ಮಂಗಳೂರು:ಮಾಡೆಲಿಂಗ್​ ಕ್ಷೇತ್ರದ ಕನಸು ಹೊತ್ತುಕೊಂಡು ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನೇಣಿಗೆ ಕೊರಳೊಡ್ಡಿದ ಪ್ರಕರಣದ ಸುತ್ತ ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದೆ. ಗುರುವಾರದಂದು ಬೆಂಗಳೂರಿನಲ್ಲಿ ಮಾಡೆಲಿಂಗ್​ ಕೆಲಸವೊಂದರಲ್ಲಿ ಕಾಣಿಸಬೇಕಿದ್ದ ಯುವತಿ, ಬುಧವಾರದಂದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಪ್ರಕರಣದ ಸಂಬಂಧ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು ಹೊರವಲಯದ ಕುಂಪಲ ಆಶ್ರಯ ಕಾಲನಿಯ ನಿವಾಸಿ ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಯತಿರಾಜ್ ಹೆಸರಿನ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಯತಿರಾಜ್​ ಡ್ರಗ್ಸ್​ ವ್ಯಸನಿಯಾಗಿದ್ದು, ಪ್ರೇಕ್ಷಾಳಿಗೆ ಮಾಡೆಲಿಂಗ್​ ಮಾಡದಿರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆತ​ ತನ್ನ ಸ್ನೇಹಿತ ಸೌರವ್ ಮತ್ತು ಇನ್ನೋರ್ವ ಯುವಕನ ಜತೆ ಬುಧವಾರದಂದು ಪ್ರೇಕ್ಷಾಳ ಮನೆ ಬಳಿ ಬಂದಿದ್ದ. ಆ ವೇಳೆ ಬೆಂಗಳೂರಿಗೆ ಹೋಗುವ ಕುರಿತಾಗಿ ಪ್ರೇಕ್ಷಾ ಮತ್ತು ಯತಿರಾಜ್​ ನಡುವೆ ಜಗಳವಾಗಿದೆ ಎನ್ನಲಾಗಿದೆ. ಅದಾದ ನಂತರ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಯತಿರಾಜ್​, ಸೌರವ್ ಮತ್ತೋರ್ವ ಯುವಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಸಾವಿಗೆ ನಿಜವಾದ ಕಾರಣವೇನು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಾಡೆಲಿಂಗ್​ ಕನಸಿನೊಂದಿಗೆ ಬೆಂಗಳೂರಿಗೆ ಹೊರಟಿದ್ದ ಯುವತಿ ನೇಣಿಗೆ ಶರಣು! ಸಾವಿನ ಹಿಂದೆ ಗಾಂಜಾ ಮಾಫಿಯಾದ ಕೈ?

ರಿಯಾಲಿಟಿ ಶೋ ಸ್ಪರ್ಧಿಯನ್ನು ಡೇಟ್​ಗೆ ಕರೆದ ಜಾನ್ವಿ ಕಪೂರ್​! ಅಂತದ್ದೇನಾಯ್ತು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − seven =
Remember me
