ಮಂಗಳೂರು:ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ, ಬಳಿಕ ನಿಯಂತ್ರಿತ ಸ್ಫೋಟ ನಡೆಸಿದ ಘಟನೆ ಬಳಿಕ ಹೆಚ್ಚಿನ ತನಿಖೆಗಾಗಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ತಂಡ ಮಂಗಳವಾರ ಬೆಳಗ್ಗೆಯೇ ಆಗಮಿಸಿದೆ. ಮೈಸೂರಿಗೆ ತರಬೇತಿಗೆ ಆಗಮಿಸಿದ್ದ ತನಿಖಾ ತಂಡವೇ ಮಂಗಳೂರಿಗೂ ಆಗಮಿಸಿದ್ದು, 30 ಸಿಬ್ಬಂದಿಯಿದ್ದಾರೆ. ಎನ್​ಎಸ್​ಜಿಯ ಬಾಂಬ್ ಡಿಟೆಕ್ಷನ್ ಆಂಡ್ ಡಿಸ್ಪೋಸಲ್ ಸ್ಕಾ್ವಡ್ (ಬಿಡಿಡಿಎಸ್) ಕೆಂಜಾರಿನಲ್ಲಿ ಬಾಂಬ್ ನಿಯಂತ್ರಿತ ಸ್ಪೋಟಗೊಳಿಸಿದ ಸ್ಥಳಕ್ಕೆ ತೆರಳಿ ಅಗತ್ಯವಿರುವ ಮಾದರಿಗಳನ್ನು ಸಂಗ್ರಹಿಸಿದೆ.
ಆಟೊ ಚಾಲಕ, ಸೆಲೂನ್ ಮಾಲೀಕನ ವಿಚಾರಣೆ: ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ದುಷ್ಕರ್ವಿು ಬ್ಯಾಗ್ ಇಡಲು ತೆರಳಿದ್ದ ಸೆಲೂನ್ ಮಾಲೀಕ, ಪ್ರಯಾಣಿಸಲು ಬಳಸಿದ್ದ ರಿಕ್ಷಾ ಚಾಲಕನನ್ನು ಪೊಲೀಸರು ವಿಚಾರಣೆ ಗೊಳಪಡಿಸಿದ್ದಾರೆ. ಸುಮಾರು 8.20ರ ವೇಳೆಗೆ ಆತ ಅಲ್ಲಿದ್ದ ಏರ್​ಪೋರ್ಟ್ ವ್ಯೂ ಕಟ್ಟಡದಲ್ಲಿರುವ ಸೆಲೂನ್​ವೊಂದಕ್ಕೆ ಹೋಗಿ ಬ್ಯಾಗ್ ಅಲ್ಲಿ ಇರಿಸಬಹುದೇ ಎಂದು ಕೇಳಿದ್ದ, ಮಾತನಾಡುವಾಗ ತಲೆ ಕೆಳಗೆ ಮಾಡಿ ಮಾತನಾಡುತ್ತಿದ್ದ, ಮುಖ ತೋರಿಸುತ್ತಿರಲಿಲ್ಲ ಎಂದು ಸೆಲೂನ್ ಮಾಲೀಕ, ಉತ್ತರ ಪ್ರದೇಶ ಮೂಲದ ಸಲ್ಮಾನ್ ತಿಳಿಸಿದ್ದಾರೆ. ಬ್ಯಾಗ್ ಇರಿಸುವುದಕ್ಕೆ ಸಲೂನ್ ಮಾಲೀಕ ಒಪ್ಪದ ಕಾರಣ, ಬದಿಯಲ್ಲಿರುವ ಬ್ಯಾಂಕ್​ವೊಂದರ ಸಮೀಪ ಇದ್ದ ಖಾಲಿಜಾಗದಲ್ಲಿ ಒಂದು ಬ್ಯಾಗ್ ಇರಿಸಿದ್ದನ್ನು ಸ್ಥಳೀಯರು ನೋಡಿದ್ದಾರೆ. ಅಲ್ಲಿಂದ ದಾರಿಯಲ್ಲಿ ಬರುತ್ತಿದ್ದ ಆಟೊವೊಂದಕ್ಕೆ ಕೈತೋರಿಸಿದ್ದ ದುಷ್ಕರ್ವಿು ನೇರ ಏರ್​ಪೋರ್ಟ್​ಗೆ ಹೋಗಿದ್ದಾನೆ. ಏರ್​ಪೋರ್ಟ್ ಪ್ರವೇಶದ ಟಿಕೆಟ್ ಕೌಂಟರ್ ಬಳಿ ಬ್ಯಾಗ್ ಇರಿಸಿದ ದುಷ್ಕರ್ವಿು ನಿರ್ಗಮನ ಪ್ರದೇಶದವರೆಗೂ ನಡೆದುಕೊಂಡು ಹೋಗಿದ್ದಾನೆ. ಅಲ್ಲಿ ಯಾರೋ ಪ್ರಯಾಣಿಕರನ್ನು ಬಿಟ್ಟು ಹೋಗುವ ರಿಕ್ಷಾವನ್ನೇರಿ ಕೆಂಜಾರಿಗೆ ಹೋಗಿ ಮತ್ತೊಂದು ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ. ಆದರೆ ಆತ ನಿರ್ಗಮಿಸಿದ ರಿಕ್ಷಾದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕಚ್ಚಾ ಬಾಂಬ್ ಸಾಧ್ಯತೆ: ಸೋಮವಾರ ಪತ್ತೆಯಾದ ಬಾಂಬನ್ನು ಕೆಂಜಾರು ಮೈದಾನದಲ್ಲಿ ಬಾಂಬ್ ಪತ್ತೆ ಹಾಗೂ ವಿಲೇವಾರಿ ತಂಡದವರು ನಿಯಂತ್ರಿತ ಸ್ಫೋಟ ನಡೆಸಿದ್ದಾರೆ, ಮೇಲ್ನೋಟಕ್ಕೆ ಇದೊಂದು ಕಚ್ಚಾ ಮಾದರಿಯ ಬಾಂಬ್ ಎಂದು ಬಿಡಿಡಿಎಸ್ ತಂಡದವರು ಮಾಹಿತಿ ನೀಡಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.
ಕಾರ್ಯಾಚರಣೆ ಸಹಜ: ಬಾಂಬ್ ಪತ್ತೆ ಮರುದಿನ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸಹಜಸ್ಥಿತಿಯಲ್ಲಿ ನಡೆದಿದೆ. ಕಾರ್ಯಾಚರಣೆಯಲ್ಲಿ ಯಾವುದೇ ಭಂಗವಾಗಿಲ್ಲ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಂಟ್ರಿ ಪಾಯಿಂಟ್​ನಲ್ಲಿ ಪೊಲೀಸರು ಬಿಗುವಿನ ತಪಾಸಣೆ ಕೈಗೊಂಡಿದ್ದಾರೆ.
ಗುರುತು ಪತ್ತೆ ಆಗದಂತೆ ಎಚ್ಚರಿಕೆ
ದುಷ್ಕರ್ವಿು ಗುರುತು ಪತ್ತೆಯಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಿದ್ದ ಎನ್ನುವುದು ಪೊಲೀಸರು ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಯಾವುದೇ ಕೋನದಲ್ಲೂ ಮುಖದ ಗುರುತು ಪತ್ತೆಯಾಗಬಾರದು ಎಂಬಂತೆ ಮುಖವರೆಗೂ ಬರುವ ಕ್ಯಾಪ್ ಧರಿಸಿ ತಲೆ ಅಡಿಗೆ ಹಾಕಿ ಮೆಲ್ಲನೆ ನಡೆದು ಬಂದಿದ್ದಾನೆ. ಬ್ಯಾಗ್ ಇರಿಸಿದ ಬಳಿಕ ಎಸ್ಕಲೇಟರ್​ನಲ್ಲಿ ಇಳಿದು ಬರುವಾಗ, ಮರಳಿ ರ್ಪಾಂಗ್ ಪ್ರದೇಶದಲ್ಲಿ ಕೈಯಲ್ಲೊಂದು ಪುಸ್ತಕ ಹಿಡಿದು ವೇಗವಾಗಿ ಹೋಗುವ ಈತ ಏರ್​ಪೋರ್ಟ್ ನಿರ್ಗಮನದ ಗೇಟ್ ಬಳಿ ಬರುವಾಗ ಖಾಲಿ ರಿಕ್ಷಾ ತೆರಳುವುದನ್ನು ನೋಡಿ ನಿಲ್ಲಿಸಿ ಅದರಲ್ಲಿ ತೆರಳಿದ್ದಾನೆ.
ಬಂಗಾಳ ವ್ಯಕ್ತಿ ಐಡಿ ಕಾರ್ಡ್ ಪತ್ತೆ
ಯಾದಗಿರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಬೆನ್ನಲ್ಲೆ ಮಂಗಳವಾರ ಯಾದಗಿರಿ ನಗರದ 2 ಕಡೆ ಸಂಶಯಾಸ್ಪದವಾಗಿ ಬ್ಯಾಗ್​ಗಳು ಸಿಕ್ಕಿವೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಕಪ್ಪು ಬಣ್ಣದ ಬ್ಯಾಗ್ ಪತ್ತೆಯಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ತಂಡ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಪಾಸಣೆ ನಡೆಸಿತು. ಬ್ಯಾಗ್​ನಲ್ಲಿ 5 ಸಾವಿರ ರೂ. ನಗದು, ಬಟ್ಟೆ ಸಿಕ್ಕಿವೆ. ಅಲ್ಲದೆ, ಪಶ್ಚಿಮ ಬಂಗಾಳ ರಾಜ್ಯದ ವ್ಯಕ್ತಿಯೊಬ್ಬನ ಐಡಿ ಕಾರ್ಡ್ ಪತ್ತೆಯಾಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಅಜೀಜ್ ಕಾಲನಿಯ ಸನಾ ಮಸೀದಿ ಬಳಿ ಮತ್ತೊಂದು ಶಾಲಾ ಬ್ಯಾಗ್ ಪತ್ತೆಯಾಯಿತು. ಆದರೆ ಬ್ಯಾಗ್ ಸ್ಥಳೀಯ ಶಾಲೆ ಯೊಂದರ ವಿದ್ಯಾರ್ಥಿಯದ್ದು ಎಂದು ತಿಳಿದು ಬಂತು.
ಶಂಕಿತರ ಶೋಧ ಕಾರ್ಯಕ್ಕಾಗಿ ಹಲವು ಮನೆಗಳಲ್ಲಿ ಹುಡುಕಾಟ ನಡೆದಿದೆ. ಈ ಹಿಂದೆ ಈ ರೀತಿಯ ಬೇರೆ ವಿಮಾನ ನಿಲ್ದಾಣಗಳಲ್ಲಿ ಬೆದರಿಕೆ ಹಾಕಿದವರ ಪರಿಶೀಲನೆ ನಡೆಸಿದ್ದೇವೆ. ಬಾಂಬ್ ಇರಿಸಿದ ಘಟನೆ ನಡೆದ ಬಳಿಕ ಬಂದ ಬೆದರಿಕೆ ಕರೆ ಹಾಗೂ ಪ್ರಮುಖ ಘಟನೆಗೆ ಸಾಮ್ಯತೆಗಳನ್ನು ವೈಜ್ಞಾನಿಕವಾಗಿ ತಾಳೆ ಹಾಕಿ ನೋಡಿದ್ದೇವೆ. ಕೇಂದ್ರದ ತಜ್ಞರೂ ಆಗಮಿಸಿ ತಾಂತ್ರಿಕ ನೆರವು ನೀಡಿದ್ದಾರೆ. ದೃಶ್ಯಾವಳಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಸಾಮ್ಯತೆ ನೋಡಿ ತನಿಖೆ ನಡೆಸುತ್ತಿದ್ದು, ದುಷ್ಕರ್ವಿುಗಳನ್ನು ಬೇಗನೆ ಬಂಧಿಸುತ್ತೇವೆ.
| ಡಾ.ಹರ್ಷ ಪಿ.ಎಸ್, ಮಂಗಳೂರು ಪೊಲೀಸ್ ಆಯುಕ್ತ
ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವುದು ಭಯ ಹುಟ್ಟಿಸುವ ಪ್ರಕರಣ. ಈ ವಿಚಾರದಲ್ಲಿ ರಾಜ್ಯದ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಕೈವಾಡ ಇದೆ ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು. ಯಡಿಯೂರಪ್ಪಗೆ ಮಂತ್ರಿಮಂಡಲ ರಚನೆ ಮಾಡಲು ಅಮಿತ್ ಷಾ ಅವಕಾಶ ಕೊಟ್ಟಿಲ್ಲ. ಅವರು ಸ್ವಾತಂತ್ರ್ಯಲ್ಲದ ಮುಖ್ಯಮಂತ್ರಿ. ಬಿಎಸ್​ವೈ ಆಗಿದ್ದಕ್ಕೆ ಅಧಿಕಾರದಲ್ಲಿದ್ದಾರೆ. ನಾನಾಗಿದ್ದರೆ ಅಥವಾ ಬೇರೆ ಯಾರೇ ಆಗಿದ್ದರೂ ರಾಜೀನಾಮೆ ಕೊಟ್ಟು ಹೊರ ಬರುತ್ತಿದ್ದರು.
| ಸಿದ್ದರಾಮಯ್ಯ ಮಾಜಿ ಸಿಎಂ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಸಂಬಂಧ ಪೊಲೀಸರ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಭಯೋತ್ಪಾದನೆ ವಿರುದ್ಧ ವಿಶ್ವಸಂಸ್ಥೆಯಲ್ಲಿ ಬೇರೆ ದೇಶಗಳ ಬೆಂಬಲ ಪಡೆಯಲು ಇಂಥ ಹೇಳಿಕೆಗಳು ಅಡ್ಡಿಯಾಗುತ್ತವೆ. ಬಾಂಬ್ ಇರಿಸಿದವರು ಯಾರೆಂದು ಕುಮಾರಸ್ವಾಮಿಗೆ ಗೊತ್ತಿದ್ದರೆ ದಾಖಲೆ ಸಮೇತ ದೂರು ನೀಡಲಿ.
| ಪ್ರಲ್ಹಾದ್ ಜೋಶಿ ಕೇಂದ್ರ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
