ಮಂಡ್ಯ:ನನ್ನನ್ನು ಮುಟ್ಟಿದರೆ ಕರೊನಾ ವೈರಸ್​ ಬರುತ್ತೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದ ಯುವಕನನ್ನು ಆತನ ಸ್ನೇಹಿತರೊಟ್ಟಿಗೆ ಗುರುವಾರ ಬಂಧಿಸಲಾಗಿದೆ.
ಕೆ.ಆರ್​.ಪೇಟೆ ತಾಲೂಕಿನ ಬಳ್ಳೇಕೆರೆ ಗ್ರಾಮದ ಮಹೇಶ್, ಅಭಿಶೇಕ್ ಹಾಗೂ ಶ್ರೀನಿವಾಸ್ ಬಂಧಿತ ಯುವಕರು. ಬೆಂಗಳೂರಿನಲ್ಲಿ ಆಟೋ‌ ಚಾಲಕನಾಗಿ ಕೆಲಸ‌ ಮಾಡುತ್ತಿದ್ದ ಮಹೇಶ್​, ಯುಗಾದಿ ಹಬ್ಬಕ್ಕೆಂದು ಬಳ್ಳೇಕೆರೆಗೆ ಬಂದಿದ್ದ. ಆತನ ಕೈಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೀಲ್ ಹಾಕಿ ಹೋಂ ಕ್ವಾರಂಟೈನ್​ನಲ್ಲಿ ಇಟ್ಟಿದ್ದರು.
ಇದರ ನಡುವೆ ಕ್ವಾರಂಟೈನ್​ ಉಲ್ಲಂಘಿಸಿ ಮಹೇಶ್ ತನ್ನ ಸ್ನೇಹಿತರೊಂದಿಗೆ ಚಿನಕುರಳಿಗೆ ಹೋಗಿದ್ದ. ನಿನ್ನೆ ರಾತ್ರಿ ವಾಪಸ್ ಬರುವಾಗ ತೆಂಡೇಕೆರೆ ಚೆಕ್​ಪೋಸ್ಟ್ ಬಳಿ ಪೊಲೀಸ್​ ಸಿಬ್ಬಂದಿ ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಕೈಯಲ್ಲಿ ಸೀಲ್ ಇದ್ದುದ್ದರಿಂದ ನನಗೆ ಕರೊನಾ ಇದೆ. ಮುಟ್ಟಿದರೆ ನಿಮಗೂ ಬರುತ್ತದೆ ಎಂದು ಬೆದರಿಸಿ ಸ್ನೇಹಿತರೊಟ್ಟಿಗೆ ಪರಾರಿಯಾಗಿದ್ದ.
ಇದೀಗ ಪಿಎಸ್​ಐ ಬ್ಯಾಟರಾಯಿಗೌಡ ನೇತೃತ್ವದಲ್ಲಿ ಯುವಕರನ್ನು ಬಂಧಿಸಲಾಗಿದೆ. ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ರಸ್ತೆಯಲ್ಲಿ ವಾಹನಗಳೇ ಇಲ್ಲ, ರಿಪೇರಿಗೆ ಇದೇ ಸಕಾಲ: ಡಾಂಬರು ಹಾಕಲು ಆದೇಶಿಸಿದ ತೆಲಂಗಾಣ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
