ಮಂಗಳೂರು:ಇಲ್ಲಿನ ಗುರುಪುರ ಬಂಗ್ಲಗುಡ್ಡೆ ಪ್ರದೇಶದಲ್ಲಿ ನಾಲ್ಕು ಮನೆಗಳ ಮೇಲೆ ಗುಡ್ಡ ಜರಿದು ಬಿದ್ದಿದ್ದು ಅದರಡಿ 12 ವರ್ಷದ ಬಾಲಕ ಮತ್ತು 6 ವರ್ಷದ ಬಾಲಕಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜತೆಯಲ್ಲೇ ಮಣ್ಣಿನಡಿ ಸಿಲುಕಿದ್ದ ಅವರ ಚಿಕ್ಕಮ್ಮನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಮಳೆ ಸುರಿಯುತ್ತಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ನಡೆದ ಗುಡ್ಡ ಜರಿತದ ಪ್ರಸಂಗಗಳನ್ನು ಈ ಘಟನೆ ನೆನಪಿಸುವಂತಿದೆ. ಈ ಗುಡ್ಡದ ಮೇಲ್ಭಾಗದಲ್ಲೂ ಮನೆಗಳಿವೆ. ಹಾಗಾಗಿ ಇನ್ನಷ್ಟು ಮನೆಗಳು ಜರಿದು ಬೀಳಬಹುದು ಎಂದು ಜನ ಭಯಭೀತರಾಗಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ದೊಡ್ಡ ಸದ್ದಿನೊಂದಿಗೆ ಗುಡ್ಡ ಜರಿದಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈಗಾಗಲೇ 26 ಸದಸ್ಯರ ಎನ್‌ಡಿಆರ್‌ಎಫ್ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ. ಜೆಸಿಬಿ ಯಂತ್ರದಿಂದ ಮಣ್ಣು ತೆಗೆಯುವ ಕಾರ‌್ಯಾಚರಣೆ ನಡೆದಿದೆ. ಸದ್ಯಕ್ಕೆ ಮಳೆ ಇಲ್ಲದೇ ಇರುವುದರಿಂದ ಕಾರ‌್ಯಾಚರಣೆ ಸುಗಮವಾಗಿ ನಡೆಯುತ್ತಿದೆ.
ತುಮಕೂರು ಜಿಲ್ಲೆಯಲ್ಲಿ 8ನೇ ಬಲಿ, 13 ಮಂದಿಗೆ ಕರೊನಾ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 4 =
Remember me
