ಚಾಮರಾಜನಗರ:ಗ್ರಾಪಂ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿ ವಿರುದ್ಧ ತನ್ನ ಅಣ್ಣನ ಮಗನೇ ಸ್ಪರ್ಧಿಸಿ ಇಂದು ಫಲಿತಾಂಶದ ಏನಾಗಬಹುದು ಎಂದು ಕಾಯುತ್ತಾ ನಿಂತಿದ್ದಾನೆ.
ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಯಡಿಯೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ(ಸಾಮಾನ್ಯ) ಮೀಸಲಿರುವ ಸ್ಥಾನಕ್ಕೆ ಮಹದೇವಯ್ಯ (ಚಿಕ್ಕಪ್ಪ) ವಿರುದ್ಧ ಎಸ್‌.ಮಂಜುನಾಥ್ ಸ್ಪರ್ಧಿಸಿದ್ದಾರೆ‌. ಅವಿರೋಧ ಆಯ್ಕೆ ತಪ್ಪಿಸಲು ಕಣದಲ್ಲಿದ್ದ ಅವರ ಚಿಕ್ಕಪ್ಪ ಮಹದೇವಯ್ಯ ವಿರುದ್ಧವೇ ಮಂಜುನಾಥ್‌ ಕಣಕ್ಕೆ ಇಳಿದಿದ್ದು, ಅವಿರೋಧ ಆಯ್ಕೆಯ ಖುಷಿಯಲ್ಲಿದ್ದ ಮಹದೇವಯ್ಯ ಅವರನ್ನು ಚಿಂತೆಗೆ ಒಳಗಾಗುವಂತೆ ಮಾಡಿದ್ದಾರೆ.
ಇದನ್ನೂ ಓದಿ:ಪಂಚಾಯಿತಿ ಕುತೂಹಲಕ್ಕೆ ಇಂದು ತೆರೆ – ಗ್ರಾ.ಪಂ. ಚುನಾವಣೆಯ ಮತಗಳ ಎಣಿಕೆ ಶುರು
‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗಳು ನಡೆಯಬೇಕು. ಈ ಮೂಲಕ ಜನಪ್ರತಿನಿಧಿಗಳು ಆಯ್ಕೆಯಾಗಬೇಕು ಆದರೆ ನಮ್ಮ ಗ್ರಾಮದಲ್ಲಿ ಚಿಕ್ಕಪ್ಪನ ವಿರುದ್ಧ ಯಾರೂ ಸ್ಪರ್ಧೆಗೆ ಮುಂದಾಗಲಿಲ್ಲ ಹಾಗಾಗಿ ಅವಿರೋಧ ಆಯ್ಕೆಯನ್ನು ತಪ್ಪಿಸಲು ಚಿಕ್ಕಪ್ಪನ ವಿರುದ್ಧವೇ ಸ್ಪರ್ಧೆಗೆ ಇಳಿಯಬೇಕಾಯಿತು’. ಇದೀಗ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಚಿಕ್ಕಪ್ಪ ಮತ್ತು ಮಗ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ‌. ಮೊದಲ ಸುತ್ತಿನ ಮತ ಎಣಿಕೆ ಆರಂಭವಾಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ವಿಜಯಪುರದ ಇಂಡಿ ಪಟ್ಟಣದ ಮತ ಎಣಿಕೆ‌ ಕೇಂದ್ರದಲ್ಲಿ ನೂಕು ನುಗ್ಗಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
