ಮಂಗಳೂರು:ತಡರಾತ್ರಿಯವರೆಗೂ ಬಾಂಬರ್ ಆದಿತ್ಯರಾವ್ ವಿಚಾರಣೆ ನಡೆದಿದ್ದು ಪೊಲೀಸ್ ವಿಚಾರಣೆ ವೇಳೆ ಸ್ಫೋಟಕ ರಹಸ್ಯ ಬಹಿರಂಗವಾಗಿದೆ.
ಪ್ರತೀಕಾರಕ್ಕಾಗಿಯೇ ವಿಧ್ವಂಸಕ ಕೃತ್ಯ ಎಸಗಿರೋದಾಗಿ ಹೇಳಿರುವ ಆದಿತ್ಯರಾವ್, ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ‌ ಖಿನ್ನತೆಗೆ ಒಳಗಾಗಿದ್ದಾಗಿ ಹೇಳಿದ್ದಾನೆ.
ಯೂಟ್ಯೂಬ್ ನಲ್ಲಿ ಉಗ್ರರ ವಿಡಿಯೋ ನೋಡಿ‌ ಪ್ರಭಾವಿತನಾಗಿರೋದಾಗಿ ಒಪ್ಪಿಕೊಂಡಿರುವ ಬಾಂಬರ್ ಆದಿತ್ಯರಾವ್, ಬಾಂಬ್ ತಯಾರಿಕೆಗಾಗಿ ಎರಡು ತಿಂಗಳಿನಿಂದ ಪೂರ್ವಸಿದ್ಧತೆ ನಡೆಸಿದ್ದಾಗಿ ತಿಳಿಸಿದ್ದಾನೆ.
ಯೂಟ್ಯೂಬ್ ನಲ್ಲಿ ಬಾಂಬ್ ತಯಾರಿಕೆ ಬಗ್ಗೆ ಮಾಹಿತಿ ಪಡೆದಿದ್ದ ಆದಿತ್ಯರಾವ್, ಸಮಾಜದ ವ್ಯವಸ್ಥೆ ಬಗ್ಗೆ ಆಕ್ರೋಶದಿಂದ ಕೃತ್ಯ ಎಸಗಿರೋದಾಗಿ ಹೇಳಿದ್ದಾನೆ.
ವಿಚಾರಣೆ ವೇಳೆ ಆದಿತ್ಯರಾವ್ ಹೇಳಿಕೆಗಳಿಂದ ಬೆಚ್ಚಿ ಬಿದ್ದ ಪೊಲೀಸರು ತಡರಾತ್ರಿ 2 ಗಂಟೆವರೆಗೆ ವಿಚಾರಣೆಗೆ ಒಳಪಡಿಸಿದ್ದಾರೆ. ಕಮೀಷನರ್ ಡಾ.ಪಿ.ಎಸ್. ಹರ್ಷ ನೇತೃತ್ವದ ತಂಡದಿಂದ ಪಣಂಬೂರು ಎಸಿಪಿ ಕಚೇರಿಯಲ್ಲಿ ವಿಚಾರಣೆ ನಡೆದಿತ್ತು.
ಮತ್ತೊಂದು ದೂರು ದಾಖಲು
ಬಾಂಬರ್ ಆದಿತ್ಯರಾವ್ ವಿರುದ್ಧ ಮಂಗಳೂರಿನ ಬಜಪೆ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಇಂಡಿಗೋ ವಿಮಾನದಲ್ಲಿ ಬಾಂಬ್ ಕರೆ ಇರಿಸಿದ್ದಾಗಿ ಜ.20ರ ಮಧ್ಯಾಹ್ನ 2.30ಕ್ಕೆ ಕರೆ ಮಾಡಿದ್ದ ಆದಿತ್ಯರಾವ್. ಈ ಬಗ್ಗೆ ಇಂಡಿಗೋ ಮ್ಯಾನೇಜರ್​ಗೆ ಕರೆ ಮಾಡಿದ್ದ ಆದಿತ್ಯರಾವ್, ವಿಮಾನದಲ್ಲಿ‌ ಬಾಂಬ್ ಇಟ್ಟಿರೋದಾಗಿ ಹುಸಿ ಕರೆ ಮಾಡಿದ್ದ ಈ ಹಿನ್ನಲೆಯಲ್ಲಿ ಇಂಡಿಗೋ ಅಧಿಕಾರಿಗಳಿಂದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + one =
Remember me
