|ಕೆ.ಎನ್.ರಾಘವೇಂದ್ರಮಂಡ್ಯ
ರಾಸಾಯನಿಕ ಬೇಸಾಯದ ಅಬ್ಬರ ಜೋರಾಗಿದ್ದ ಸಮಯದಲ್ಲಿ ಸಾವಯವ ಪದ್ಧತಿ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಕೃಷಿ ಲಾಭದಾಯಕ ಎನ್ನುವುದನ್ನು ಸಾಬೀತುಪಡಿಸಲು ನಾಲ್ವರು ಯುವ ಇಂಜಿನಿಯರ್​ಗಳು ಹುಟ್ಟುಹಾಕಿದ ಮಂಡ್ಯದ ‘ಆರ್ಗ್ಯಾನಿಕ್ ಸಂಸ್ಥೆ’ಯ ಯಶೋಗಾಥೆ ಇದೀಗ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಪಠ್ಯಕ್ಕೆ ಸೇರ್ಪಡೆಯಾಗಿದೆ.
ಎಸ್.ಸಿ.ಮಧುಚಂದನ್ ಸಂಸ್ಥಾಪಕತ್ವದಲ್ಲಿ ತಗ್ಗಹಳ್ಳಿ ಪ್ರಸನ್ನ, ಅರಕೆರೆ ಪ್ರಸನ್ನ ಮತ್ತು ಬಿ.ಹೊಸೂರು ಉಮೇಶ್ ಪ್ರಾರಂಭಿಸಿದ ಸಂಸ್ಥೆ ಪ್ರಸ್ತುತ ಸಾವಿರಾರು ಜನರಿಗೆ ಆಧಾರಸ್ತಂಭವಾಗಿದೆ. ಮಾತ್ರವಲ್ಲದೆ ಸಾವಯವ ಕೃಷಿಯಲ್ಲಿ ಖುಷಿ ಕಾಣುವುದು ಹೇಗೆ ಎನ್ನುವುದನ್ನು ರೈತರಿಗೆ ಮನದಟ್ಟು ಮಾಡಿಕೊಡುವುದರಲ್ಲಿಯೂ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಹಲವು ತಿಂಗಳು ಸಂಶೋಧನೆ ನಡೆಸಿದ ಹಾರ್ವರ್ಡ್ ವಿಶ್ವವಿದ್ಯಾಲಯದ ತಂಡ ಎಂಬಿಎ ಪಠ್ಯದಲ್ಲಿ ಆರ್ಗ್ಯಾನಿಕ್ ಸಂಸ್ಥೆಯ ಸಾಧನೆಯನ್ನು ಬಿಚ್ಚಿಟ್ಟಿದೆ. ಮಾತ್ರವಲ್ಲದೆ ದೇಶ, ವಿದೇಶದ ವಿದ್ಯಾರ್ಥಿಗಳು ಮಂಡ್ಯದ ಸಂಸ್ಥೆಯ ಕುರಿತು ಅಧ್ಯಯನ ಮಾಡಲಿದ್ದಾರೆ.
23 ಸಾವಿರ ಕುಟುಂಬಗಳಿಗೆ ಆಧಾರ:ಅಮೆರಿಕದಲ್ಲಿ ಸಾಫ್ಟ್ ವೇರ್ ಸಂಸ್ಥೆ ನಡೆಸುತ್ತಿದ್ದ ಎಸ್.ಸಿ.ಮಧುಚಂದನ್ ತನ್ನ ದೇಶದಲ್ಲಿಯೇ ಸಾಧನೆ ಮಾಡಬೇಕೆನ್ನುವ ಹಠದೊಂದಿಗೆ ಅಲ್ಲಿನ ಸಂಸ್ಥೆಯನ್ನು ಮಾರಾಟ ಮಾಡಿ ವಾಪಸ್ ಬಂದರು. ಬಳಿಕ ಸಹಪಾಠಿಗಳೊಂದಿಗೆ ಚರ್ಚೆ ನಡೆಸಿ 2015ರಲ್ಲಿ ಆರ್ಗ್ಯಾನಿಕ್ ಸಂಸ್ಥೆಯನ್ನು ಹುಟ್ಟುಹಾಕಿದರು. ಆದರೆ ಪ್ರಾರಂಭದ ದಿನಗಳು ಅಷ್ಟೊಂದು ಸುಲಭವಾಗಿರಲಿಲ್ಲ.
ರೈತರಿಗೆ ಸಾವಯವ ಕೃಷಿ ರುಚಿಸುವಂತೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಇದರೊಟ್ಟಿಗೆ ಹಾಸ್ಯ ಮಾಡುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಪ್ರೋತ್ಸಾಹ ನೀಡಲು ಬಂದವರಿಗೆ ನಿರುತ್ಸಾಹದ ಮಾತುಗಳನ್ನಾಡಿದವರೂ ಇದ್ದಾರೆ. ಆದರೂ ಎದೆಗುಂದದೆ ಸಂಸ್ಥೆಯನ್ನು ಹಂತ ಹಂತವಾಗಿ ಕಟ್ಟಿ ಬೆಳೆಸಿದರು. ಚಿತ್ರ ಕಲಾವಿದರು, ಸಾಫ್ಟ್​ವೇರ್ ಉದ್ಯೋಗಿಗಳನ್ನು ವಾರಾಂತ್ಯದಲ್ಲಿ ಕರೆಸಿ ನಾಟಿ ಮಾಡಿಸುವುದು ಸೇರಿ ಕೃಷಿ ಚಟುವಟಿಕೆ ಮಾಡಿಸಿದರು. ಇದು ಸ್ಥಳೀಯರ ಗಮನಸೆಳೆಯಿತು. ಬಳಿಕ ಒಬ್ಬೊಬ್ಬರೇ ಸಂಸ್ಥೆಯೊಂದಿಗೆ ಕೈ ಜೋಡಿಸಲು ಆರಂಭಿಸಿದರು. ಪರಿಣಾಮ ಸಂಸ್ಥೆ 500ಕ್ಕೂ ಹೆಚ್ಚು ಉದ್ಯೋಗಿಗಳ ಬದುಕಿಗೆ ಜೀವನಾಧಾರವಾಗಿದೆ.
2020ರಲ್ಲಿ ರಾಷ್ಟ್ರ ಪ್ರಶಸ್ತಿ:ಸಂಸ್ಥೆ ಪ್ರಾರಂಭಿಸಿದ ಐದೇ ವರ್ಷದಲ್ಲಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ಕಂಡುಬಂತು. ಪರಿಣಾಮ 2020ರಲ್ಲಿ ಕೇಂದ್ರ ಸರ್ಕಾರದಿಂದ ಕೊಡಮಾಡುವ ಸ್ಟಾರ್ಟಪ್ ಇಂಡಿಯಾ ರಾಷ್ಟ್ರಪ್ರಶಸ್ತಿಯೂ ಸಂಸ್ಥೆಯ ಪಾಲಾಯಿತು. ಈ ನಡುವೆಯೇ ಆರ್ಗ್ಯಾನಿಕ್ ಮಂಡ್ಯದ ಸಾಧನೆ ಹೈದರಾಬಾದ್​ನ
ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಶಿಕ್ಷಣ ಸಂಸ್ಥೆಯ ಪಠ್ಯವಾಯಿತು. ಇಂದಿಗೂ ಪ್ರತಿ ಎರಡು ಅಥವಾ ಮೂರು ವಾರಕ್ಕೊಮ್ಮೆ ಆನ್​ಲೈನ್​ನಲ್ಲಿ ಮಧುಚಂದನ್ ಅಥವಾ ಸಂಸ್ಥೆಯವರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾರೆ.
ಅಮೆರಿಕದಲ್ಲಿ ಸಕ್ಕರೆನಾಡಿನ ಪಾಠ:ಆರ್ಗ್ಯಾನಿಕ್ ಸಂಸ್ಥೆಯ ಯಶೋಗಾಥೆಯ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್(ಐಎಸ್​ಬಿ) ಸಂಸ್ಥೆಯಿಂದ ಹಾರ್ವರ್ಡ್ ವಿಶ್ವವಿದ್ಯಾನಿಲಯ ಮಾಹಿತಿ ಪಡೆದಿದೆ. ಮಾತ್ರವಲ್ಲದೆ ಐಎಸ್​ಬಿ ನಿರ್ದೇಶಕ ಡಿ.ವಿ.ಶೇಷಾದ್ರಿ ಕಳೆದ ವರ್ಷ ಮಧುಚಂದನ್ ಅವರೊಂದಿಗೆ ಸಂವಾದ ನಡೆಸಿದರು. ಜತೆಗೆ ಸಂಸ್ಥೆಯಿಂದ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳನ್ನು ವೀಕ್ಷಿಸಿ ಹಾಗೂ ಫಲಾನುಭವಿ ರೈತರಿಂದ ಅಭಿಪ್ರಾಯ ಸಂಗ್ರಹಿಸಿ ತಮ್ಮ ವಿವಿಯ ಪಠ್ಯಕ್ಕೆ ಸೇರಿಸಲು ನಿರ್ಧಾರ ಮಾಡಿದೆ.
ಸಂಸ್ಥೆಯನ್ನು ಪ್ರಾರಂಭಿಸಿದಾಗ ಹಲವರು ಪ್ರೋತ್ಸಾಹ ನೀಡಿದರೆ, ಹೆಚ್ಚಿನ ಸಂಖ್ಯೆಯಲ್ಲಿ ವ್ಯಂಗ್ಯವಾಡಿದ್ದರು. ಆದರೂ ನಮ್ಮ ನಂಬಿಕೆ ಹುಸಿಯಾಗಲಿಲ್ಲ. ನನ್ನ ಮಂಡ್ಯದಲ್ಲಿ ಮಾಡಿದ ಸಾವಯವ ಕ್ರಾಂತಿ ವಿದೇಶದಲ್ಲಿ ವಿದ್ಯಾರ್ಥಿಗಳಿಗೆ ಪಾಠವಾಗುತ್ತಿದೆ ಎನ್ನುವುದೇ ಖುಷಿ. ಇದು ಮಂಡ್ಯದ ರೈತರಿಗೆ ಹಾಗೂ ನಮ್ಮ ದೇಶಕ್ಕೆ ಬಂದ ಗೌರವ. ಈ ಯಶಸ್ಸು ದೊರೆಯಲು ನನ್ನೊಂದಿಗೆ ಹಗಲು ರಾತ್ರಿಗಳೆನ್ನದೆ ಶ್ರಮಿಸಿದ ಎಲ್ಲರಿಗೂ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಜನರ ಬೆಂಬಲ ಬೇಕಿದೆ.
|ಎಸ್.ಸಿ.ಮಧುಚಂದನ್ಸಂಸ್ಥಾಪಕ , ಮಂಡ್ಯ ಆರ್ಗ್ಯಾನಿಕ್ ಸಂಸ್ಥೆ

ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
