ಮಂಗಳೂರು:ನಗರದ ಖಾಸಗಿ ಕಾಲೇಜೊಂದರ ಮೊದಲ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಗೆ ರ‌್ಯಾಗಿಂಗ್ ಪ್ರಕರಣ ಸಂಬಂಧ 9 ವಿದ್ಯಾರ್ಥಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಗಳಿಂದ ರ‌್ಯಾಗಿಂಗ್ ನಡೆದಿದ್ದು, ಎಲ್ಲರೂ ಕೇರಳ ಮೂಲದವರು ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ:ಹುಣಸೋಡು ಜಿಲೆಟಿನ್ ಲಾರಿ ಸ್ಫೋಟ ಘಟನೆ ನಂತರ ಜನರಿಗೆ ಈ ಅಧಿಕಾರಿ ನೆನಪಾಗಿದ್ದೇಕೆ?
ತೃತೀಯ ಬಿ ಫಾರ್ಮಾದ ಜಿಷ್ಣು(20), ಶ್ರೀಕಾಂತ ಪಿ.ವಿ.(20), ಅಶ್ವಂತ್(20), ಸಯಂತ್(22), ಅಭಿರತ್ ರಾಜೀವ್(21), ದ್ವಿತೀಯ ಬಿ ಫಾರ್ಮಾದ ರಾಹುಲ್ ಪಿ.(21), ಜಿಷ್ಣು (20), ಮುಖ್ತಾರ್ ಅಲಿ(19), ಮುಹಮ್ಮದ್ ರಝೀಮ್ ಕೆ.(20) ಬಂಧಿತರು. ಜ.10ರಂದು ಮಧ್ಯಾಹ್ನ ತರಗತಿ ಮುಗಿಸಿ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ಕೇರಳ ಮೂಲದ, ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಆರೋಪಿಗಳು ತಡೆದು ತಲೆಕೂದಲು ಹಾಗೂ ಮೀಸೆ ತೆಗೆದು ಬರಬೇಕೆಂದು ಜೋರು ಮಾಡಿ ಹಲ್ಲೆಗೈದಿದ್ದರು. ಕೂದಲು ತೆಗೆಯದ ವಿದ್ಯಾರ್ಥಿಯನ್ನು ಜ.12ರಂದು ಮತ್ತೆ ತಡೆದು, ತಾವೇ ಮೀಸೆ-ಕೂದಲು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿ ಪಾಲಕರು ಡಿಸಿಪಿಗೆ ಕರೆ ಮಾಡಿ, ತಮ್ಮ ಮಗ ಏಕಾಏಕಿ ಕಾಲೇಜು ಬಿಟ್ಟು ಬಂದಿದ್ದು ಮತ್ತೆ ಹೋಗಲು ಹಿಂಜರಿಯುತ್ತಿದ್ದಾನೆ. ಆತನ ಹಾಸ್ಟೆಲ್ ಶಿಕ್ಷಣಕ್ಕಾಗಿ ಪಾವತಿಸಿರುವ 2 ಲಕ್ಷ ರೂ. ವಾಪಸ್ ಕೊಡಿಸುವಲ್ಲಿ ಸಹಕರಿಸುವಂತೆ ವಿನಂತಿಸಿದ್ದರು. ಮಾಹಿತಿ ಕಲೆ ಹಾಕಿದಾಗ, ವಿದ್ಯಾರ್ಥಿಗೆ 5-6 ದಿನಗಳ ಕಾಲ ರ‌್ಯಾಗಿಂಗ್ ನಡೆಸಿರುವುದು ತಿಳಿದುಬಂದಿದೆ ಎಂದು ಆಯುಕ್ತರು ತಿಳಿಸಿದರು.
ಇದನ್ನೂ ಓದಿ:ಪಟಾಕಿ ನಿಷೇಧಕ್ಕೆ ಹೈಕೋರ್ಟ್ ಒಲವು: 3 ತಿಂಗಳೊಳಗೆ ತೀರ್ಮಾನಿಸುವಂತೆ ಸರ್ಕಾರಕ್ಕೆ ನಿರ್ದೇಶನ
ಇತರ ನಾಲ್ವರಿಗೂ ಕಿರುಕುಳ:ರ‌್ಯಾಗಿಂಗ್‌ಗೆ ಒಳಗಾಗಿರುವ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ಪಿಜಿಗೆ ಕರೆಸಿಕೊಂಡು ಹಲ್ಲೆ ನಡೆಸಿರುವ ಸಂದರ್ಭ ಅವನ ಜತೆಗಿದ್ದ ಇತರ ನಾಲ್ವರು ಕಿರಿಯ ವಿದ್ಯಾರ್ಥಿಗಳೂ ರ‌್ಯಾಗಿಂಗ್‌ಗೆ ಒಳಗಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಶಶಿಕುಮಾರ್ ಹೇಳಿದರು.
ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ

ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
