ಮಂಡ್ಯ:ಆನ್​ಲೈನ್​ ಮೂಲಕ ಲಂಚ ಸ್ವೀಕರಿಸಿದ್ದಲ್ಲದೆ, ಕೆಲಸ ಮಾಡಿಕೊಡದೇ ಸತಾಯಿಸುತ್ತಿರುವ ಗ್ರಾಮ ಲೆಕ್ಕಿಗನ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿರುವ ಘಟನೆ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ.
ಇ-ಸ್ವತ್ತು ಮಾಡಿಕೊಡಲು ಫೋನ್ ಪೇ ಮೂಲಕ ಲಂಚ ಸ್ವೀಕರಿಸಿರುವ ಆರೋಪ ನಾಗಮಂಗಲ ತಾಲೂಕಿನ ಲಾಳನಕೆರೆ ವೃತ್ತದ ಗ್ರಾಮಲೆಕ್ಕಿಗ ನಿಂಗಪ್ಪ ಸುರಪುರ ವಿರುದ್ಧ ಕೇಳಿಬಂದಿದೆ. ಇದೀಗ ಸಂತ್ರಸ್ತೆ ದಾಖಲೆ ಸಮೇತ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಬೆಂ-ಮೈ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿದ ವ್ಯಕ್ತಿಗೆ ಶಾಕ್​! ADGP ಬಂದು ಹೋದ ದಿನವೇ ಭಯಾನಕ ಘಟನೆ
ಮೀನಾಕ್ಷಿ ಎಂಬ ಮಹಿಳೆಯಿಂದ 66 ಸಾವಿರ ರೂ. ಲಂಚ ಪಡೆದಿರುವ ಆರೋಪವಿದೆ. ಹಣ ಪಡೆದು ವರ್ಷವಾದರೂ ಖಾತೆ ಮಾಡಿಕೊಡದೆ ಸತಾಯಿಸುತ್ತಿದ್ದಾರಂತೆ. ಇದರಿಂದ ಕಣ್ಣೀರಾಕಿರುವ ಸಂತ್ರಸ್ತೆ, ನಾಗಮಂಗಲ ತಹಸೀಲ್ದಾರ್​ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇತ್ತ ದೂರು ಕೊಡುತ್ತಿದ್ದಂತೆ ಲಂಚಬಾಕ ಗ್ರಾಮ ಲೆಕ್ಕಿಗ ಕಚೇರಿಗೂ ಬರದೇ ಗೈರಾಗುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.(ಏಜೆನ್ಸೀಸ್​)
ಆನ್​ಲೈನ್​ ಗೇಮ್​ನಿಂದ 65 ಲಕ್ಷಕ್ಕೂ ಅಧಿಕ ಹಣ ಲಾಸ್: ಬದುಕು ಅಂತ್ಯಗೊಳಿಸಿದ ಶಿರಸಿ ಯುವಕ​​

Diabetes Control Tips: ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವ ಅತ್ಯುತ್ತಮ ಆಹಾರಗಳಿವು…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:5 × 4 =
Remember me
