ಮಂಗಳೂರು:ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ.
ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು ಅಲ್ಲೇ ಇತ್ತು. ಏರ್ ಪೋರ್ಟ್​ನಲ್ಲಿ ಬಾಂಬ್ ಸ್ಕ್ವಾಡ್​ನಿಂದ ತಪಾಸಣೆ ನಡೆಸಲಾಯಿತು.
ಬಜಪೆ ಪೊಲೀಸರು ಮತ್ತು ಏರ್ ಪೊರ್ಟ್ ಭದ್ರತಾ ಸಿಬ್ಬಂದಿ ತಪಾಸಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದ್ದು, ಅದರಲ್ಲಿ ವೈರ್​ಗಳನ್ನು ಜೋಡಿಸಲಾಗಿತ್ತು. ವಿವಿಧ ಪ್ರಕಾರಗಳ ಬಾಂಬ್​ಗಳಿರುತ್ತವೆ. ಅದರಲ್ಲಿ ಟೈಮರ್​ ಡಿವೈಸರ್​, ಫೋನ್​ ಆ್ಯಕ್ಟಿವ್​ ಮುಂತಾದ ವಿಧಗಳಿರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದನ್ನು ನಿಷ್ಕ್ರಿಯಗೊಳಿಸಲು ಬಾಂಬ್​ ನಿಷ್ಕ್ರಿಯ ವಾಹನ ಆಗಮಿಸಿದ್ದು ಅದರೊಳಗೆ ಬಾಂಬ್​ನ್ನು ತಜ್ಞರು ಕೊಂಡೊಯ್ದಿದ್ದಾರೆ. ಆದಷ್ಟು ಬೇಗ ಬಾಂಬ್​ ನಿಷ್ಕ್ರಿಯಗೊಳಿಸುವ ಕಾರ್ಯ ಮಾಡಲಾಗುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 10 =
Remember me
