ಮದ್ದೂರು:ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ 14 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ಎಳೆಯುವ ಮೂಲಕ ಜೋಡೆತ್ತು ಗಮನ ಸೆಳೆದಿವೆ. ಎಚ್.ಮಲ್ಲಿಗೆರೆ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿರುವ ಜಿ.ಗುಂಡಿಪಟ್ಟಣ್ಣದ ಆಲೆಮನೆಗೆ 14 ಟನ್ ಕಬ್ಬು ಸಾಗಿಸಿ ಯುವಕರು ಸಾಹಸ ಮೆರೆದಿದ್ದಾರೆ.
ಗಾಡಿಯೊಂದಕ್ಕೆ ಸಾಮಾನ್ಯವಾಗಿ 4-5 ಟನ್ ಕಬ್ಬು ತುಂಬಲಾಗುತ್ತದೆ. ಈ ಹಿಂದೆ ಕೆ.ಎಂ.ದೊಡ್ಡಿಯಲ್ಲಿ 12 ಟನ್ ಕಬ್ಬನ್ನು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗಿತ್ತು ಎನ್ನಲಾಗಿದೆ. ಆ ದಾಖಲೆ ಮುರಿಯುವ ಸಲುವಾಗಿ ರಾಸುಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ 14 ಕಬ್ಬನ್ನು ಆಲೆಮನೆಗೆ ಯುವಕರು ಸಾಗಿಸಿದ್ದಾರೆ. 2.90 ಲಕ್ಷ ರೂ. ಮೌಲ್ಯದ ರಾಸುಗಳು ಹುರುಗಲವಾಡಿ ಗ್ರಾಮದ ಶರತ್ ಅವರಿಗೆ ಸೇರಿದ್ದಾಗಿವೆ. ಕಬ್ಬು ತುಂಬಿದ ಗಾಡಿಯನ್ನು ನೋಡಲು ನೆರೆದಿದ್ದ ನಾಗರಿಕರು ಶಿಳ್ಳೆ ಹಾಕಿ, ಜೈಕಾರ ಕೂಗುತ್ತ ರಾಸುಗಳಿಗೆ ಬೆಂಬಲ ಸೂಚಿಸಿದರು.
ಪ್ರಾಣಿಪ್ರಿಯರ ಬೇಸರ:ಪ್ರಾಣಿಗಳನ್ನು ಹಿಂಸಿಸುವುದು ಸರಿಯಲ್ಲ. ಯುವಕರ ಮೋಜಿಗೆ ಪ್ರಾಣಿಗಳ ಮೇಲೆ ಬಲಪ್ರಯೋಗ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪರ -ವಿರೋಧ ಚರ್ಚೆಯಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
