ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದ ಆರೋಪಿ, ಸಹೋದರ ಆದಿತ್ಯ ರಾವ್ ಬೆಂಗಳೂರು ಪೊಲೀಸರಿಗೆ ಶರಣಾಗಿರುವುದು ಮಾಧ್ಯಮಗಳಿಂದ ತಿಳಿಯಿತು. ಆತ ಈ ಹಿಂದೆಯೂ ಬೆದರಿಕೆ ಕರೆ ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ.
ಪ್ರಕರಣಗಳ ತನಿಖೆಗೆ ಮನಮಂದಿ ಪೂರ್ಣ ರೀತಿಯಲ್ಲಿ ಸಹಕಾರ ನೀಡುತ್ತೇವೆ ಎಂದು ಕಿರಿಯ ಸಹೋದರ, ಕೆನರಾ ಬ್ಯಾಂಕ್ ಉದ್ಯೋಗಿ ಅಕ್ಷತ್ ರಾವ್ ಹೇಳಿದರು. ನಗರದ ಚಿಲಿಂಬಿ ಎಂಬಲ್ಲಿರುವ ಕೆನರಾ ಬ್ಯಾಂಕ್ ಉದ್ಯೋಗಿಗಳ ಅಪಾರ್ಟ್​ವೆುಂಟ್ ಬಳಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಣ್ಣನನ್ನು ಸರಿದಾರಿಗೆ ತರಲು ಬಹಳಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಆತ ಸರಿಯಾಗಲಿಲ್ಲ. ತಾಯಿ ನಿಧನ ಹೊಂದಿದಾಗ ಆತ ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ. ಕರೆ ಮಾಡಿ ವಿಷಯ ತಿಳಿಸಿದ್ದೆವು. ಹಿರಿಯ ಮಗನಾಗಿ ಅಂತಿಮ ವಿಧಿವಿಧಾನ ಪೂರೈಸಲೂ ಬರಲಿಲ್ಲ. 3 ವರ್ಷಗಳಿಂದ ಮನೆಯವರ ಸಂಪರ್ಕದಿಂದ ಆತ ದೂರ ಇದ್ದಾನೆ ಎಂದು ಅಕ್ಷತ್ ಹೇಳಿದರು. ಆತ ಈವರೆಗೆ ಎಲ್ಲಿದ್ದಾನೆಂದು ಗೊತ್ತಿರಲಿಲ್ಲ. ಮಂಗಳೂರಿನಲ್ಲೇ ಇದ್ದ ಎನ್ನುವ ವಿಚಾರ ನಿನ್ನೆಯೇ ಗೊತ್ತಾಯಿತು. ನಾವು ಮೂಲತಃ ಮಣಿಪಾಲದವರು. ತಂದೆ ಕೃಷ್ಣಮೂರ್ತಿ ಬ್ಯಾಂಕ್ ಉದ್ಯೋಗಿಯಾಗಿದ್ದ ಕಾರಣ ವಿವಿಧ ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದೇವೆ. ನಾನು ಅಣ್ಣ 8ನೇ ತರಗತಿ ತನಕ
ಮಾತ್ರ ಜತೆಗಿದ್ದೆವು. ಬಳಿಕ ಅವನು ಮತ್ತು ನಾನು ಬೇರೆ ಬೇರೆ ಹಾಸ್ಟೆಲ್​ಗಳಲ್ಲಿ ಓದಿದ್ದೆವು. ಆತ ಎಂಬಿಎ, ಬಿಇ ಪದವೀಧರ. ಆದರೆ ಯಾಕೆ ಹೀಗೆ ಮಾಡಿದ್ದಾನೆ ಎಂಬುದು ನಮಗೂ ಗೊತ್ತಾಗುತ್ತಿಲ್ಲ. ಆತನ ದುಷ್ಕೃತ್ಯಕ್ಕೆ ನಾವು ಬೆಂಬಲ ನೀಡುವುದಿಲ್ಲ. ಪೊಲೀಸರಿಗೆ ಎಲ್ಲ ಮಾಹಿತಿ ನೀಡಿದ್ದೇವೆ. ಈ ಹಿಂದೆ ಬಂಧನವಾದಾಗಲೂ ಬಿಡುಗಡೆಗೆ ಪ್ರಯತ್ನ ಮಾಡಿಲ್ಲ. ಆತನನ್ನು ಭೇಟಿಯೇ ಆಗಿಲ್ಲ. ನಮಗೂ ಆತನಿಗೂ ಸಂಬಂಧವಿಲ್ಲ ಎಂದವರು ಸ್ಪಷ್ಟಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 15 =
Remember me
