ಮಂಡ್ಯ:14 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ಜೋಡೆತ್ತುಗಳಿಂದ ಎಳೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಾಗಿದೆ. ಸಾಮರ್ಥ್ಯಕ್ಕಿಂತ ಅಧಿಕ ಕಬ್ಬು ತುಂಬಿ ದಾಖಲೆ ಸೃಷ್ಟಿಸುವ ಆಸೆಗೆ ಬಿದ್ದ ಯುವಕರು ಇದೀಗ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.
ಎರಡು ದಿನಗಳ ಹಿಂದೆ ಮಂಡ್ಯ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ 14 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ಜೋಡೆತ್ತುಗಳಿಂದ ಎಳೆಸಿದ್ದರು. ಎಚ್.ಮಲ್ಲಿಗೆರೆ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿರುವ ಜಿ.ಗುಂಡಿಪಟ್ಟಣ್ಣದ ಆಲೆಮನೆಗೆ 14 ಟನ್ ಕಬ್ಬು ಸಾಗಿಸಿ ಯುವಕರು ಸಾಹಸ ಮೆರೆದಿದ್ದರು.
ಗಾಡಿಯೊಂದಕ್ಕೆ ಸಾಮಾನ್ಯವಾಗಿ 4-5 ಟನ್ ಕಬ್ಬು ತುಂಬಲಾಗುತ್ತದೆ. ಈ ಹಿಂದೆ ಕೆ.ಎಂ.ದೊಡ್ಡಿಯಲ್ಲಿ 12 ಟನ್ ಕಬ್ಬನ್ನು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗಿತ್ತು ಎನ್ನಲಾಗಿದೆ. ಆ ದಾಖಲೆ ಮುರಿಯುವ ಸಲುವಾಗಿ ರಾಸುಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ 14 ಕಬ್ಬನ್ನು ಆಲೆಮನೆಗೆ ಯುವಕರು ಸಾಗಿಸಿದ್ದರು.
ಇದನ್ನೂ ಓದಿ:‘ಸೆರೆಮನೆ’ಯಿಂದಲೇ ರಾಜಕೀಯ- ಎನ್​ಡಿಎ ಶಾಸಕರಿಗೆ ಲಾಲು ‘ಬಲೆ’ !
2.90 ಲಕ್ಷ ರೂ. ಮೌಲ್ಯದ ರಾಸುಗಳು ಹುರುಗಲವಾಡಿ ಗ್ರಾಮದ ಶರತ್ ಅವರಿಗೆ ಸೇರಿದ್ದಾಗಿವೆ. ಕಬ್ಬು ತುಂಬಿದ ಗಾಡಿಯನ್ನು ನೋಡಲು ನೆರೆದಿದ್ದ ನಾಗರಿಕರು ಶಿಳ್ಳೆ ಹಾಕಿ, ಜೈಕಾರ ಕೂಗುತ್ತ ರಾಸುಗಳಿಗೆ ಬೆಂಬಲ ಸೂಚಿಸಿದ್ದರು.
ಪ್ರಾಣಿಪ್ರಿಯರ ಬೇಸರ:ಪ್ರಾಣಿಗಳನ್ನು ಹಿಂಸಿಸುವುದು ಸರಿಯಲ್ಲ. ಯುವಕರ ಮೋಜಿಗೆ ಪ್ರಾಣಿಗಳ ಮೇಲೆ ಬಲಪ್ರಯೋಗ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪರ -ವಿರೋಧ ಚರ್ಚೆಯಾಗಿತ್ತು.
ಕೆರಗೋಡು ಪೊಲೀಸರಿಂದ ಪ್ರಕರಣ ದಾಖಲುಮೂಕಪ್ರಾಣಿಗಳ ಮೇಲಿನ ಹಿಂಸೆ ತಡೆಗಟ್ಟುವ ಕಾಯ್ದೆಯಡಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಎಚ್.ಮಲ್ಲಿಗೆರೆ ಗ್ರಾಮದ ರಂಜು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಕಬ್ಬು ಎಳೆಸುವಾಗ ಎತ್ತುಗಳಿಗೆ ಹಿಂಸೆ ನೀಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
14 ಟನ್ ಕಬ್ಬು ತುಂಬಿದ ಗಾಡಿ ಎಳೆದ ಜೋಡೆತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 20 =
Remember me
