ಮಂಡ್ಯ:ಇತ್ತ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದರೆ, ಅತ್ತ ಆಕೆಯ ಪತಿ ಶವವಾಗಿ ಮನೆಗೆ ಮರಳಿದ ದಾರುಣ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಸೋಮಶೇಖರ್(28) ಮೃತ ದುರ್ದೈವಿ. ಕಳೆದ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೋಮಶೇಖರ್​ ಸ್ನೇಹಿತನ ಬರ್ತಡೇ ಪಾರ್ಟಿಗೆ ತೆರಳಿದ್ದ. ಈ ವೇಳೆ ನಾಲೆಯಲ್ಲಿ ಈಜುವಾಗ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ. ಇದರ ಬೆನ್ನಲ್ಲೇ ಸ್ನೇಹಿತರು ತಲೆ ಮರೆಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಯುವ ದಂತ ವೈದ್ಯೆಗೆ ಮುಳುವಾಯ್ತು ಲಿವ್ ಇನ್ ರಿಲೇಷನ್: ಕ್ಲಿನಿಕ್​ ಲ್ಯಾಬ್​ನಲ್ಲಿ ನಡೆಯಿತು ದುರಂತ! ​
ಸಾವಿನ ಬಳಿಕ ಶನಿವಾರ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ತರಲಾಗಿತ್ತು. ಅದೇ ಆಸ್ಪತ್ರೆಗೆ ಆತನ ಪತ್ನಿ ಹೆರಿಗೆಗಾಗಿ ದಾಖಲಾಗಿದ್ದಳು. ಹಠ ಹಿಡಿದು ಪತಿಯ ಶವ ನೋಡಿದ ಒಂದೇ ಗಂಟೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಅವಳಿ ಮಕ್ಕಳ ಹುಟ್ಟಿನಿಂದ ಸಂತೋಷದಲ್ಲಿ ತೇಲಾಡಬೇಕಿದ್ದ ಕುಟುಂಬಕ್ಕೆ ಸೋಮಶೇಖರ್​ ಸಾವು ಬರಸಿಡಿಲು ಬಂಡಿದಂತಾಗಿದೆ. ಸೋಮಶೇಖರ್ ಸಾವಿನ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ನೇಹಿತರಿಗಾಗಿ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಹಾಥರಸ್​ ಪ್ರಕರಣ ರೇಪ್​ ಅಲ್ಲವೇ ಅಲ್ಲ: ಕೆಲ ದಾಖಲೆ ಮುಂದಿಟ್ಟು ಬಿಜೆಪಿ ಮುಖಂಡನ ವಾದ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 1 =
Remember me
