ. ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಸಹ ಹಾಕುತ್ತಿದ್ದನಂತೆ. ಬಾಯ್ಬಿಟ್ಟರೆ ಟಿಸಿಯಲ್ಲಿ ಕೆಟ್ಟವಳು ಅಥವಾ ನಡತೆ ಸರಿಯಿಲ್ಲ ಎಂದು ನಮೂದಿಸುವುದಾಗಿ ಹೆದರಿಸುತ್ತಿದ್ದನಂತೆ. ಇಷ್ಟು ವರ್ಷ ಆತನ ದೌರ್ಜನ್ಯ ಸಹಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ಇದೀಗ ಸಿಡಿದೆದ್ದಿದ್ದಾರೆ.
ನಿನ್ನೆ (ಡಿ.14) ರಾತ್ರಿಯೂ ಒಬ್ಬಾಕೆಯನ್ನ ಕೊಠಡಿಗೆ ಕರೆಸಿಕೊಂಡ ಚಿನ್ಮಯಮೂರ್ತಿ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಭಯದಿಂದ ವಿದ್ಯಾರ್ಥಿನಿ ಕೂಗಿಕೊಂಡಾಗ ಇತರೆ ವಿದ್ಯಾರ್ಥಿನಿಯರು ನೆರವಿಗೆ ಬಂದಿದ್ದಾರೆ. ಬಳಿಕ ಕೊಠಡಿಯಲ್ಲಿ ಕೂಡಿ ಹಾಕಿ ಮುಖ್ಯಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ಅಲ್ಲದೆ, ಹಾಸ್ಟೆಲ್​ನಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ. ಈ ವಿಚಾರ ತಿಳಿದು ಹಾಸ್ಟೆಲ್ ಬಳಿಗೆ ಬಂದ ಗ್ರಾಮಸ್ಥರೂ ಸಹ ಆತನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸದ್ಯ ಆರೋಪಿ ಚಿನ್ಮಯಮೂರ್ತಿಯನ್ನು ವಶಕ್ಕೆ ಪಡೆದಿರುವ KRS ಠಾಣೆ ಪೊಲೀಸರು, ನಿಲಯ ಪಾಲಕಿ ಕೆ.ಎಸ್.ನಮಿತ ನೀಡಿದ ದೂರು ಆಧರಿಸಿ ಎಫ್​ಐಆರ್​ ದಾಖಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
VIDEO| ಆಸೆಯಿಂದ ವಧುವಿನ ಕೆನ್ನೆಗೆ ಚುಂಬಿಸಲು ಹೋದ ವರನಿಗೆ ವೇದಿಕೆಯಲ್ಲೇ ಕಾದಿತ್ತು ಭಾರಿ ಶಾಕ್​!

ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

ಜೈಲು ಪಾಲಾಗಲಿದ್ದಾರೆ ಅನುಭವ ಸಿನಿಮಾ ಖ್ಯಾತಿಯ ಅಭಿನಯಾ! ಹೈಕೋರ್ಟ್​ನಿಂದ 2 ವರ್ಷ ಶಿಕ್ಷೆ ಪ್ರಕಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
