ಮಂಗಳೂರು:ಮಂಗಳೂರು ತಾಲೂಕಿನ ಕೆಂಚನಕೆರೆಯಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡ ಅರಣ್ಯ ಸಂಚಾರಿ ದಳದ ಅಧಿಕಾರಿಗಳು 7 ಮಂದಿಯನ್ನು ಬಂಧಿಸಿದ್ದಾರೆ.
ಅಲಾಡಿ ರಾಜೇಶ್ ರೆಡ್ಡಿ, ಅನಿಲ್ ಕುಮಾರ್, ಪಾಲ್‌ರಾಜ್, ದಿನೇಶ್ ಕುಮಾರ್, ಕುಂಜ್ಞ ಮಹಮದ್ ಅನಿಲ್ ಕುಮಾರ್, ಶಮೀರ್. ಎಸ್ ಬಂಧಿತರು. ಆರೋಪಿಗಳು ಆಂಧ್ರ ಪ್ರದೇಶ ನೋಂದಣಿಯ ಐಸರ್​​ ವಾಹನದಲ್ಲಿ ರಕ್ತ ಚಂದನವನ್ನು ಹುಲ್ಲಿನ ಚೀಲದಲ್ಲಿ ಮುಚ್ಚಿ ಸಾಗಿಸುತ್ತಿದ್ದರು.
ಇದಕ್ಕೆ ತಮಿಳುನಾಡು ನೋಂದಣಿಯ ಮಹೇಂದ್ರ ಮೊರೇಜೋ ವಾಹನ ಬೆಂಗಾವಲಿಗಿದ್ದು, ಖಚಿತ ಮಾಹಿತಿಯ ಆಧಾರದಲ್ಲಿ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ತಚಂದನ ಸಾಗಣೆ ಮಾಡುವುದನ್ನು ಪತ್ತೆಹಚ್ಚಿದ್ದಾರೆ.
316 ದಿಮ್ಮಿಗಳು ಸಿಕ್ಕಿದ್ದು ಇದರ ಮೌಲ್ಯ ಸುಮಾರು 4.15 ಕೋಟಿ ಎಂದು ಅಂದಾಜಿಸಲಾಗಿದೆ. ವಾಹನದಲ್ಲಿದ್ದ ರಕ್ತಚಂದನ ಮರದ ತುಂಡುಗಳನ್ನು ಮತ್ತು ಎರಡು ವಾಹನವನ್ನು ವಶಕ್ಕೆ ಪಡೆದುಕೊಂಡು 7 ಮಂದಿಯನ್ನು ಬಂಧಿಸಲಾಗಿದೆ. ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಎಲ್ಲೆಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಪರ-ವಿರೋಧ, ಈ ಶಾಲೆಯಲ್ಲಿ ಊರ ಹೆಸರಿನದ್ದೇ‌ ವಿವಾದ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 3 =
Remember me
