ಮಂಡ್ಯ:ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಮೂಕ ಪ್ರಾಣಿಗಳನ್ನು ಮನಬಂದಂತೆ ನಡೆಸಿಕೊಳ್ಳುವುದು ಮಾನವೀಯತೆಗೆ ಕೊಡಲಿ ಪೆಟ್ಟು ಹಾಕಿದಂತೆ. ಮೂಕರೋಧನೆ ಅರಿಯದೇ ಆನಂದ ಪಡುವ ಅನಾಗರಿಕರಿಗೆ ಕಾಲವೇ ಉತ್ತರ ನೀಡಬೇಕಿದೆ.
ಹೌದು, ದಾಖಲೆ ಬರೆಯುವ ಆಸೆಗೆ ಬಿದ್ದ ಯುವಕರು ಎತ್ತುಗಳ ಕೈಯಲ್ಲಿ ಸಾಮಾರ್ಥ್ಯಕ್ಕಿಂತ ಹೆಚ್ಚಿನ ಕಬ್ಬಿನ ರಾಶಿಯನ್ನು ಹೊರಿಸುವ ಮೂಲಕ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಟೀಮ್‌ಗೆ ಸೋಲುಣಿಸಿದ ವಿರಾಟ್ ಕೊಹ್ಲಿ ಬಳಗ
ಮಂಡ್ಯದ ಎಚ್​. ಮಲ್ಲಿಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಬರೋಬ್ಬರಿ 14.55 ಟನ್​ ಕಬ್ಬಿನ ರಾಶಿಯನ್ನು ಎತ್ತಿನಗಾಡಿಗೆ ತುಂಬಿ ಸುಮಾರು 3 ಕಿ.ಮೀ ವರೆಗೆ ಮೂಕ ಪ್ರಾಣಿಗಳ ಕೈಯಲ್ಲಿ ಬಲವಂತವಾಗಿ ಎಳೆಸಿ, ಕ್ರೌರ್ಯ ಮೆರೆದಿದ್ದಾರೆ.
ಸಾಮಾನ್ಯವಾಗಿ ಎತ್ತಿನ ಗಾಡಿಗಳಲ್ಲಿ 5 ರಿಂದ 8 ಟನ್​ ಮಾತ್ರ ತುಂಬುತ್ತಾರೆ. ಆದರೆ, ದಾಖಲೆ ಬರೆಯುವ ಆಸೆಗೆ ಬಿದ್ದು, ಪ್ರಾಣಿಗಳ ಕಷ್ಟವನ್ನು ಅರಿಯದೇ ಭಾರಿ ಪ್ರಮಾಣದ ಕಬ್ಬಿನ ರಾಶಿಯನ್ನು ಎಳೆಸಿರುವುದು ರೈತರ ಮಕ್ಕಳಾಗಿ ತಲೆ ತಗ್ಗಿಸುವಂತ ವಿಚಾರವಾಗಿದೆ. ಯುವಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದಾಖಲೆ ಬರೆಯುವ ಆಸೆಗೆ ಬಿದ್ದ ಯುವಕರು ಎತ್ತುಗಳ ಕೈಯಲ್ಲಿ ಸಾಮಾರ್ಥ್ಯಕ್ಕಿಂತ ಹೆಚ್ಚಿನ ಕಬ್ಬಿನ ರಾಶಿಯನ್ನು ಹೊರಿಸುವ ಮೂಲಕ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.#Mandya#Youngsters#Bullockcart#Bullockpic.twitter.com/gwy7znS3tt
— Vijayavani (@VVani4U)November 22, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + one =
Remember me
